Viral Video: ಗಂಡು ಮಗು ಬೇಕೆಂದು 6ನೇ ಬಾರಿಗೆ ಗರ್ಭಿಣಿಯಾದ 22ರ ಯುವತಿ: ಆದ್ರೆ ವೈದ್ಯರು ಹೇಳಿದ್ದೇ ಬೇರೆ!

Published : May 26, 2026, 04:56 PM IST
Viral Video

ಸಾರಾಂಶ

22 ವರ್ಷದ ಯುವತಿಯೊಬ್ಬಳು ಈಗಾಗಲೇ ಐದು ಮಕ್ಕಳ ತಾಯಿ. ನಾಲ್ವರು ಹೆಣ್ಣು ಮತ್ತು ಒಬ್ಬ ಮಗನಿದ್ದರೂ, ಮತ್ತೊಬ್ಬ ಗಂಡು ಮಗುವಿಗಾಗಿ 6ನೇ ಬಾರಿಗೆ ಗರ್ಭಿಣಿಯಾಗಿದ್ದಾಳೆ. ಈ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದು, ವಿಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದ ಸ್ತ್ರೀರೋಗ ತಜ್ಞರೊಬ್ಬರು ಶೇರ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಲ್ಲಿದೆ. ಈ ವಿಡಿಯೋದಲ್ಲಿ 22 ವರ್ಷದ ಯುವತಿಯೊಬ್ಬಳು ತನ್ನ ಪತಿಯೊಂದಿಗೆ ಇದ್ದು, ಈಕೆ ಆರನೇ ಬಾರಿಗೆ ಗರ್ಭಿಣಿಯಾಗಿದ್ದಾಳೆ. ರಾಜಸ್ಥಾನ ಮೂಲದ ಈ ದಂಪತಿಗೆ 15 ವರ್ಷ ವಯಸ್ಸಿದ್ದಾಗಲೇ ಮದುವೆಯಾಗಿದೆ. ಈಗಾಗಲೇ ಇವರಿಗೆ ಐವರು ಮಕ್ಕಳಿದ್ದು, ಅವರಲ್ಲಿ ನಾಲ್ವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾನೆ.

ಆದರೂ, ಮತ್ತೊಬ್ಬ ಗಂಡು ಮಗು ಬೇಕೆಂಬ ಆಸೆಯಿಂದ ಈಕೆ ಮತ್ತೆ ಗರ್ಭ ಧರಿಸಿದ್ದಾಳೆ. ಸ್ಪಂದನ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಪ್ರಗ್ಯಾ ತೋಮರ್, ದಂಪತಿಯ ಒಪ್ಪಿಗೆ ಪಡೆದೇ ಈ ವಿಡಿಯೋವನ್ನು ಪೋಸ್ಟ್ ಮಾಡಿರುವುದಾಗಿ ಹೇಳಿದ್ದಾರೆ."ನನಗೆ ಹುಟ್ಟೋದೆಲ್ಲಾ ಹೆಣ್ಣುಮಕ್ಕಳೇ. ನಮಗೊಬ್ಬ ಮಗನಿದ್ದಾನೆ, ಆದರೆ ಇನ್ನೊಬ್ಬ ಗಂಡು ಮಗು ಬೇಕು" ಎಂದು ಯುವತಿ ವೈದ್ಯರ ಬಳಿ ಹೇಳಿಕೊಂಡಿದ್ದಾಳೆ.

ದೊಡ್ಡ ಚರ್ಚೆ

"ಕುಟುಂಬವನ್ನು ನೋಡಿಕೊಳ್ಳಲು ಮತ್ತು ವಂಶವನ್ನು ಮುಂದುವರಿಸಲು ಒಬ್ಬನೇ ಮಗ ಸಾಕಾಗುವುದಿಲ್ಲ" ಎಂಬುದು ಆಕೆಯ ಪತಿಯ ವಾದ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಕುಟುಂಬವನ್ನು ನೋಡಿಕೊಳ್ಳಲು ಹೆಣ್ಣುಮಕ್ಕಳಿಂದ ಸಾಧ್ಯವಿಲ್ಲ, ಗಂಡು ಮಕ್ಕಳೇ ಬೇಕು ಎಂಬ ಮನಸ್ಥಿತಿ ಇಂದಿಗೂ ಜೀವಂತವಾಗಿರುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

 

ಇಷ್ಟು ಚಿಕ್ಕ ವಯಸ್ಸಿನಲ್ಲಿ ಪದೇ ಪದೇ ಗರ್ಭಿಣಿಯಾಗುವುದರಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರು ದಂಪತಿಗೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ತನಗೆ ಉಸಿರಾಟದ ತೊಂದರೆ, ತಲೆಸುತ್ತು ಮತ್ತು ಮೈಕೈ ನೋವು ಇರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ. ಈ ಲಕ್ಷಣಗಳು ಸಾಮಾನ್ಯವಾಗಿ ಆಯಾಸ, ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬರುತ್ತವೆ. "ನೀವು ನಿಮ್ಮ ಜೀವವನ್ನೇ ಅಪಾಯಕ್ಕೆ ತಳ್ಳುತ್ತಿದ್ದೀರಿ. ಇದು ತಾಯಿ ಮತ್ತು ಮಗು ಇಬ್ಬರಿಗೂ ಅಪಾಯಕಾರಿ" ಎಂದು ವೈದ್ಯರು ದಂಪತಿಗೆ ತಿಳಿಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇರಳ ಲಾಟರಿ ಫಲಿತಾಂಶ: 1 ಕೋಟಿ ಜಾಕ್‌ಪಾಟ್ ಹೊಡೆದ ಅದೃಷ್ಟವಂತ ಯಾರು? ಇಲ್ಲಿದೆ ವಿನ್ನರ್ಸ್ ಲಿಸ್ಟ್
ಹಿಂದೂಗಳಿಗೆ ನೀರಿಲ್ಲದೆ ಹೋಳಿ ಆಚರಿಸಿ ಅಂತೀರಲ್ಲ, ಮುಸ್ಲಿಮರು ಬಕ್ರೀದ್‌ಗೆ ವರ್ಚುವಲ್‌ ಆಗಿ ಕುರಿ ಬಲಿ ಕೊಡಿ: ನಿತೇಶ್‌ ರಾಣೆ