
ದೆಹಲಿ (ನ.16): ನಾನೊಬ್ಬ MLA ಅಂತ ಸುಳ್ಳು ಹೇಳಿ ದೆಹಲಿಯ ಹೋಟೆಲ್ಲೊಂದರಲ್ಲಿ ದುಡ್ಡು ಕೊಡದೇ ಬರೋಬ್ಬರಿ 18 ದಿನಗಳ ಕಾಲ ತಂಗಿದ್ದ ವ್ಯಕ್ತಿಯೊರ್ವನನ್ನು ಹಾಗೂ ಆತನ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ತುಘಲಕ್ ಬಾದ್ ನಿವಾಸಿಗಳಾದ ವಿನೋದ ಮತ್ತು ಆತನ ಸ್ನೇಹಿತ ಮನೋಜ್ ಆರೋಪಿಗಳು. MLA ಹೆಸರಲ್ಲಿ ಹೋಟೆಲ್‌ನಲ್ಲಿ ರೂಮ್ ಪಡೆದಿದ್ದ ವಿನೋದ, ಹದಿನೆಂಟು ದಿನಗಳ ಕಾಲ ಸಿಬ್ಬಂದಿಗೆ ಮೋಸ ಮಾಡಿ ಹೋಟೆల్ನಲ್ಲಿ ವಾಸಿಸಿದ್ದ ವಿಷಯ ಬೆಚ್ಚಿಬಿಳಿಸಿದೆ.
ಇಬ್ಬರೂ ಹಣ ನೀಡದಿದ್ದಾಗ, ಹೋಟೆಲ್ ಮಾಲೀಕ ಪವನ್ ನೇರವಾಗಿ ಬಂದು ಹಣ ನೀಡುವಂತೆ ಬೇಡಿಕೆ ಇಟ್ಟರು. ಆಗ ನಕಲಿ ಎಂಎಲ್‌ಎ ವಿನೋದ್ ಆಗಲೂ ಹಣ ನೀಡಲು ನಿರಾಕರಿಸಿದರು. ಇದರಿಂದಾಗಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ವಿನೋದ್ ತಾನು ಶಾಸಕ ಎಂದು ಹೇಳಿಕೊಂಡು ನೌಕರರು ಮತ್ತು ಹೋಟೆಲ್ ಮಾಲೀಕರಿಗೆ ಬೆದರಿಕೆ ಹಾಕಿದ್ದ.
ಪೊಲೀಸರ ವಿಚಾರಣೆಯ ಸಮಯದಲ್ಲಿ, ವಿನೋದ್ ಶಾಸಕರಲ್ಲ ಎಂಬುದು ಸ್ಪಷ್ಟವಾಯಿತು. ಅವರು ಮತ್ತು ಅವರ ಜೊತೆಗಿದ್ದ ಎರಡನೇ ವ್ಯಕ್ತಿ ತಮ್ಮ ಪ್ರಯಾಣಕ್ಕೆ ಬಳಸುತ್ತಿದ್ದ 'MP' ಎಂಬ ಫಲಕವನ್ನು ಹೊಂದಿದ್ದ ಕಾರನ್ನು ಸಹ ಪೊಲೀಸರು ವಶಪಡಿಸಿಕೊಂಡರು. ಶಾಸಕರ ಹೆಸರಿನಲ್ಲಿ ದೆಹಲಿಯಲ್ಲಿ ಸುತ್ತಾಡುತ್ತಿದ್ದ ಇಬ್ಬರು ವಿವಿಧ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಪ್ರವೇಶಿಸಿ ಹಣ ಪಾವತಿಸದೆ ಖರೀದಿಗಳನ್ನು ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ