ಈಕೆ ತನ್ನ ತಾಯಿಯ ಮನೆಯಲ್ಲೇ ತಂಗಿಗಾಗಿ ಮಾಡಿಸಿಟ್ಟ ಆಭರಣ ದೋಚಿದ್ದಾಳೆ. ಸಾಲದೆಂಬಂತೆ ಕಳ್ಳತನದ ವಿಷಯ ಕೇಳಿ ಆತಂಕ ವ್ಯಕ್ತಪಡಿಸಿದ್ದಾಳೆ. ಕಡೆಗೆ ಸಿಸಿಟಿವಿ ನೆರವಿನಿಂದ ಪೋಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಇಷ್ಟಕ್ಕೂ ಈಕೆ ತನ್ನ ಮನೆಯಲ್ಲೇ ಕಳ್ಳತನ ಮಾಡಿದ ಕಾರಣವೇನು ಗೊತ್ತಾ?
ದೆಹಲಿಯ ಮಹಿಳೆಯೊಬ್ಬಳು ತನ್ನದೇ ಮನೆಗೆ ಬುರ್ಖಾ ಧರಿಸಿ ಕಳ್ಳಿಯಂತೆ ನುಗ್ಗಿ, ಲಕ್ಷಾಂತರ ಮೌಲ್ಯದ ಆಭರಣಗಳನ್ನು ದೋಚಿ ಪೋಲೀಸರ ಕೈಲಿ ಸಿಕ್ಕಿಬಿದ್ದಿದ್ದಾಳೆ.
ಜನವರಿ 30ರಂದು ದೆಹಲಿಯ ಉತ್ತಮ್ ನಗರದಲ್ಲಿರುವ ತನ್ನ ಮನೆಯಲ್ಲಿ ದರೋಡೆ ನಡೆದಿರುವ ಬಗ್ಗೆ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ತನಿಖೆಯಿಂದ ಆಕೆಯ ಹಿರಿಯ ಮಗಳೇ ಕಳ್ಳಿ ಎಂಬುದು ಬಹಿರಂಗವಾಗಿದೆ.
undefined
ಜನವರಿ 30ರಂದು ಮಧ್ಯಾಹ್ನ 2 ರಿಂದ 2:30ರ ನಡುವೆ ತನ್ನ ಮನೆಯಲ್ಲಿದ್ದ ಲಕ್ಷ ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ₹25,000 ನಗದನ್ನು ಕಳವು ಮಾಡಲಾಗಿದೆ ಎಂದು ಕಮಲೇಶ್ ಎಂಬುವವರು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೋಲೀಸರು ಕಮಲೇಶ್ ಪುತ್ರಿಯನ್ನೇ ಬಂಧಿಸಿದ್ದಾರೆ.
ಸಿಕ್ಕಿ ಬಿದ್ದಿದ್ದು ಹೀಗೆ..
ಪೋಲೀಸರು ತನಿಖೆ ಪ್ರಾರಂಭಿಸಿದಾಗ ಮನೆಗೆ ಬಲವಂತದ ಪ್ರವೇಶದ ಯಾವುದೇ ಚಿಹ್ನೆಗಳು ಕಂಡುಬಂದಿಲ್ಲ. ಮನೆಯ ಮುಖ್ಯ ಬಾಗಿಲು ಮತ್ತು ಬೀರುಗಳ ಬೀಗಗಳು ಹಾಗೇ ಇರುವುದು ಕಂಡುಬಂದಿದೆ.ನಂತರ ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಮೂಲಕ ಜಾಲಾಡಿದಾಗ ಮಹಿಳೆಯೊಬ್ಬಳು ಬುರ್ಖಾ ಧರಿಸಿ ಮನೆಗೆ ಅನುಮಾನಾಸ್ಪದವಾಗಿ ಪ್ರವೇಶಿಸುವುದನ್ನು ಪೋಲೀಸರು ಗಮನಿಸಿದ್ದಾರೆ. ಕಡೆಗೆ ಹೆಚ್ಚಿನ ತನಿಖೆಯಲ್ಲಿ ಆ ಬುರ್ಖಾದೊಳಗಿದ್ದುದು ಅದೇ ಮನೆಮಗಳು ಶ್ವೇತಾ ಎಂಬುದು ಪತ್ತೆಯಾಗಿದೆ.
ಸಾನಿಯಾ ಮಿರ್ಜಾ ಮಗನಿಗೆ ಶಾಲೆಯಲ್ಲಿ ಕಿರುಕುಳ; ತಂದೆಯ ಮೂರನೇ ಮದುವೆ ಕಾರಣ
ಅಸೂಯೆ ಮತ್ತು ಹೊಟ್ಟೆಕಿಚ್ಚು ಕಾರಣ!
31 ವರ್ಷದ ಶ್ವೇತಾಗೆ ತವರು ಮನೆಯಲ್ಲಿ ತಂದೆ ತಾಯಿ ತನಗಿಂತ ತಂಗಿಯನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಅಸೂಯೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಆಕೆ, ತಂಗಿಯ ಮದುವೆಗಾಗಿ ತಂದೆ ತಾಯಿ ಮಾಡಿಸಿಟ್ಟ ಒಡವೆಯನ್ನು ಕದ್ದಿದ್ದಾಗಿ ತನಿಖೆ ವೇಳೆ ಬಾಯಿ ಬಿಟ್ಟಿದ್ದಾಳೆ!
ಆಕೆಯ ತಾಯಿ ತನ್ನ ತಂಗಿಯನ್ನು ಹೆಚ್ಚು ಪ್ರೀತಿಸುತ್ತಿದ್ದರಿಂದ ಈ ಕಳ್ಳತನಕ್ಕೆ ಯೋಜನೆ ರೂಪಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸೂಯೆ ಮತ್ತು ದ್ವೇಷದ ಭಾವನೆಗಳ ಜೊತೆ ತಾನು ಮಾಡಿಕೊಂಡಿದ್ದ ಸಾಲವೂ ಕಾರಣವಾಗಿದೆ. ತನ್ನ ಬಾಕಿಯನ್ನು ತೀರಿಸಲು ಈ ವಿಸ್ತೃತ ಯೋಜನೆಯನ್ನು ರೂಪಿಸಿರುವುದಾಗಿ ಶ್ವೇತಾ ಪೊಲೀಸರಿಗೆ ತಿಳಿಸಿದ್ದಾರೆ.
ನಂತರ ಅವಳು ದರೋಡೆಯ ದಿನದವರೆಗೆ ಹೇಗೆ ನಿಧಾನವಾಗಿ ಯೋಜನೆ ರೂಪಿಸಿದಳು ಎಂಬುದನ್ನು ಪೋಲೀಸರಿಗೆ ಬಹಿರಂಗಪಡಿಸಿದ್ದಾಳೆ.
ಪೊಲೀಸರ ಪ್ರಕಾರ, ಶ್ವೇತಾ ತನ್ನ ತಾಯಿಯ ಮನೆಗೆ ಜನವರಿಯಲ್ಲಿ ಮೊದಲ ಬಾರಿಗೆ ಪ್ಲಾನ್ ಮಾಡಲು ತೆರಳಿದ್ದಳು. ಕೆಲವು ದಿನಗಳವರೆಗೆ, ಕಮಲೇಶ್ ತನ್ನ ಹಿರಿಯ ಮಗಳಿಗೆ ಹೊಸ ಮನೆಯನ್ನು ಜೋಡಿಸಿಕೊಳ್ಳಲು ಸಹಾಯ ಮಾಡುವ ಸಲುವಾಗಿ ಕಿರಿಯ ಮಗಳು ಕೆಲಸಕ್ಕೆ ಹೋದ ಮೇಲೆ ಶ್ವೇತಾಳ ಮನೆಗೆ ಬರುತ್ತಿದ್ದಳು. ಶ್ವೇತಾ ಇದರ ಲಾಭ ಪಡೆದು ತಾಯಿ ತನ್ನ ಮನೆಗೆ ಬಂದಾಗ ತಾನು ತವರು ಮನೆಗೆ ಹೋಗುತ್ತಿದ್ದಳು. ಹೀಗೆ ಶ್ವೇತಾ ಮೊದಲು ತನ್ನ ತಾಯಿಯ ಮನೆಯ ಕೀಗಳನ್ನು ಕದ್ದಿಟ್ಟುಕೊಂಡಳು. ನಂತರ ಕಳ್ಳತನ ಮಾಡುವ ದಿನ ತರಕಾರಿ ಖರೀದಿಸುವ ನೆಪದಲ್ಲಿ ತನ್ನ ಹೊಸ ಮನೆಯಿಂದ ಹೊರಬಂದಳು.
ಅಬ್ಬರೆ! ಸೋನಂ ಕಪೂರ್‌ಳ 173 ಕೋಟಿ ರೂ. ಬೆಲೆಯ ದೆಹಲಿ ಬಂಗಲೆ ಎಂಥ ಅದ್ಭುತವಾಗಿದೆ ನೋಡಿ
ನಂತರ ಬುರ್ಖಾ ಧರಿಸಲು ಸಾರ್ವಜನಿಕ ಶೌಚಾಲಯಕ್ಕೆ ಹೋದ ಆಕೆ ಅಲ್ಲಿಂದ ತನ್ನ ತಾಯಿಯ ಮನೆಗೆ ತಲುಪಿದಳು. ಅಲ್ಲಿ ಅವಳು ಮುಖ್ಯ ಬಾಗಿಲು ಮತ್ತು ಬೀರು ಲಾಕರ್ ಅನ್ನು ಕೀಲಿಯೊಂದಿಗೆ ತೆರೆದು ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಓಡಿಹೋದಳು.
ದರೋಡೆಯ ವಿಷಯ ತಿಳಿದ ಕಮಲೇಶ್ ಮಗಳಿಗೆ ತಿಳಿಸಿದಾಗ, ಶ್ವೇತಾ ಆತಂಕ ಮತ್ತು ಅಸಮಾಧಾನವನ್ನು ನಟಿಸಿದ್ದಾಳೆ. ಯಾರೂ ತನ್ನನ್ನು ಅನುಮಾನಿಸುವುದಿಲ್ಲ ಎಂದು ಅವಳು ಭಾವಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ವೇತ ತಾನು ಕದ್ದ ಆಭರಣಗಳನ್ನು ಮಾರಾಟ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಳು. ಆದರೆ, ಪೊಲೀಸರು ಅವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.