
ಚೆನ್ನೈ: ಹಿಂದಿ ಹೇರಿಕೆ ವಿರುದ್ಧ ಡಿಎಂಕೆ ಕಾರ್ಯಕರ್ತರು ಪ್ರತಿಜ್ಞೆ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಪಕ್ಷದ ಕಾರ್ಪೊರೇಟರ್ ಒಬ್ಬರು ಕಾರ್ಯಕರ್ತೆಯ ಬಳೆ ಎಗರಿಸಲು ಯತ್ನಿಸಿದ ಘಟನೆ ನಡೆದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಘಟನೆ 30 ಸೆಕೆಂಡ್‌ಗಳ ವಿಡಿಯೋ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು ‘ಕಳ್ಳರು ಮತ್ತು ಡಿಎಂಕೆಯನ್ನು ಎಂದಿಗೂ ಪ್ರತ್ಯೇಕಿಸಲು ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
ಕಳ್ಳತನಕ್ಕೆ ಯತ್ನಿಸಿದ ಕಾರ್ಪೊರೇಟರ್‌ನ್ನು ಡಿಎಂಕೆಯ ಕುನೂರು ಪುರಸಭೆಯ ಕೌನ್ಸಿಲರ್ ಜಾಕಿರ್ ಹುಸೇನ್ ಎಂದು ಗುರುತಿಸಲಾಗಿದೆ. ಹುಸೇನ್ ಮಹಿಳೆಯೊಬ್ಬರ ಕೈಯಿಂದ ಚಿನ್ನದ ಬಳೆ ತೆಗೆಯಲು ಯತ್ನಿಸಿದ್ದರು. ಈ ವೇಳೆ ಮತ್ತೊಬ್ಬ ಕಾರ್ಯಕರ್ತೆ ಅದನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಹುಸೇನ್ ಮತ್ತೆ ಪ್ರಯತ್ನಿಸಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Bofors scam: ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ನಡೆದಿದ್ದ ಬೊಫೋರ್ಸ್ ಗನ್ ಖರೀದಿ ಹಗರಣಕ್ಕೆ ಮರುಜೀವ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ