
ನವದೆಹಲಿ (ಜ.1): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾನ್ಯ ಸಂಸದರಾಗಿದ್ದು, ಅವರ ಸ್ಥಾನಮಾನವನ್ನು ಮಾಧ್ಯಮಗಳು ಹೆಚ್ಚು ಹೈಲೈಟ್ ಮಾಡಬಾರದು ಎಂದು ಪಕ್ಷದ ನಾಯಕ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ. ಲಕ್ಷ್ಮಣ್ ಸಿಂಗ್ ಅವರು ಕಾಂಗ್ರೆಸ್ ಹಿರಿಯ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ಕಿರಿಯ ಸಹೋದರ. ಅವರು ಶನಿವಾರ (ಡಿಸೆಂಬರ್ 30, 2023) ಗುನಾ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಏನಾದರೂ ಮಾತನಾಡುವಾಗ ಅವರ ಮುಖವನ್ನು ಬಹಳ ಕಡಿಮೆ ಬಾರಿ ತೋರಿಸಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ್ ಸಿಂಗ್, ರಾಹುಲ್ ಗಾಂಧಿ ಒಬ್ಬ ಸಾಮಾನ್ಯ ಸಂಸದ. ಅವರು ಪಕ್ಷದ ಅಧ್ಯಕ್ಷರೂ ಕೂಡ ಅಲ್ಲ, ಅವರೊಬ್ಬ ಕಾಂಗ್ರೆಸ್ ಕಾರ್ಯಕರ್ತ. ಇದರ ಹೊರತಾಗಿ ರಾಹುಲ್ ಗಾಂಧಿ ಏನೂ ಅಲ್ಲ' ಎಂದು ಹೇಳಿದ್ದಾರೆ. ನೀವು (ಮಾಧ್ಯಮಗಳು) ರಾಹುಲ್ ಗಾಂಧಿಯನ್ನು ತುಂಬಾ ಹೈಲೈಟ್ ಮಾಡಬಾರದು. ಪಕ್ಷವೂ ಕೂಡ ಅವರನ್ನು ತುಂಬಾ ಹೈಲೈಟ್ ಮಾಡಬಾರದು ಎಂದಿದ್ದಾರೆ.
ರಾಹುಲ್ ಗಾಂಧಿ ಕೇವಲ ಸಂಸದ ಮತ್ತು ಅವರು ಉಳಿದ ಕಾಂಗ್ರೆಸ್ ಸಂಸದರಿಗೆ ಸಮಾನರು ಎಂದು ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. "ಯಾರು ಹುಟ್ಟಿನಿಂದ ದೊಡ್ಡವರು ಎನಿಸಿಕೊಳ್ಳೋದಿಲ್ಲ. ಅವರ ಕಾರ್ಯದಿಂದ ದೊಡ್ಡವರಾಗುತ್ತಾರೆ. ರಾಹುಲ್ ಗಾಂಧಿಯನ್ನು ಅಂತಹ ದೊಡ್ಡ ನಾಯಕ ಎಂದು ಪರಿಗಣಿಸಬೇಡಿ. ನಾನು ಕೂಡ ಅಂಥ ದೊಡ್ಡ ನಾಯಕನಲ್ಲ. ಅವರು ಸಾಮಾನ್ಯ ಸಂಸದ. ನೀವು ಅವರನ್ನು ಹೈಲೈಟ್ ಮಾಡುತ್ತೀರೋ ಇಲ್ಲವೋ ಎಂಬುದು ಮುಖ್ಯವಲ್ಲ." ಐದು ಬಾರಿ ಸಂಸದ ಮತ್ತು ಮೂರು ಬಾರಿ ಶಾಸಕರಾಗಿರುವ ಲಕ್ಷ್ಮಣ್ ಸಿಂಗ್ ಹೇಳಿದರು.
ಅವರ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ಕೇಳಿದಾಗ, ಕಾಂಗ್ರೆಸ್ ನಾಯಕ ಭಾನುವಾರ ಈ ಬಗ್ಗೆ ಮಾತನಾಡಿದ್ದಯ, ಸ್ವತಃ ರಾಹುಲ್ ಗಾಂಧಿ ಅವರೇ ತಾವೊಬ್ಬರು ಪಕ್ಷದ ಕಾರ್ಯಕರ್ತ ಎಂದು ಹೇಳಿದ್ದರು ಎಂದಿದ್ದಾರೆ. ನಾವೆಲ್ಕರೂ ಪಕ್ಷದ ಕಾರ್ಯಕರ್ತರು ಮಾತ್ರ ಎಂದು ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ್ ಸಿಂಗ್ ಅವರು ಗುನಾದ ಚಚೌರಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಬಿಜೆಪಿಯ ಪ್ರಿಯಾಂಕಾ ಪೆಂಚಿ ಅವರಿಂದ 61 ಸಾವಿರಕ್ಕೂ ಅಧಿಕ ಮತಗಳಿಂದ ಪರಾಭವಗೊಂಡಿದ್ದರು.
ಒಂದು ಕಾಲದಲ್ಲಿ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದ ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಅವರು ಲಕ್ಷ್ಮಣ್ ಸಿಂಗ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷವನ್ನು ತಮ್ಮ ಕುಟುಂಬದ ಅಂಗಡಿ ಎಂದು ಎಲ್ಲಿಯ ತನಕ ನಡೆಸಿಕೊಂಡು ಹೋಗುತ್ತಾರೆ ಎಂದು ಪಕ್ಷದವರೇ ಯೋಚಿಸುವ ಸಮಯ ಬಂದಿದೆ ಎಂದಿದ್ದಾರೆ.
ವರದಿಗಾರರ ಡೈರಿ: ರಾಹುಲ್ ಗಾಂಧಿ ನಡೆಸಲಿರುವ ಹೊಸ ಯಾತ್ರೆ ಯಾವುದು ಅಂತ ಸಿದ್ದರಾಮಯ್ಯಗೆ ಗೊತ್ತಿಲ್ವಾ?
''ರಾಹುಲ್ ಗಾಂಧಿ ಕೇವಲ ಸಂಸದ ಎಂದು ಏಕೆ ಹೈಲೈಟ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಸಿಂಗ್ ಹೇಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಅಸಮಾಧಾನ ಇರಬಹುದು. ಮೊದಲು, ಜನರು ತಮ್ಮ ಅಪನಂಬಿಕೆಯನ್ನು ತೋರಿಸಿದರು ಮತ್ತು ಈಗ ಪಕ್ಷದ ಆಂತರಿಕ ಸದಸ್ಯರು ಅದನ್ನೇ ವ್ಯಕ್ತಪಡಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
'ಮಣಿಪುರದಿಂದ ಮುಂಬೈ': ಜನವರಿ 14 ರಿಂದ ಭಾರತ ನ್ಯಾಯ ಯಾತ್ರೆ ಪ್ರಾರಂಭಿಸಲಿರೋ ರಾಹುಲ್ ಗಾಂಧಿ; 6200 ಕಿ.ಮೀ. ಪ್ರವಾಸ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ