
ನವದೆಹಲಿ: ಈಜುಕೊಳದಲ್ಲಿ ಮುಳುಗಿ ಆರು ವರ್ಷದ ಪುಟ್ಟ ಬಾಲಕನೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ತಕ್ಷ್ ರಾಥಿ ಮೃತ ಬಾಲಕ, ವಾಯುವ್ಯ ದೆಹಲಿಯ ಪಿತಾಂಪುರದಲ್ಲಿನ ಈಜುಕೊಳ್ಳದಲ್ಲಿ ಈ ಘಟನೆ ನಡೆದಿದೆ. ಈತ ತನ್ನ ಪ್ರದೇಶದ ಇತರ ಕೆಲ ಮಕ್ಕಳೊಂದಿಗೆ ದೆಹಲಿಯ ಪಿತಾಂಪುರದ ಈಜುಕೊಳಕ್ಕೆ ಈಜುವುದಕ್ಕಾಗಿ ಹೋಗಿದ್ದ ವೇಳೆ ಈ ದುರಂತ ನಡೆದಿದೆ.
ತಕ್ಷ್ ರಾಥಿ ಮಂಜಿತ್ ಕುಮಾರ್ ಎಂಬುವವರ ಪುತ್ರನಾಗಿದ್ದು, ಈಜುಕೊಳದಲ್ಲಿ ಮುಳುಗಿದ ಈತನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುವ ಪಿತಾಂಪುರದ ಮಲಿಕ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈ ಘಟನೆ ನಡೆದಿದೆ.
ಈ ಸ್ವಿಮ್ಮಿಂಗ್ ಪೂಲ್‌ನಲ್ಲಿ ಯಾವುದೇ ಸುರಕ್ಷತ ಕ್ರಮಗಳನ್ನು ಅಳವಡಿಸಿಲ್ಲ, ಅಲ್ಲಿ ಸಿಸಿಟಿವಿ ಕೂಡ ಇಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಧಿಕಾರಿಗಳ ಪ್ರಕಾರ, ಈ ಈಜುಕೊಳವನ್ನು ಅರ್ಪಣಾ ತಿವಾರಿ ಎಂಬುವವರು ಲೀಸ್‌ಗೆ ಪಡೆದಿದ್ದರು. ಈ ಅಪರ್ಣಾ ಅವರು ಮಧುಪುರದ ಶಿವಾನಿ ಕುಂಜ್ ನಿವಾಸಿಯಾದ ಜಗ್ತಿತ್ ಕದ್ಯಾನ್ ಅವರ ಪತ್ನಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 ರ ಅಡಿ (ನಿರ್ಲಕ್ಷ್ಯದ ಕಾರಣದಿಂದ ಸಾವು) ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ