ಪುಟ್ಟ ಬಾಲಕ ಬರೆದ ಕ್ಷಮಾಪಣೆ ಪತ್ರ ವೈರಲ್‌

Published : May 08, 2022, 12:14 PM IST
ಪುಟ್ಟ ಬಾಲಕ ಬರೆದ ಕ್ಷಮಾಪಣೆ ಪತ್ರ ವೈರಲ್‌

ಸಾರಾಂಶ

ಕ್ಷಮಾಪಣೆ ಪತ್ರ ಬರೆಯುವ ಟಾಸ್ಕ್‌ ನೀಡಿದ ಶಿಕ್ಷಕಿ ಸೈನಿಕನೆಂಬಂತೆ ಕಲ್ಪಿಸಿ ಟಿಪ್ಪಣಿ ಬರೆದ ವಿದ್ಯಾರ್ಥಿ ಬಾಲಕನ ಟಿಪ್ಪಣಿ ಸಾಮಾಜಿಕ ಜಾಲತಾಣದಲ್ಲಿ ವೈರಲ್

ವಿದ್ಯಾರ್ಥಿಯೋರ್ವ ಬರೆದ ಕ್ಷಮೆಯಾಚನೆಯ ಪತ್ರವನ್ನು ದೆಹಲಿಯ  ಸರ್ಕಾರಿ ಶಾಲೆಯೊಂದರ  ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್‌ ಆಗಿದೆ. ಶಿಕ್ಷಕಿ ಮಧು ಗುಲಾಟಿ (Madhu Gulati) ಅವರು ವಿದ್ಯಾರ್ಥಿಯೊಬ್ಬರು ಬರೆದ 'ಕ್ಷಮಾಪಣೆಯ ಪತ್ರ'ವನ್ನು ಟ್ವಿಟರ್‌ನಲ್ಲಿ  ಹಂಚಿಕೊಂಡಿದ್ದಾರೆ. ಈ ಪತ್ರ ಅಥವಾ ಟಿಪ್ಪಣಿ ಅವರ ಇಂಗ್ಲೀಷ್‌ ಪಠ್ಯದ ಭಾಗವಾಗಿತ್ತು. ಶಿಕ್ಷಕಿ ಗುಲಾಟಿ ಅವರು ತನ್ನ ವಿದ್ಯಾರ್ಥಿಗಳಿಗೆ, 'ತನ್ನ ಸಹೋದರಿಯ ಮದುವೆಗೆ ಹಾಜರಾಗಲು ರಜೆ ಸಿಗದ ಸೈನಿಕ' ತಾನು ಎಂಬ ಕಲ್ಪನೆಯಿಂದ ಕ್ಷಮಾಪಣಾ ಪತ್ರ ಬರೆಯುವಂತೆ ಶಿಕ್ಷಕಿ ತನ್ನ ವಿದ್ಯಾರ್ಥಿಗಳಿಗೆ ಹೇಳಿದರು.

ಅದರಂತೆ ಎಲ್ಲಾ ವಿದ್ಯಾರ್ಥಿಗಳು (Student) ಟಿಪ್ಪಣಿ ಬರೆದರು. ಅದರಲ್ಲಿ ಒಬ್ಬ ವಿದ್ಯಾರ್ಥಿ ಬರೆದ ಟಿಪ್ಪಣಿ ಅಥವಾ ಕ್ಷಮಾಪಣಾ ಪತ್ರ ಶಿಕ್ಷಕಿಯ ಹೃದಯ ಗೆದ್ದಿದೆ. ಪುಟ್ಟ ವಿದ್ಯಾರ್ಥಿಗಳು, ಕೆಲವೊಮ್ಮೆ, ಅವರ ಆಲೋಚನೆಗಳಿಂದ ನಿಮ್ಮನ್ನು ವಿಸ್ಮಯಗೊಳಿಸುತ್ತಾರೆ. ನಾನು ಕ್ಷಮಾಪಣೆ ಪತ್ರ ಬರೆಯುವಂತೆ ವಿದ್ಯಾರ್ಥಿಗಳಿಗೆ ಕೇಳಿದೆ. ವಿದ್ಯಾರ್ಥಿಯೊಬ್ಬ ತಾನು ಸೇನೆಯ ಅಧಿಕಾರಿ ಎಂದು ಕಲ್ಪಿಸಿಕೊಂಡು ಬರೆದಿದ್ದನ್ನು ಓದಿ. "ನನ್ನ ಕರ್ತವ್ಯವೇ ನನ್ನ ಆದ್ಯತೆ.' ಸೇನಾ ಸಿಬ್ಬಂದಿಗೆ ಸೆಲ್ಯೂಟ್, ಎಂದು ಬರೆದು ಅವರು ವಿದ್ಯಾರ್ಥಿ ಬರೆದ ನೋಟ್‌ನ್ನು ಹಂಚಿಕೊಂಡಿದ್ದಾರೆ.

ಪತ್ರದಲ್ಲಿರುವಂತೆ ತಾಯಿಯೊಬ್ಬರು (Mother) ಸೇನೆಯಲ್ಲಿ(Army) ಕರ್ತವ್ಯದಲ್ಲಿರುವ ತನ್ನ ಪುತ್ರನಿಗೆ ಇನ್ನು ನಾಲ್ಕು ದಿವಸದಲ್ಲಿ ನಿನ್ನ ಸಹೋದರಿಯ ಮದುವೆ ಇದೆ. ನೀನು ಬೇಗ ಬಂದು ಇಲ್ಲಿ ಮದುವೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳುತ್ತಾರೆ ಎಂಬಂತೆ ಕಲ್ಪಿಸಿಕೊಂಡ ಬಾಲಕ ಇದಕ್ಕೆ ಪ್ರತ್ಯುತ್ತರ ಬರೆಯುತ್ತಾನೆ. 

ಬಾಲಕನ ಪತ್ರಕ್ಕೆ ಕರಗಿದ ಸುಪ್ರೀಂಕೋರ್ಟ್

ನನ್ನನ್ನು ದಯವಿಟ್ಟು ಕ್ಷಮಿಸಿ ನನಗೆ ಬರಲಾಗುತ್ತಿಲ್ಲ. ಏಕೆಂದರೆ ನಮ್ಮ ಗಡಿ (Border) ಪ್ರಸ್ತುತ ಅಪಾಯದಲ್ಲಿದೆ. ಹೀಗಾಗಿ ನನಗೆ ರಜೆ ಸಿಗುತ್ತಿಲ್ಲ. ಏಕೆಂದರೆ ನಮ್ಮ ಗಡಿ ಇನ್ನೂ ಅಪಾಯದಲ್ಲೇ ಇದೆ. ಹಾಗಾಗಿ ನನ್ನನ್ನು ಕ್ಷಮಿಸಿ ಸಹೋದರಿಯ ಮದುವೆಗೆ (Wedding) ನನಗೆ ಬರಲಾಗುತ್ತಿಲ್ಲ. ಮದುವೆ ನೋಡಲಾಗುತ್ತಿಲ್ಲ. ನಾನು ಯಾವಾಗ ನನ್ನ ಸಹೋದರಿಯನ್ನು(Sister) ಭೇಟಿಯಾಗುವೆನೋ ನನಗೆ ತಿಳಿದಿಲ್ಲ. ಈಗ ನನ್ನ ಕರ್ತವ್ಯವೇ ನನ್ನ ಆದ್ಯತೆ. ಹೀಗಾಗಿ ಮದುವೆಗೆ ಬರದೇ ಇರುವುದಕ್ಕೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಬಾಲಕ ಬರೆದಿದ್ದಾನೆ. ಈತನ ಪತ್ರ ಎಲ್ಲರ ಹೃದಯ ತಟ್ಟಿದ್ದು, ಬಾಲಕನಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ. 

Vijayapura ಶಿಕ್ಷಕಿ ಬೀಳ್ಕೋಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು!

2021ರ ಜೂನ್‌ನಲ್ಲಿ ಕೇರಳದ 5ನೇ ತರಗತಿ ಬಾಲಕಿ ಬರೆದ ಪತ್ರಕ್ಕೆ ಸುಪ್ರೀಂಕೋರ್ಟ್‌ ನ್ಯಾಯಾಧೀಶರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಸುಪ್ರೀಂಕೋರ್ಟ್ ತೋರಿದ  ದಿಟ್ಟತನಕ್ಕೆ ದೇಶವಾಸಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಕಾಲ ಕಾಲಕ್ಕೆ ನ್ಯಾಯಾಲಯ ನೀಡಿದ ಆದೇಶಗಳ ಫಲವಾಗಿ ಸರ್ಕಾರವು ಸಕ್ರಿಯವಾಗಿ ಕೆಲಸ ಮಾಡಲು ಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯೊಬ್ಬಳು ಸಿಜಿಐಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಳು. ಈ ಪತ್ರಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ