ಕೊರೋನಾಗೆ ಡಿಎಂಕೆ ಶಾಸಕ ಬಲಿ; ಹುಟ್ಟುಹಬ್ಬದಂದೇ ಕೊನೆಯುಸಿರೆಳೆದ ಅನ್ಬಳಗನ್!

By Suvarna News  |  First Published Jun 10, 2020, 9:32 AM IST

ಮಹಾಮಾರಿ ಕೊರೋನಾಗೆ ತಮಿಳುನಾಡಿನ ಪ್ರಭಾವಿ ಶಾಸಕ ಬಲಿ| ಹುಟ್ಟುಹಬ್ಬದಂದೇ ಕೊನೆಯಸಿರೆಳೆದ ಡಿಎಂಕೆ ಶಾಸಕ| 


ಚೆನ್ನೈ(ಜೂ.10): ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಬಡವ ಶ್ರೀಮಂತ ಹೀಗೆ ಎಲ್ಲರನ್ನೂ ಬಾಧಿಸುತ್ತಿರುವ ಈ ಮಹಾಮಾರಿಗೆ ಸದ್ಯ ತಮಿಳುನಾಡಿನ ಡಿಎಂಕೆ ಶಾಸಕ ಬಲಿಯಾಗಿದ್ದಾರೆ.

ತಮಿಳುನಾಡಿನ ಡಿಎಂಕೆ ಶಾಸಕ ಅನ್ಬಳಗನ್ ಬುಧವಾರ ಕೊರೋನಾಗೆ ಬಲಿಯಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶಾಸಕರಿಗೆ ಕೊರೋನಾ ವೈರಸ್ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಕಳೆದೊಂದು ವಾರದಿಂದ ವೆಂಟಿಲೇಟರ್‌ನಲ್ಲಿದ್ದ ಶಾಸಕ ತಮ್ಮ 62ನೇ ಹುಟ್ಟುಹಬ್ಬದಂದೇ ಮೃತಪಟ್ಟಿದ್ದಾರೆ. 

Tap to resize

Latest Videos

ಇನ್ನು ಶುಕ್ರವಾರ ಡಿಎಂಕೆ ನಾಯಕ ಎಂ. ಕೆ ಸ್ಟಾಲಿನ್ ಆಸ್ಪತ್ರೆಗೆ ಭೇಟಿ ನೀಡಿ ಶಾಸಕರ ಆರೋಗ್ಯ ವಿಚಾರಿಸಿದ್ದರು. ತಮಿಳುನಾಡಿನ ಪ್ರಭಾವೀ ಶಾಸಕರಾಗಿ ಗುರುತಿಸಿಕೊಂಡಿದ್ದ ಅನ್ಬಳಗನ್ ಅಗಲುವಿಕೆ ಅವರ ಕುಟುಂಬ ಹಾಗೂ ಡಿಎಂಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.

click me!