* ಸೈನಿಕರೊಂದಿಗೆ ಮೋದಿ ದೀಪಾವಳಿ, ಸೇನಾ ಸಮವಸ್ತ್ರದಲ್ಲಿ ಕಾಣಿಸಿದ ಪ್ರಧಾನಿ
* ಸೇನಾ ಸಮವಸ್ತ್ರ ಧರಿಸಿದ ಮೋದಿಗೆ ಕಾಂಗ್ರೆಸ್ ಪ್ರಶ್ನೆ
* ಸಾಮಾನ್ಯ ನಾಗರಿಕರು ಸೇನಾ ಸಮವಸ್ತ್ರ ಧರಿಸೋದು ಸರಿನಾ?
ನವದೆಹಲಿ(ನ.07): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ದೀಪಾವಳಿಯಂದು ನೌಶೇರಾಗೆ (Nowshera, Jammu and Kashmir) ತೆರಳಿ ಅಲ್ಲಿ ಸೈನಿಕರೊಂದಿಗೆ ಹಬ್ಬ ಆಚರಿಸಿ, ಅವರನ್ನು ಹುರುದುಂಬಿಸಿದ್ದಾರೆ. ಹೀಗಿರುವಾಗ ಪ್ರಧಾನಿ ಮೋದಿ ಸೇನಾ ಸಮವಸ್ತ್ರದಲ್ಲಿ (Army Uniform) ಕಾಣಿಸಿಕೊಂಡಿದ್ದರು. ಆದರೀಗ ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿರುದ ವಿಚಾರ ವಿವಾದಕ್ಕೆ ಕಾರಣವಾಗಿದೆ. ಸಾಮಾನ್ಯ ನಾಗರಿಕರು ಸೇನೆಯ ಉಡುಗೆ ತೊಡಬಹುದೇ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ. ಹೀಗಿರುವಾಗ ಜನ ಸಾಮಾನ್ಯರು ಸೇನಾ ಸಮವಸ್ತ್ರ ಧರಿಸಬಹುದಾ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ಭಾರೀ ಚರ್ಚೆಯಾಗುತ್ತಿದೆ.
ಸೇನಾ ಸಮವಸ್ತ್ರದ ಬಗ್ಗೆ ದಿಗ್ವಿಜಯ್ ಸಿಂಗ್ ಎತ್ತಿರುವ ಪ್ರಶ್ನೆಗಳೇನು?
undefined
ಸಾಮಾನ್ಯ ನಾಗರಿಕರು ಸೇನಾ ಉಡುಗೆ ತೊಡಬಹುದೇ ಎಂದು ದಿಗ್ವಿಜಯ್ ಸಿಂಗ್ (Digvijay Singh) ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಜನರಲ್ ರಾವತ್ ಅಥವಾ ರಕ್ಷಣಾ ಸಚಿವರು ಏನಾದರೂ ಸ್ಪಚಷ್ಟನೆ ನಿಡಬಹುದಾ? ಎಂದೂ ಕೇಳಿದ್ದಾರೆ. ಇದೇ ವೇಳೆ ಈ ಹಿಂದೆ ರಕ್ಷಣಾ ಸಾಮಗ್ರಿಗಳು ಬರಲು ವರ್ಷಗಳೇ ಹಿಡಿಯುತ್ತಿತ್ತು ಆದರೆ ಈಗ ಭಾರತದಲ್ಲಿಯೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿಕೆಗೆ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.
Can any Civilian, a non Army person dress up in Army Uniform? Would Gen Rawat or Raksha Mantri ji please clarify.
It used to take years to get defence equipment earlier: PM in J&K https://t.co/WLnfFXUJby
-via
ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿರುವ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ (Nowshera Sector) ಗುರುವಾರ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಂವಹನ ಸೌಲಭ್ಯಗಳು ಮತ್ತು ಸೇನಾ ನಿಯೋಜನೆಯನ್ನು ಹೆಚ್ಚಿಸಲು ಗಡಿ ಪ್ರದೇಶಗಳಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದರು. ಅಲ್ಲದೇ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಬ್ರಿಗೇಡ್‌ನ ಪಾತ್ರವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದರು.
ಇತರ ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳೂ ಸೇನಾ ಸಮವಸ್ತ್ರವನ್ನು ಧರಿಸುತ್ತಾರೆ
ದೇಶದ ಸೈನಿಕರು ಸೇನಾ ಸಮವಸ್ತ್ರ ಧರಿಸುವುದರಲ್ಲಿ ಎರಡು ಮಾತಿಲ್ಲ. ವಾಹಿನಿಯೊಂದರಲ್ಲಿ ಸುದ್ದಿ ಚರ್ಚೆಯ ವೇಳೆ ನಿವೃತ್ತ ಮೇಜರ್ ಜನರಲ್ ಎಸ್ ಪಿ ಸಿನ್ಹಾ ಅವರು ಮೋದಿ ಸಮವಸ್ತ್ರ ಧರಿಸಿರುವ ವಿಚಾರವಾಗಿ ಮಾತನಾಡುತ್ತಾ, ಮೋದಿ ಸಾಮಾನ್ಯ ಪ್ರಜೆಯಲ್ಲ, ಅವರು ನಮ್ಮ ದೇಶದ ಪ್ರಧಾನಿ ಎಂದು ಹೇಳಿದ್ದಾರೆ. ಅವರು 132 ಕೋಟಿ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಿರುವಾಗ ಸಾಮಾನ್ಯ ನಾಗರಿಕರು ಹೇಗಾಗುತ್ತಾರೆ? ಈ ವಿಚಾರವಾಗಿ ಸೇನಾ ಪ್ರಧಾನ ಕಚೇರಿಯೊಂದಿಗೆ ಚರ್ಚೆಯಲ್ಲಿದ್ದೆ. ಆದರೆ ಅಂತಹ ಯಾವುದೇ ಕಾನೂನು ಇಲ್ಲ ಎಂದು ಎಸ್ಪಿ ಸಿನ್ಹಾ ಹೇಳಿದ್ದಾರೆ. ಪ್ರಪಂಚದ ಇತರ ದೇಶಗಳ ಜನರೂ ಸೇನಾ ಸಮವಸ್ತ್ರವನ್ನು ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷರೂ ಸೇನಾ ಸಮವಸ್ತ್ರ ಧರಿಸುತ್ತಾರೆ. ಚೀನಾ ಅಧ್ಯಕ್ಷರೂ ಮಿಲಿಟರಿ ಯೂನಿಫಾರಂ ಧರಿಸಿಯೇ ಸೇನಾ ಪರೇಡ್‌ನಲ್ಲಿ ಭಾಗವಹಿಸುತ್ತಾರೆ. ಅಲ್ಲದೇ ಎಕೆ ಆಂಟನಿ ರಕ್ಷಣಾ ಸಚಿವರಾಗಿದ್ದಾಗ ಆ ಸಮಯದಲ್ಲಿ ಯುದ್ಧ ಸಮವಸ್ತ್ರದಲ್ಲಿ ಜೆಜೆ ಸಿಂಗ್ ಅವರೊಂದಿಗೆ ಫೋಟೋ ತೆಗೆಸಿಕೊಂಡ ಇದೆ, ಅದರ ಬಗ್ಗೆ ಕಾಂಗ್ರೆಸ್ ಏನು ಹೇಳುತ್ತದೆ ಎಂದು ಎಸ್ಪಿ ಸಿನ್ಹಾ ಕಾಂಗ್ರೆಸ್‌ಗೆ ಪ್ರಶ್ನಿಸಿದ್ದಾರೆ.
ಸಮವಸ್ತ್ರ ಧರಿಸುವ ಬಗ್ಗೆ ಇರುವ ನಿಯಮಗಳೇನು?
ಈ ಸಂಬಂಧ ಗೃಹ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಸಶಸ್ತ್ರ ಪಡೆಗಳ (ಸೇನೆ, ನೌಕಾಪಡೆ, ವಾಯುಪಡೆ) ಅಥವಾ ಇದೇ ರೀತಿಯ ಸಮವಸ್ತ್ರವನ್ನು ಅನಧಿಕೃತವಾಗಿ ಧರಿಸುವವರ ವಿರುದ್ಧ ಐಪಿಸಿಯ ಸೆಕ್ಷನ್ 140 ಮತ್ತು 171 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಮಾಡಬಹುದು. ಆದಾಗ್ಯೂ, ಜನರು ದೇಶಭಕ್ತಿಯನ್ನು ತೋರಿಸಲು ಸೈನಿಕರಂತಹ ಸಮವಸ್ತ್ರವನ್ನು ಧರಿಸುತ್ತಾರೆಂದಾದರೆ, ಅವರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸಚಿವಾಲಯದ ಪರವಾಗಿ ರಾಜ್ಯಗಳ ಕಾರ್ಯದರ್ಶಿಗಳಿಗೆ, ಈ ವಿಷಯವನ್ನು ಹೇಗೆ ಪರಿಗಣಿಸಬೇಕು ಎಂದು ರಾಜ್ಯ ಪೊಲೀಸರು ನೋಡಬೇಕು ಎಂದು ತಿಳಿಸಲಾಗಿದೆ. ನಾಗರಿಕರು ದೇಶಭಕ್ತಿಯ ತೋರಿಸಲೋ ಅಥವಾ ದಾರಿತಪ್ಪಿಸಲು ಸೈನ್ಯದಂತಹ ಸಮವಸ್ತ್ರವನ್ನು ಧರಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು. ಐಪಿಸಿ ಸೆಕ್ಷನ್ 140 ರ ಪ್ರಕಾರ, ಯಾವುದೇ ವ್ಯಕ್ತಿಯು ಸಶಸ್ತ್ರ ಪಡೆಗಳ ಭಾಗವೆಂದು ತೋರಿಸಲು ಬಟ್ಟೆಗಳನ್ನು ಧರಿಸಿದರೆ ಅಥವಾ ಚಿಹ್ನೆಯನ್ನು ಬಳಸಿದರೆ ಮತ್ತು ಸೈನ್ಯ, ನೌಕಾಪಡೆ ಅಥವಾ ವಾಯುಪಡೆ ಅಧಿಕಾರಿಯಂತೆ ಕಂಡುಬಂದರೆ, ಅಂತಹವರಿಗೆ ಒಂದು ಅವಧಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದು ಮೂರು ತಿಂಗಳವರೆಗೆ ವಿಸ್ತರಿಸಬಹುದು ಮತ್ತು 500 ದಂಡವನ್ನು ವಿಧಿಸಬಹುದು.