CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಪ್ರತಿಭಟನೆಗೆ ದೆಹಲಿ ಪೊಲೀಸ್‌ 1 ವರ್ಷದ ನಿರ್ಬಂಧ?

Published : Oct 18, 2026, 07:52 AM IST
abhijit dipke

ಸಾರಾಂಶ

ದೆಹಲಿಯಲ್ಲಿ 'ಲೆಹರಾದೋ ತಿರಂಗಾ' ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿತರಾಗಿದ್ದ ಅಭಿಜೀತ್ ದೀಪ್ಕೆ ಮತ್ತು ನೇಹಾ ಬೋರಾರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ದೀಪ್ಕೆ ಅವರಿಂದ ಮುಂದಿನ ಒಂದು ವರ್ಷ ಶಾಂತಿ ಕಾಪಾಡುವ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.

ನವದೆಹಲಿ: ಅನುಮತಿ ನಿರಾಕರಣೆ ಹೊರತಾಗಿಯೂ ಶುಕ್ರವಾರ ದೆಹಲಿಯಲ್ಲಿ ‘ಲೆಹರಾದೋ ತಿರಂಗಾ’ ಹೆಸರಿನಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕಾರಣಕ್ಕೆ ಪೊಲೀಸರು ಬಂಧಿಸಿದ್ದ ಜಿರಳೆ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ, ವಶದಲ್ಲಿದ್ದ ಎಐಎಸ್‌ಎ ಸಂಘಟನೆ ನಾಯಕಿ ನೇಹಾ ಬೋರಾರನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಶಾಂತಿ ಮುಚ್ಚಳಿಕೆ

ನೇಹಾರನ್ನು ಶನಿವಾರ ಬೆಳಗ್ಗೆಯೇ ಬಿಡುಗಡೆ ಮಾಡಲಾಗಿದ್ದರೆ, ದೀಪ್ಕೆಯನ್ನು ಶನಿವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಮುಂದಿನ 1 ವರ್ಷ ಕಾಲ ಶಾಂತಿ ಕಾಪಾಡುವ ‘ಶಾಂತಿ ಮುಚ್ಚಳಿಕೆ’ ಬರೆದುಕೊಟ್ಟ ಬಳಿಕ ಬಿಡುಗಡೆ ಮಾಡಲಾಗಿದೆ.

ಪೊಲೀಸರ ವಶದಿಂದ ಬೆಳ್ಳಂಬೆಳಗ್ಗೆ ಬಿಡುಗಡೆಯಾಗುತ್ತಿದ್ದಂತೆ ನೇಹಾ ಬೋರಾ ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.

ನನ್ನನ್ನು ಮಂಡಿ ಹೌಸ್‌ನಲ್ಲಿ ರಾತ್ರಿಯಿಂದ ಮುಂಜಾನೆ 5 ಗಂಟೆ ವರೆಗೆ ಇರಿಸಲಾಗಿತ್ತು. ನನ್ನನ್ನು ಅಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ವಶಕ್ಕೆ ಪಡೆಯುವ ಇಂಥ ಘಟನೆಗಳು ದೇಶದಲ್ಲಿ ಹಲವು ಸಮಯದಿಂದ ನಡೆಯುತ್ತಿದ್ದು, ನಮ್ಮ ಚಳವಳಿಯಿಂದಾಗಿ ಇವುಗಳು ಈಗ ಬೆಳಕಿಗೆ ಬಂದಿವೆ ಎಂದು ಹೇಳಿದ್ದಾರೆ. ಜತೆಗೆ, ಎಲ್ಲಾ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡುವಂತೆಯೂ ಆಗ್ರಹಿಸಿದ್ದಾರೆ.

ಇದೇ ವೇಳೆ ಎಐಎಸ್‌ಎಯು ಕೂಡ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆ ಮತ್ತು ಎಸ್‌ಐಆರ್‌ ಪ್ರಕ್ರಿಯೆ ಹಿಂಪಡೆಯುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದೆ.

2ನೇ ಬಾಂಡ್‌:

ಈ ನಡುವೆ ದೀಪ್ಕೆಯನ್ನು ಎರಡನೇ ಬಾರಿ ಶಾಂತಿ ಬಾಂಡ್‌ ಬರೆಸಿಕೊಂಡು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಶಾಂತಿ ಬಾಂಡ್‌ನಡಿ 50000 ರು. ಶ್ಯೂರಿಟಿಯ ಬಾಂಡ್‌ ಜೊತೆಗೆ ಮುಂದಿನ ಒಂದು ವರ್ಷ ಕಾಲ ಶಾಂತಿ ಕಾಪಾಡುವ ಮತ್ತು ಉತ್ತಮ ನಡವಳಿಕೆ ತೋರುವ ಭರವಸೆಯನ್ನು ದೀಪ್ಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಪ್ರತಿಭಟನೆಗೆ ದೆಹಲಿ ಪೊಲೀಸ್‌ 1 ವರ್ಷದ ನಿರ್ಬಂಧ?
ಕಾಪಿ ಸ್ಕಾಡ್ ವೆಬ್ ಸಿರೀಸ್ ರಿಲೀಸ್ ಆದ ಎರಡೇ ದಿನಕ್ಕೆ 27ರ ಹರೆಯದ ಯುವ ನಿರ್ದೇಶಕ ಶವವಾಗಿ ಪತ್ತೆ