ಅಂಬಾನಿ ಕುಟುಂಬಸ್ಥರು ಕುಡಿಯುವ ಹಾಲು ಎಲ್ಲಿಂದ ಬರುತ್ತೆ ಗೊತ್ತಾ? ಏನಿದರ ವಿಶೇಷತೆ?

Published : Jun 13, 2024, 02:35 PM IST
ಅಂಬಾನಿ ಕುಟುಂಬಸ್ಥರು ಕುಡಿಯುವ ಹಾಲು ಎಲ್ಲಿಂದ ಬರುತ್ತೆ ಗೊತ್ತಾ? ಏನಿದರ ವಿಶೇಷತೆ?

ಸಾರಾಂಶ

ಅಂಬಾನಿ ಕುಟುಂಬ ಮನೆಯಲ್ಲಿ ಅತ್ಯಾಧುನಿಕ ಆಸ್ಪತ್ರೆ ಹಾಗೂ ತಜ್ಞ ವೈದ್ಯರನ್ನು ಹೊಂದಿದ್ದಾರೆ. ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂದು ಆರೋಗ್ಯ ತಜ್ಞರು ನಿರ್ಧರಿಸುತ್ತಾರೆ.

ಮುಂಬೈ: ದೇಶದ ಆಗರ್ಭ ಶ್ರೀಮಂತರಾಗಿರುವ ಮುಖೇಶ್ ಅಂಬಾನಿ (Mukesh Ambani) ತಮ್ಮ ವ್ಯವಹಾರದ ಜೊತೆಯಲ್ಲಿ ಜೀವನಶೈಲಿಯಿಂದ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲಿಯೂ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ (Neeta Ambani) ಧರಿಸುವ ಬಟ್ಟೆ, ಆಭರಣಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅಂಬಾನಿ ಕುಟುಂಬ ವಿಶೇಷವಾಗಿ ಶುದ್ಧೀಕರಿಸಿದ ಹಾಲು ಕುಡಿಯುತ್ತಾರೆ ಎಂದು ವರದಿಯಾಗಿದೆ. ಸದ್ಯ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ (Anant Ambani Wedding) ಮದುವೆ ಸಂಭ್ರಮದಲ್ಲಿದ್ದಾರೆ. ಜುಲೈ 12ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಾಗಲಿದೆ. ಅನಂತ್ ಮತ್ತು ರಾಧಿಕಾ (Anant Ambani - Radhika Merchant Wedding) ವಿವಾಹ ಪೂರ್ವ ಸಮಾರಂಭ ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. ಇನ್ನು ಮದುವೆ ಹೇಗಿರುತ್ತೆ ಎಂದು ನೋಡಲು ಇಡೀ ವಿಶ್ವವೇ ಕಾಯುತ್ತಿದೆ. 

ಅಂಬಾನಿ ಕುಟುಂಬದ ಸದಸ್ಯರು ತಾವು ಸೇವಿಸುವ ಆಹಾರದ ಬಗ್ಗೆ ಅತ್ಯಂತ ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ನೀತಾ ಅಂಬಾನಿ 5 ಸಾವಿರ ರೂಪಾಯಿಗೆ ಸಿಗುವ ಒಂದು ಲೀಟರ್ ಸಿಗುವ ನೀರನ್ನು ಕುಡಿಯುತ್ತಾರೆ ಎಂದು ವರದಿಯಾಗಿದೆ. ಇಷ್ಟು ಮಾತ್ರವಲ್ಲ ಅಂಬಾನಿ ಕುಟುಂಬ ಮನೆಯಲ್ಲಿ ಅತ್ಯಾಧುನಿಕ ಆಸ್ಪತ್ರೆ ಹಾಗೂ ತಜ್ಞ ವೈದ್ಯರನ್ನು ಹೊಂದಿದ್ದಾರೆ. ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂದು ಆರೋಗ್ಯ ತಜ್ಞರು ನಿರ್ಧರಿಸುತ್ತಾರೆ. ಅಂಬಾನಿ ಕುಟುಂಬಕ್ಕಾಗಿ ದುಬಾರಿ ಬೆಲೆಯ ವಿಶೇಷ ಹಾಲು ಬರುತ್ತದೆ. ಇಡೀ ಕುಟುಂಬ ಸದಸ್ಯರು ಇದೇ ಹಾಲನ್ನು ಬಳಸುತ್ತಾರೆ.

ನೀತಾ ಅಂಬಾನಿಯ 500 ಕೋಟಿ ಮೌಲ್ಯದ ಅಭರಣದ ನಕಲು 178 ರೂ.ಗೆ ಮಾರಾಟ! ವೈರಲ್ ಆಯ್ತು ವಿಡಿಯೋ

ಹೋಲ್‌ಸ್ಟೈನ್‌-ಫ್ರೀಸಿಯನ್ ತಳಿಯ ಹಸುವಿನ ಹಾಲು

ಮುಖೇಶ್ ಅಂಬಾನಿ ಕುಟುಂಬಕ್ಕೆ ಪ್ರತಿದಿನ ಪುಣೆ ಡೈರಿ ಫಾರ್ಮ್‌ನಿಂದ ಹಾಲು ಬರುತ್ತದೆ. ಹೋಲ್‌ಸ್ಟೈನ್‌-ಫ್ರೀಸಿಯನ್ ತಳಿಯ ಹಾಲನ್ನು ಅಂಬಾನಿ ಕುಟುಂಬ ಸದಸ್ಯರು ಬಳಕೆ ಮಾಡುತ್ತಾರೆ. ಹೋಲ್‌ಸ್ಟೈನ್‌-ಫ್ರೀಸಿಯನ್ ತಳಿಯ ಹಸುಗಳು ಆರ್‌ಓ ನೀರನ್ನು ಮಾತ್ರ ಕುಡಿಯುತ್ತವೆ ಮತ್ತುಇವುಗಳಿಗೆ ನೀಡುವ ಆಹಾರವೂ ವಿಶೇಷವಾಗಿರುತ್ತದೆ. ಹೋಲ್‌ಸ್ಟೈನ್‌-ಫ್ರೀಸಿಯನ್ ತಳಿಯ ಒಂದು ಹಸು ಪ್ರತಿದಿನ 25 ಲೀಟರ್ ಹಾಲು ನೀಡುತ್ತದೆ. ಪುಣೆಯ 35 ಎಕರೆಯ ವಿಸ್ತಾರದಲ್ಲಿ ಹೋಲ್‌ಸ್ಟೈನ್‌-ಫ್ರೀಸಿಯನ್ ತಳಿಯ ಹಸುಗಳ ಡೈರಿ ಇದೆ. ಅಂಬಾನಿ ಕುಟುಂಬ ಮಾತ್ರವಲ್ಲಿ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್, ಬಿಟೌನ್ ದಿಗ್ಗಜ ಬಚ್ಚನ್ ಕುಟುಂಬ ಸಹ ಇದೇ ಹಸುಗಳ ಹಾಲು ಬಳಸುತ್ತಾರೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ ಹೋಲ್‌ಸ್ಟೈನ್‌-ಫ್ರೀಸಿಯನ್ ತಳಿಯ ಹಸುಗಳು 580 ರಿಂದ 600 ಕೆಜಿ ತೂಕ, 1.5 ಮೀಟರ್ ಎತ್ತರವನ್ನು ಹೊಂದಿರುತ್ತವೆ. ಒಂದು ವರ್ಷಕ್ಕೆ ಸರಾಸರಿ 6,500 ಲೀಟರ್ ಹಾಲನ್ನು ಕೊಡುತ್ತವೆ. ಇದರಲ್ಲಿ ಕೆಲವು ವಿಶೇಷ ತಳಿಯ ಹಸುಗಳು 10 ಸಾವಿರ ಲೀಟರ್‌ವರೆಗೂ ಹಾಲು ಕೊಡುತ್ತವೆ.

ಅನಂತ್ ರಾಧಿಕಾ ಮದುವೆ; ವೈರಲ್ ಆಯ್ತು ಮುಖೇಶ್ ಮತ್ತು ನೀತಾ ಅಂಬಾನಿಯ 1984ರ ಸರಳ ವಿವಾಹದ ಫೋಟೋಗಳು..

ವಿಶೇಷ ನೀರನ್ನು ಕುಡಿಯುತ್ತಾರೆ ನೀತಾ ಅಂಬಾನಿ

ವಯಸ್ಸು 60 ಆದ್ರೂ ಯಾವ ಬಾಲಿವುಡ್ ನಟಿಗಿಂತಲೂ ನೀತಾ ಅಂಬಾನಿ ಕಡಿಮೆ ಇಲ್ಲ ಅನ್ನೋ ರೀತಿ ಕಂಗೊಳಿಸುತ್ತಾರೆ. ನೀತಾ ಅಂಬಾನಿಯ ಸೌಂದರ್ಯದ ಗುಟ್ಟು ಅವರು ಕುಡಿಯುವ ವಿಶೇಷವಾಗಿ ಶುದ್ಧೀಕರಣಗೊಂಡ ನೀರು ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತವೆ. ನೀತಾ ಅಂಬಾನಿ ಕುಡಿಯುವ ಒಂದು ಲೀಟರ್‌ ನೀರಿಗೆ 5 ಸಾವಿರ ರೂಪಾಯಿ ಎಂದು ಹೇಳಲಾಗುತ್ತದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!