
ನವದೆಹಲಿ[ಫೆ.27]: ಅತ್ತ ಸಿಎಎ ಪರ ಹಾಗೂ ವಿರೋಧಿಗಳ ನಡುವಿನ ಕಾದಾಟದಿಂದ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹೀಗಿರುವಾಗ ರಾಜಕೀಯ ನಾಯಕರು ವಾಗ್ದಾಳಿ ನಡೆಸುವುದರಲ್ಲಿ ತಲ್ಲೀನರಾಗಿದ್ದಾರೆ. ಈ ನಡುವೆ ಬಿಜೆಪಿ ಕಪಿಲ್ ಮಿಶ್ರಾ ಪ್ರಚೋದನಕಾರಿ ಹೇಳಿಕೆಯಿಂದ ಈ ಹಿಂಸಾಚಾರ ಭುಗಿಲೆದ್ದಿದೆ ಎಂಬ ಆರೋಪ ಕೇಳಿ ಬಂದಿದ್ದು, ಕಾಂಗ್ರೆಸ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ಹೀಗಿರುವಾಗಲೇ ಆಪ್ ನಾಯಕನ ಮನೆಯಲ್ಲಿ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಗಳು ಪತ್ತೆಯಾಗಿರುವುದು ತೀವ್ರ ಸಂಚಲನವುಂಟು ಮಾಡಿದೆ. ಆದರೀಗ ಇವೆರಡನ್ನು ಹೊರತುಪಡಿಸಿ ತಾಹೀರ್ ಮನೆಯಲ್ಲಿ ಮತ್ತೊಂದು ವಸ್ತು ಪತ್ತೆಯಾಗಿದೆ.
ಹೌದು ದೆಹಲಿ ಹಿಂಸಾಚಾರ ಸದ್ಯ ರಾಜಕೀಯ ರೂಪ ಪಡೆದಿದೆ. ಎಲ್ಲಾ ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ನಡೆಸುವುದರಲ್ಲಿ ತಲ್ಲೀನರಾಗಿದ್ದಾರೆ. ಇತ್ತ ಆಪ್ ನಾಯಕ ತಾಹೀರ್ ಹುಸೇನ್ ಮನೆಯಲ್ಲಿ ಕಲ್ಲು, ಮತ್ತು ಪೆಟ್ರೋಲ್ ಬಾಂಬ್ ಪತ್ತೆಯಾದ ಬೆನ್ನಲ್ಲೇ, ಬಿಜೆಪಿಯ ಕಪಿಲ್ ಮಿಶ್ರಾ ತಾಹೀರ್ ಈ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ. ಅವರ ಮನೆಯಲ್ಲಿ ಕೆಮಿಕಲ್ ತುಂಬಿದ ಪ್ಯಾಕೆಟ್ ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ. ಈ ಕೆಮಿಕಲ್ ಪ್ಯಾಕೆಟ್ ಗಳಲ್ಲಿ ಆ್ಯಸಿಡ್ ಇದೆ ಎನ್ನಲಾಗಿದೆ.
ಆಪ್ ನಾಯಕನ ಮನೆಯಲ್ಲಿ ರಾಶಿ ರಾಶಿ ಕಲ್ಲು, ಪೆಟ್ರೋಲ್ ಬಾಂಬ್, ವಿಡಿಯೋ ವೈರಲ್!
ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ತಾಹೀರ್ ಹುಸೇನ್ ತನ್ನ ಮನೆಯ ಟೆರೇಸ್ ಮೇಲೆ ನಡೆದುಕೊಂಡು ಹೋಗುತ್ತಿದ್ದರೆ, ಉದ್ರಿಕ್ತರು ಅಲ್ಲಿಂದಲೇ ಜನರ ಮೇಲೆ ಕಲ್ಲು ಎಸೆಯುತ್ತಿರುವುದು ಕಂಡು ಬಂದಿದೆ. ಹೀಗಿದ್ದರೂ ದೆಹಲಿ ಪೊಲೀಸರು ಈ ಸಂಬಂಧ ಯಾವುದೇ ಸ್ಪಷ್ಟನೆ ನೀಡಿಲ್ಲ.
ಅಲ್ಲದೇ ಹುಸೇನ್ ಮನೆಯ ಚಾವಣಿಯಲ್ಲಿ ಕಲ್ಲುಗಳು ಹಾಗೂ ಪೆಟ್ರೋಲ್ ಬಾಂಬ್ ಗಳೂ ಪತ್ತೆಯಾಗಿವೆ ಎನ್ನಲಾಗಿದೆ. ಇತ್ತ ಗಲಭೆ ವೇಳೆ ಮೋರಿಯಲ್ಲಿ ಮೃತರಾಗಿ ಪತ್ತೆಯಾದ ಗುಪ್ತಚರ ಅಧಿಕಾರಿ ಅಂಕಿತ್ ಶರ್ಮಾ ಕುಟುಂಬಸ್ಥರೂ ತಾಹೀರ್ ವಿರುದ್ಧ ಹತ್ಯೆ ಆರೋಪವೆಸಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ