
ನವದೆಹಲಿ(ಮಾ.03): ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿಗೀಡು ಮಾಡುವ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಇಲ್ಲಿ ಹನನ್ನೆರಡಣೆ ಮಹಡಿಯಿಂದ ಎರಡು ವರ್ಷದ ಮಗುವನ್ನು ಡೆಲಿವರಿ ಬಾಯ್ ದೇವರಂತೆ ಬಂದು ರಕ್ಷಿಸಿದ್ದಾರೆ. ಈ ವಿಡಿಯೋ ಬಳಿಕ ಜನರು ಡೆಲಿವರಿ ಬಾಯ್‌ಯನ್ನು ಸೂಪರ್ ಮ್ಯಾನ್ ಎಂದು ಕರೆಯಲಾರಂಭಿಸಿದ್ದಾರೆ.
ಡೆಲಿವರಿ ಬಾಯ್ ಟ್ರಕ್‌ನಲ್ಲಿ ಕುಳಿತು ತಾನು ತಂದಿದ್ದ ಪಾರ್ಸೆಲ್ ಡೆಲಿವರಿ ಮಾಡಲು ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಹೀಗೆ ಟ್ರಕ್‌ನಲ್ಲಿ ಕುಳಿತಿದ್ದ ಯುವಕ ಮಗುವೊಂದು ಬಾಲಗ್ಕನಿಯಲ್ಲಿ ನೆತಾಡುತ್ತಿರುವುದನ್ನು ಕಂಡಿದ್ದಾರೆ. ಕೂಡಲೇ ಗಾಡಿಯಿಂದ ಇಳಿದು ಕಟ್ಟಡದತ್ತ ದೌಡಾಯಿಸಿದ್ದಾರೆ. ಅತ್ತ ಮಗು ಮೇಲಿಂದ ಕೆಳಗೆ ಬೀಳುತ್ತಿದ್ದಂತೆಯೇ ಇತ್ತ ಡೆಲಿವರಿ ಬಾಯ್ ಓಡಿ ಹೋಗಿ ಆ ಕಂದನನ್ನು ಕಾಪಾಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಯುವಕ, ಅದೃಷ್ಟವಶಾತ್ ಆ ಕಂದ ನನ್ನ ಮಡಿಲಿಗೆ ಬಿತ್ತು ಎಂದಿದ್ದಾರೆ. ಇನ್ನು ಮಗುವಿನ ಮೂಗಿನಿಂದ ರಕ್ತ ಸುರಿದಿದ್ದು, ಕೂಡಲೇ ಆ ಕಂದನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಮಗು ಬಿದ್ದ ಕಟ್ಟಡ 164 ಸಡಿ ಎತ್ತರವಿತ್ತು. ಒಂದು ವೇಳೆ ಆ ಯುವಕ ಸ್ಥಳಕ್ಕರೆ ಸೂಕ್ತ ಸಮಯಕ್ಕೆ ತಲುಪಿರದಿದ್ದರೆ, ಮಗು ಬದುಕುಳಿಯುತ್ತಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ