ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ದಿನಾಂಕ ಹತ್ತಿರ| ತಮಿಳ್ನಾಡಲ್ಲಿ ಮತ್ತೆ ಡಿಎಂಕೆ ಯುಗಾರಂಭ: ಸಮೀಕ್ಷೆ ಭವಿಷ್ಯ
ನವದೆಹಲಿ(ಮಾ.09) ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ದಿನಾಂಕ ಹತ್ತಿರವಾಗುತ್ತಿರುವ ಬೆನ್ನಲ್ಲೇ, ಟೈಮ್ಸ್ ನೌ, ಸಿ- ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯೊಂದನ್ನು ನಡೆಸಿವೆ. ಸಮೀಕ್ಷೆ ಅನ್ವಯ ತಮಿಳುನಾಡಿನಲ್ಲಿ ಡಿಎಂಕೆ- ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದ ಗದ್ದುಗೆಗೇರಲಿದೆ.
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ 140 ವಿಧಾನಸಭೆ ಕ್ಷೇತ್ರಗಳ ಪೈಕಿ 78-86 ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇವಲ 52-60 ಕ್ಷೇತ್ರಗಳನ್ನು ಗೆಲ್ಲಲಷ್ಟೇ ಶಕ್ತವಾಗಲಿದೆ. ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಈ ಸಲ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ.
undefined
126 ಕ್ಷೇತ್ರಗಳನ್ನು ಹೊಂದಿದ ಅಸ್ಸಾಂನಲ್ಲಿ ಎನ್‌ಡಿಎ ಕೂಟವು 67 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಸರಳ ಬಹುಮತ ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 57 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ.
ಪುದುಚೇರಿ ಒಟ್ಟು ಕ್ಷೇತ್ರಗಳು 30 ಬಹುಮತಕ್ಕೆ 16
ಎನ್‌ಡಿಎ 18
ಯುಪಿಎ 12
ಇತರೆ 1
ಕೇರಳ ಒಟ್ಟು ಕ್ಷೇತ್ರಗಳು 140 ಬಹುಮತಕ್ಕೆ 71
ಎಲ್ಡಿಎಫ್ 76-82
ಯುಡಿಎಫ್ 52-60
ಬಿಜೆಪಿ 0-2
ತಮಿಳುನಾಡು ಒಟ್ಟು ಕ್ಷೇತ್ರಗಳು 234 ಬಹುಮತಕ್ಕೆ 118
ಡಿಎಂಕೆ, ಕಾಂಗ್ರೆಸ್ 158
ಎಐಎಡಿಎಂಕೆ, ಬಿಜೆಪಿ 65