ಒಂದು ವರ್ಷದ ಷರತ್ತು ವಿಧಿಸಿ ಅಭಿಜಿತ್ ದೀಪ್ಕೆ ಸೇರಿ ಸೆಜೆಪಿ ನಾಯಕರ ಬಿಡುಗಡೆ ಮಾಡಿದ ಕೋರ್ಟ್

Published : Oct 11, 2026, 11:13 AM IST
cjp leaders abhijit dipke detained delhi jantar mantar cec protest updates 2026

ಸಾರಾಂಶ

ಸಿಜೆಪಿ ಪ್ರತಿಭಟನೆಗೂ ಮೊದಲೇ ಅಭಿಜಿತ್ ದೀಪ್ಕೆ ಸೇರಿದಂತೆ ಮೂವರು ಸಿಜೆಪಿ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಕೋರ್ಟ್ ಮೂವರಿಗೆ ಷರತ್ತು ವಿಧಿಸಿ ಬಿಡುಗಡೆ ಮಾಡಿದೆ.

ನವದೆಹಲಿ (ಅ.11) ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯನ್ನು ದೆಹಲಿ ಪೊಲೀಸರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪ್ರತಿಭಟನೆಗೂ ಮೊದಲೇ ಸಿಜೆಪಿ ನಾಯಕರನ್ನು ವಶಕ್ಕೆ ಪಡೆಯಲಾಗಿತ್ತು. ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಆಶುತೋಶ್ ರಾಂಕ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಮುನ್ನಚ್ಚೆರಿಕಾ ಕ್ರಮವಾಗಿ ಅರೆಸ್ಟ್ ಮಾಡಿದ ಮೂವರು ನಾಯಕರನ್ನು ಇಂದು ಬೆಳಗ್ಗೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಲಾಗಿದೆ. ಈ ವೇಳೆ ಮೂವರಿಗೆ ಕೋರ್ಟ್ ಷರತ್ತು ವಿಧಿಸಿ ಬಿಡುಗಡೆ ಮಾಡಿದೆ.

ಶಾಂತಿ ಭಂಗ ಮಾಡಿದರೆ ಅರೆಸ್ಟ್

ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಪ್ರತಿಭಟನೆಗೆ ಅನುಮತಿ ನಿರಾಕರಣೆ ಹಿನ್ನಲೆಯಲ್ಲಿ ಜಂತರ್ ಮಂತರ್‌ನಲ್ಲಿ ಹೈಡ್ರಾಮ ಸೃಷ್ಟಿಯಾಗಿತ್ತು. ದೆಹಲಿಯಲ್ಲಿ ಸಿಜೆಪಿ ನಾಯಕರು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಮೂವರು ಪ್ರಮುಖ ನಾಯಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆದರೆ ಮುಂದಿನ ಒಂದು ವರ್ಷ ಶಾಂತಿ ಭಂಗ ಮಾಡಿದರೆ ಅರೆಸ್ಟ್ ಆಗಲಿದ್ದಾರೆ.

ಒಂದು ವರ್ಷದ ಕಂಡೀಷನ್

ಸಿಜೆಪಿ ನಾಯಕರ ಬಿಡುಗಡೆ ಕುರಿತು ಸಿಜೆಪಿಯ ಕಾನೂನು ಮುಖ್ಯಸ್ಥೆ ರತ್ನಾ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಸಿಜೆಪಿ ನಾಯಕರಿಗೆ ಷರತ್ತು ವಿಧಿಸಿ ಬಿಡುಗಡೆ ಮಾಡಲಾಗಿದೆ. ಒಂದು ವರ್ಷ ಕಾಲ ಯಾವುದೇ ಶಾಂತಿ ಭಂಗ ಮಾಡದಂತೆ ಸೂಚಿಸಿಲಾಗಿದೆ ಎಂದು ರತ್ನಾ ಸಿಂಗ್ ಹೇಳಿದ್ದಾರೆ. ಇಂದು (ಅ.11) ಮಧ್ಯಾಹ್ನ 2 ಗಂಟೆಗೆ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಸೇರಿದಂತೆ ಪ್ರಮುಖ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ರತ್ನಾ ಸಿಂಗ್ ಹೇಳಿದ್ದಾರೆ.

ಮುನ್ನೆಚ್ಚೆರಿಕಾ ಕ್ರಮವಾಗಿ ಅರೆಸ್ಟ್

ಸಿಜೆಪಿ ನಾಯಕರನ್ನು ವಿಮಾನದ ಒಳಗಿನಿಂದಲೇ ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆದಿದ್ದು ಮಾತ್ರವಲ್ಲ, ಮುನ್ನೆಚ್ಚೆರಿಕಾ ಕ್ರಮವಾಗಿ ಅರೆಸ್ಟ್ ಮಾಡಲಾಗಿತ್ತು. ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಶ್ ರಂಗಾ ವಿರುದ್ದ ಬಿಎನ್ಎಸ್ ಸೆಕ್ಷನ್ 126 ಹಾಗೂ 170 ಚಾರ್ಜ್ ಮಾಡಲಾಗಿತ್ತು.

ಸಿಜೆಪಿ ಪ್ರತಿಭಟನೆಗೆ ದೆಹಲಿ ಪೊಲೀಸರು ಅವಕಾಶ ನೀಡದ ಕಾರಣ ಆಮ್ ಆದ್ಮಿ ಪಾರ್ಟಿ ನಾಯಕರು, ಕೇರಳ ಕಾಂಗ್ರೆಸ್ ಹಾಗೂ ಸಿಪಿಎಂ ನಾಯಕರು ದಿಲ್ಲಿಯಲ್ಲಿ ಭಾರಿ ಹೈಡ್ರಾಮ ನಡೆಸಿದ್ದಾರೆ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್, ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಮುಖರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಒಟ್ಟು 3000ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಿಜೆಪಿ ಪ್ರತಿಭಟನೆಗೆ ಭಾಗಿಯಾದ ಭಾರತ ಮೂಲದ ಜರ್ಮನ್ ಯೂಟ್ಯೂಬರ್ ಧ್ರುವ್ ರಾಠಿ, ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೊದಲೇ ಅರೆಸ್ಟ್ ಮಾಡಲಾಗಿತ್ತು. ದ್ರುವ್ ರಾಠಿಯನ್ನು ಗುರುಗಾಂವ್‌ನಲ್ಲಿ ಅರೆಸ್ಟ್ ಮಾಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ನನಗೆ ಇಂಗ್ಲಿಷ್‌ ಬರಲ್ಲ ಎಂದುಕೊಂಡರು!’ ಸೀರೆ ಉಟ್ಟಿದ್ದಕ್ಕೆ ಎದುರಾದ ಅನುಭವ ಬಿಚ್ಚಿಟ್ಟ ಸುಧಾ ಮೂರ್ತಿ
‘ಕೆಲಸವೇ ಜೀವನವಲ್ಲ!’ ತಡರಾತ್ರಿವರೆಗೂ ಕೆಲಸ ಬಿಟ್ಟು ಕುಟುಂಬಕ್ಕೆ ಸಮಯ ನೀಡಿ: ವಜಾಗೊಂಡ ಉದ್ಯೋಗಿಯ ಸಂದೇಶ ವೈರಲ್!