ಮದುವೆ ಮುಚ್ಚಿಟ್ಟು ಬಾಯ್‌ಫ್ರೆಂಡ್‌ನ ಪ್ರೀತಿ ನಾಟಕ, ನೈಸ್ ಆಗಿ ಕರೆದು ಮರ್ಮಾಂಗ ಕತ್ತರಿಸಿದ ಯುವತಿ

Published : Feb 27, 2026, 11:43 PM IST
Delhi Police

ಸಾರಾಂಶ

ಮದುವೆ ಮುಚ್ಚಿಟ್ಟು ಬಾಯ್‌ಫ್ರೆಂಡ್‌ನ ಪ್ರೀತಿ ನಾಟಕ, ಗೆಳೆಯ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ಗೊತ್ತಿಲ್ಲದೆ ನಿದ್ದೆ ಮಾತ್ರೆ ನೀಡಿ ಮರ್ಮಾಂಗದ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. 

ನವದೆಹಲಿ (ಫೆ.27) ಪ್ರೀತಿ ಹೆಸರಲ್ಲಿ ಮೋಸ ಪ್ರಕರಣಗಳು ಪ್ರತಿ ದಿನ ವರದಿಯಾಗುತ್ತದೆ. ಸುಳ್ಳು ಹೇಳಿ ಪ್ರೀತಿ ಮಾಡಿ ಬಳಿಕ ಸಿಕ್ಕಿಬಿದ್ದಾಗ ಸಿಗುವ ತಿರುಗೇಟು ಹಲವು ಬಾರಿ ಊಹೆಗೂ ನಿಲುಕುವುದಿಲ್ಲ. ಬಹುತೇಕ ಸಂದರ್ಭದಲ್ಲಿ ಈ ರೀತಿಯ ಮೋಸ, ವಂಚನೆ ಪ್ರೀತಿಗಳು ನೋವಿನಲ್ಲೇ ಕರಗಿಹೋಗುತ್ತದೆ. ಇದೀಗ ತಾನು ಡಾಕ್ಟರ್ ಎಂದು ಯುವತಿ ಜೊತೆ ಸ್ನೇಹ ಬೆಳೆಸಿದ್ದಾನೆ. ಸ್ನೇಹ ಪರಿಚಯಕ್ಕೆ ತಿರುಗಿ ಪ್ರೀತಿಯಾಗಿದೆ. ಆದರ ಈ ಚಾಲಕಾಗಿ ಮೊದಲೇ ಮದುವೆಯಾಗಿ ಸಂಸಾರವೂ ಇದೆ. ಇದನ್ನೆಲ್ಲಾ ಮುಚ್ಚಿಟ್ಟು ಯುವತಿ ಜೊತೆ ಸುತ್ತಾಟ ಶುರುಮಾಡಿ ಎಲ್ಲವನ್ನೂ ಪಡೆದುಕೊಂಡಿದ್ದಾನೆ. ತನು ಮನ ದೇಹ ಎಲ್ಲವನ್ನೂ ಕೊಟ್ಟ ಬಳಿಕ ತಾನು ಮೋಸಹೋಗಿದ್ದೇನೆ ಎಂದು ಗೊತ್ತಾಗುತ್ತಿದ್ದಂತೆ ಬಾಯ್‌ಫ್ರೆಂಡ್ ಮರ್ಮಾಂಗದ ಮೇಲೆ ದಾಳಿ ಮಾಡಿದ ಘಟನೆ ದೆಹಲಿಯ ವಾಜಿರಾಬಾದ್‌ನಲ್ಲಿ ನಡೆದಿದೆ.

ಎರಡು ವರ್ಷದಿಂದ ಪ್ರೀತಿ

22ರ ಹರೆಯದ ವಿಸರ್ಜಿತ್ ಹೆಸರನಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದ ಈತ ವೈದ್ಯ ಎಂದು ಹೇಳಿಕೊಂಡಿದ್ದ. ಆಕೆ ವೃತ್ತಿಯಿಂದ ಮನೆಗೆ ಮರಳುತ್ತಿದ್ದ ವೇಳೆ ತಾನೂ ಡ್ಯೂಟಿಯಿಂದ ಮರಳುತ್ತಿರುವುದಾಗಿ ಬಿಂಬಿಸಿ ಆಕೆಯನ್ನು ಭೇಟಿಯಾಗುತ್ತಿದ್ದ. ಹೀಗೆ ವಾರಕ್ಕೆ ಒಂದು ಬಾರಿ, ಎರಡು ಬಾರಿ ಕಾಣ ಸಿಗುತ್ತಿದ್ದ ಈ ಚಾಲಾಕಿ ಬಳಿಕ ಪ್ರತಿ ದಿನ ಹಾಜರಾಗುತ್ತಿದ್ದ. ಹೀಗಾಗಿ ಇವರ ಪರಿಚಯ ಸ್ನೇಹವಾಗಿ ಮಾರ್ಪಟ್ಟಿತ್ತು. ಬಳಿಕ ಪ್ರೀತಿಯಾಗಿ ತಿರುಗಿತ್ತು. ಕಳೆದ 2 ವರ್ಷಗಳಿಂದ ಇವರ ಪ್ರೀತಿ ಸಾಗಿತ್ತು.

ಪ್ರವಾಸಿ ತಾಣಗಳಿಗೆ ಟ್ರಿಪ್

ಸಂಬಂಧ ಪ್ರೀತಿಯಾಗಿ ಗಟ್ಟಿಗೊಳ್ಳುತ್ತಿದ್ದಂತೆ ಟ್ರಿಪ್ ಶುರುವಾಗಿತ್ತು. ಒಂದು ದಿನದಲ್ಲಿ ಮರಳುತ್ತಿದ್ದ ಟ್ರಿಪ್ ಎರಡು ದಿನಕ್ಕೆ ವಿಸ್ತರಣೆಯಾಗಿತ್ತು. ಈ ವೇಳೆ ಹೊಟೆಲ್ ರೂಂಗಳಲ್ಲಿ ತಂಗುವ ಸಂದರ್ಭದಲ್ಲಿ ಮಿಲನವೂ ನಡೆದಿತ್ತು. ಪ್ರೀತಿ ಜೊತೆಗೆ ಮಂಚದ ಸರಸ ಸಮಾನ್ಯವಾಯಿತು. ಹೀಗೆ ಕಳೆದ 2 ವರ್ಷದಿಂದ ಸಮಸ್ಯೆ ಇಲ್ಲದೆ ಸಾಗಿತ್ತು. ಮದುವೆ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ಚಾಲಕಿ ಗೆಳೆಯ ಕಾರಣ ನೀಡಿ ಮುಂದೂಡುತ್ತಿದ್ದ. ಸಮಸ್ಯೆಗಳನ್ನು ಹೇಳಿ ದಾರಿ ತಪ್ಪಿಸುತ್ತಿದ್ದ.

ಮದುವೆ ಮುಂದೂಡುತ್ತಿದ್ದಂತೆ ಯುವತಿಗೆ ಅನುಮಾನ ಬರತೊಡಗಿದೆ. ಹೀಗಾಗಿ ಆತನಿಗೆ ಗೊತ್ತಲಿದ್ದಂತೆ ಹಿಂಬಾಸಿಲು ಆರಂಭಿಸಿದ್ದಳು.ಆತನ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದ್ದಳು. ಈ ವೇಳೆ ಸತ್ಯ ಗೊತ್ತಾಗಿತ್ತು. ಆತನಿಗೆ ಮೊದಲೇ ಮದುವೆಯಾಗಿ ಸಂಸಾರವಿದೆ. ತನ್ನ ಜೊತೆ ಮಜಾ ಉಡಾಯಿಸಿದ್ದಾನೆ ಅನ್ನೋದು ಗೊತ್ತಾಗಿದೆ. ಆಕ್ರೋಶ , ಸಿಟ್ಟು, ನೋವು ತಡೆಯಲು ಸಾಧ್ಯವಾಗಿಲ್ಲ. ಇದೇ ಸಿಟ್ಟಿನಲ್ಲಿ ಬಾಯ್‌ಫ್ರೆಂಡ್‌ ಜೊತೆ ಉಳಿದುಕೊಳ್ಳಲು ಬಯಸಿದ್ದಾಳೆ. ಎಲ್ಲಾ ತಯಾರಿಯೊಂದಿಗೆ ತೆರಳಿದ್ದ ಈಕೆ, ರಾತ್ರಿ ವೇಳೆ ಆಹಾರ ಸವಿದ ಬಳಿಕ ನಿದ್ದೆ ಮಾತ್ರೆ ಕರಗಿಸಿ ಜ್ಯೂಸ್‌ನಲ್ಲಿ ಹಾಕಿ ಕೊಟ್ಟಿದ್ದಾಳೆ.

ಜ್ಯೂಸ್ ಕುಡಿದ ಬಾಯ್‌ಫ್ರೆಂಡ್‌ಗೆ ಗಾಢ ನಿದ್ದೆ ತಲೆಗೆ ಹತ್ತಿದೆ. ಮುಂಜಾನೆ ವೇಳೆಗೆ ರೆಡಿ ಮಾಡಿ ತಂದಿದ್ದ ಚಾಕುವಿನಿಂದ ಮರ್ಮಾಂಗದ ಮೇಲೆ ದಾಳಿ ಮಾಡಿದ್ದಾಳೆ. ತೀವ್ರ ನೋವಿನಿಂದ ಕಿರುಚಾಡಿದ್ದಾನೆ. ಆದರೆ ನಿದ್ದೆ ಮಂಪರಿನಿಂದ ಸಹಾಯಕ್ಕಾಗಿ ಕೂಗುವಷ್ಟು ಕಿರುಚಾಡಲು ಸಾಧ್ಯವಾಗಿಲ್ಲ. ದಾಳಿ ಮಾಡಿದ ಬೆನ್ನಲ್ಲೇ ಯುವತಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ಇತ್ತ ಗಂಭೀರವಾಗಿ ಗಾಯಗೊಂಡ ಈತನನ್ನು ಆಸ್ಪತ್ರೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಿಯುಸಿಯಲ್ಲಿ 96% ಅಂಕ, IIT ಟಾಪರ್ ಆಗಿದ್ದ ಕೇಜ್ರಿವಾಲ್ ಪುತ್ರ ಈಗ ಎಲ್ಲಿದ್ದಾರೆ?
Kejriwal Case: ಬಿಜೆಪಿಯ ಆಟ ನಡೆಯಲ್ಲ ಅಂತ ಕೇಜ್ರಿವಾಲ್ ಪ್ರೂವ್ ಮಾಡಿದ್ದಾರೆ: ಆದಿತ್ಯ ಠಾಕ್ರೆ ಮೆಚ್ಚುಗೆ