ಬೆಚ್ಚಿಬೀಳಿಸೋ ಘಟನೆ.. ಮನೆಗೆ ನುಗ್ಗಿ 21 ವರ್ಷದ ಮಾಡೆಲ್‌ನ ಚುಚ್ಚಿ ಚುಚ್ಚಿ ಜೀವ ತೆಗೆದ ಜಿಮ್ ಟ್ರೈನರ್‍‌

Published : Aug 27, 2026, 06:01 PM IST
delhi Muskan

ಸಾರಾಂಶ

ಖ್ಯಾತ ಮಾಡೆಲ್ ಮನೆಗೆ ನುಗ್ಗಿದ ಜಿಮ್ ಟ್ರೈನರ್ ಒಬ್ಬ, ಆಕೆ ಮೇಲೆ ಮನಬಂದಂತೆ ಚಾಕುವಿನಿಂದ ದಾಳಿ ನಡೆಸಿ ಜೀವ ತೆಗೆದು ಪರಾರಿ ಆಗಿದ್ದಾನೆ. ಬೆನ್ನಲ್ಲೇ ಮೃತ ಮಾಡೆಲ್‌ನ ಸ್ನೇಹಿತ ನೀಡಿದ ಹೇಳಿಕೆ ಬೆಚ್ಚಿ ಬೀಳಿಸುವಂತಿದೆ..

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಒಬ್ಬಳೇ ಇದ್ದ 21 ವರ್ಷದ ಯುವತಿಯನ್ನು ಜಿಮ್ ಟ್ರೈನರ್ ಒಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಮೃತ ಯುವತಿಯನ್ನು ಮುಸ್ಕಾನ್ ಎಂದು ಗುರುತಿಸಲಾಗಿದೆ. ಈಕೆ ಮಾಡೆಲಿಂಗ್ ಮಾಡುತ್ತಿದ್ದು, ಜೊತೆಗೆ ವಿದ್ಯಾರ್ಥಿನಿಯಾಗಿದ್ದಳು. ಬುಧವಾರ ಮುಸ್ಕಾನ್ ತಿಲಕ್ ನಗರದ ಎರಡನೇ ಮಹಡಿಯಲ್ಲಿರುವ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ, ಜಿಮ್ ಟ್ರೈನರ್ ಇಮ್ರಾನ್ ಎಂಬಾತ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಮುಸ್ಕಾನ್ ಜೋರಾಗಿ ಕಿರುಚಿಕೊಂಡಿದ್ದನ್ನು ಕೇಳಿ ನೆರೆಮನೆಯವರು ಓಡಿ ಬಂದಾಗ, ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅತಿಯಾದ ರಕ್ತಸ್ರಾವದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಮುಸ್ಕಾನ್ ಮೃತಪಟ್ಟಿದ್ದಾಳೆ. ಕೃತ್ಯ ಎಸಗಿದ ಬಳಿಕ ಆರೋಪಿ ಇಮ್ರಾನ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಕಿರುಕುಳ ನೀಡುತ್ತಿದ್ದ ಆರೋಪಿ!

ಮುಸ್ಕಾನ್ ಗೆಳೆಯ ಅಮಾನ್ ಮಾತನಾಡಿ..ಆರೋಪಿ ಇಮ್ರಾನ್ ಈ ಹಿಂದೆಯೂ ಮುಸ್ಕಾನ್‌ಗೆ ಕಿರುಕುಳ ನೀಡುತ್ತಿದ್ದ. ಅವಳ ಅಕ್ಕಂದಿರು ಈ ವಿಷಯವನ್ನು ನನಗೆ ತಿಳಿಸಿದ್ದರು. ಈ ಹಿಂದೆಯೂ ಆತ ಹಲ್ಲೆ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಹಾಗಾಗಿ ನಮ್ಮ ನೇರ ಅನುಮಾನ ಆತನ ಮೇಲೆಯೇ ಇದೆ ಎಂದು ಹೇಳಿದ್ದಾರೆ. ಮೂವರು ಸಹೋದರಿಯರಲ್ಲಿ ಮುಸ್ಕಾನ್ ಕೊನೆಯವಳಾಗಿದ್ದಳು.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಅಡಿಷನಲ್ ಡಿಸಿಪಿ ಅಭಿಷೇಕ್ ಗುಪ್ತಾ, ನಾವು ಆರೋಪಿಯ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದೇವೆ. ಘಟನಾ ಸ್ಥಳದ ಸುತ್ತಮುತ್ತಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಇಮ್ರಾನ್ ಪತ್ತೆಗೆ ದೆಹಲಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಸಾರ್ವಜನಿಕವಾಗಿ ಹೆಸರು ಮಾಡಬೇಕಿದ್ದ ಉದಯೋನ್ಮುಖ ಮಾಡೆಲ್ ಒಬ್ಬಳು ಜಿಮ್ ಟ್ರೈನರ್‌ನ ಹಠಮಾರಿ ಪ್ರವೃತ್ತಿಗೆ ಬಲಿಯಾಗಿರುವುದು ಇಡೀ ದೆಹಲಿಯನ್ನು ಆತಂಕಕ್ಕೆ ತಳ್ಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಿಯೋ, ಏರ್‌ಟೆಲ್‌ಗೆ ಟಕ್ಕರ್, BSNL ಹಾಗೂ ವೊಡಾಫೋನ್ ಐಡಿಯಾ ಮಹತ್ವದ ನೆಟ್‌ವರ್ಕ್ ಒಪ್ಪಂದ!
₹1.8 ಕೋಟಿಯ ಮನೆ ಮಾರಿ ಬೈಕ್ ಖರೀದಿಸಿದ ಸ್ಟಾರ್ಟ್‌ಅಪ್ ಉದ್ಯಮಿ! ಕಾರಣ ಕೇಳಿದರೆ ನೀವು ಶಾಕ್ ಆಗ್ತೀರಾ!