ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ, ಮೇಡೇ ಸಂದೇಶದ ಬಳಿಕ ಪ್ಯಾನ್ ಪ್ಯಾನ್ ಇಂಡಿಕೇಶನ್

Published : Sep 02, 2025, 08:13 PM IST
Supreme Court seeking suspension of Air India Boeing fleet

ಸಾರಾಂಶ

ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೈಲೆಟ್ ಮೇಡೇ, ಮೇಡೇ ಎಂದು ಸಂದೇಶ ರವಾನಿಸಲಾಗಿದೆ. ಬಳಿಕ ಪ್ಯಾನ್ ಪ್ಯಾನ್ ಇಂಡಿಕೇಶನ್ ನೀಡಲಾಗಿದೆ.

ನವದೆಹಲಿ (ಸೆ.02) ಏರ್ ಇಂಡಿಯಾ ವಿಮಾನ ಮತ್ತೊಂದು ಅಪಾಯಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. ದೆಹಲಿ ಇಂದೋರ್ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕರು ಆತಂಕಗೊಂಡಿದ್ದಾರೆ. ಇತ್ತ ಪೈಲೆಟ್ ಏರ್ ಕಂಟ್ರೋಲ್ ರೂಂಗೆ ಮೇಡೇ ಮೇಡೇ ಸಂದೇಶ ನೀಡಿದ್ದಾರೆ. ಕೆಲ ಹೊತ್ತಿನ ಬಳಿಕ ಪೈಲೆಟ್ ಪ್ಯಾನ್ ಪ್ಯಾನ್ ಇಂಡಿಕೇಶನ್ ನೀಡಿ ವಿಮಾನವನ್ನು ಮತ್ತೆ ದೆಹಲಿಯಲ್ಲಿ ಲ್ಯಾಂಡ್ ಮಾಡಿದ ಘಟನೆ ನಡೆದಿದೆ. ಈ ಕುರಿತು ಏರ್ ಇಂಡಿಯಾ ಸ್ಪಷ್ಟನೆ ನೀಡಿದೆ.

ಆರಂಭದಲ್ಲಿ ಮೇಡೇ ಕಾಲ್

ದೆಹಲಿ-ಇಂದೋರ್ ಏರ್ ಇಂಡಿಯಾ ವಿಮಾನ ಪ್ರಯಾಣಿಕರನ್ನು ಬೋರ್ಡಿಂಗ್ ಮಾಡಿ ತಕ್ಕ ಸಮಯಕ್ಕೆ ಪ್ರಯಾಣ ಆರಂಭಿಸಿತ್ತು. ರನ್‌ವೇಯಲ್ಲಿ ವೇಗವಾಗಿ ಸಾಗಿದ ಏರ್ ಇಂಡಿಯಾ ವಿಮಾನ, ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆಗಿ ವಿಮಾನ ಹಾರಾಟ ಆರಂಭಿಸದ ಬೆನ್ನಲ್ಲೇ ವಿಮಾನದ ಬಲಭಾಗದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಪೈಲೆಟ್ ಎಲ್ಲಾ ದಾರಿಗಳು ಮುಚ್ಚಿಹೋದಾಗ ಸಂದೇಶ ನೀಡುವ ಮೇಡೇ ಕಾಲ್ ನೀಡಿದ್ದಾರೆ.

ಪ್ಯಾನ್ ಪ್ಯಾನ್ ಇಂಡಿಕೇಶನ್

ಮೇಡೇ ಕಾಲ್ ನೀಡಿದ ಬಳಿಕ ಪೈಲೆಟ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬಲ ಭಾಗದ ಎಂಜಿನ್ ಆಫ್ ಮಾಡಿದ ಪೈಲೆಟ್, ಎಡ ಭಾಗದ ಎಂಜಿನ್ ಮೂಲಕ ವಿಮಾನ ನಿಯಂತ್ರಣಕ್ಕ ತೆಗೆದುಕೊಂಡಿದ್ದಾರೆ. ಇತ್ತ ಬಲಭಾಗ ಎಂಜಿನ್ ಆಫ್ ಮಾಡುತ್ತಿದ್ದಂತೆ ವಿಮಾನದ ಬೆಂಕಿ ನಿಧಾನವಾಗಿ ಕಡಿಮೆಯಾಗಿದೆ. ಹೀಗಾಗಿ ಮೇಡೇ ಸಂದೇಶವನ್ನು ಬಳಿ ಪ್ಯಾನ್ ಪ್ಯಾನ್ ಸಂದೇಶ ನೀಡಿದ್ದಾರೆ.

ಏರ್ ಇಂಡಿಯಾ ಸ್ಪಷ್ಟನೆ

ಏರ್ ಇಂಡಿಯಾ ಈ ಕುರಿತು ಸ್ಪಷ್ಟನೆ ನೀಡಿದೆ. ಆಗಸ್ಟ್ 31ರ ದೆಹಲಿ ಇಂದೋರ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ತುರ್ತು ಪರಿಸ್ಥಿತಿ ಸೃಷ್ಟಿಯಾಗಿತ್ತು. ಆದರೆ ಎಂಜಿನ್ ಆಫ್ ಮಾಡಿ ವಿಮಾನ ನಿಯಂತ್ರಣಕ್ಕೆ ತೆಗೆದುಕೊಂಡ ಕಾರಣ ಮೇಡೇ ಸಂದೇಶವನ್ನು ಪ್ಯಾನ್ ಪ್ಯಾನ್ ಇಂಡಿಕೇಶನ್‌ಗೆ ಡೌನ್‌ಗ್ರೇಡ್ ಮಾಡಲಾಗಿತ್ತು. ಹೀಗಾಗಿ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿಲ್ಲ, ಬದಲಾಗಿ ಅರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

ಏನಿದು ಪ್ಯಾನ್ ಪ್ಯಾನ್ ಸಂದೇಶ

ಇತ್ತೀಚೆಗೆ ಅಹಮ್ಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಿಂದ ಎಲ್ಲರಿಗೂ ಮೇಡೇ ಸಂದೇಶದ ಗಂಭೀರತೆ ಅರಿವಾಗಿತ್ತು. ವಿಮಾನ ನಿಯಂತ್ರಣಕ್ಕೆ ತೆಗೆದುಕೊಳ್ಳುವ, ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಎಲ್ಲಾ ಅವಕಾಶಗಳು ಕ್ಷೀಣಿಸಿದಾಗ ಪೈಲೆಟ್ ಮೇಡೇ ಸಂದೇಶ ನೀಡುತ್ತಾರೆ. ಮೇಡೇ ಸಂದೇಶ ಬಂದರೆ ಏರ್ ಟ್ರಾಫಿಕ್ ಕಂಟ್ರೋಲ್ ರೂಂ ತುರ್ತುಗಿ ಈ ವಿಮಾನ ಲ್ಯಾಂಡಿಂಗ್ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಪ್ಯಾನ್ ಪ್ಯಾನ್ ಸಂದೇಶ ಎಂದರೆ ಎಮರ್ಜೆನ್ಸಿ ಅಲ್ಲ. ಆ ಸಂದರ್ಭದಲ್ಲಿ ಕಾಣಿಸಿಕೊಂಡ ಅಪಾಯ, ಆದರೆ ಬಳಿಕ ಪೈಲೆಟ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರೂ ಪ್ರಯಾಣ ಮುಂದುವರಿಸುವುದು ಅಪಾಯ ಎಂದಿದ್ದರೆ ಅಥವಾ ಲ್ಯಾಂಡಿಂಗ್ ಮಾಡಿ ವಿಮಾನ ಪರಿಶೀಲಿಸುವ ಅಗತ್ಯ ಕಂಡು ಬಂದರೆ ಪ್ಯಾನ್ ಪ್ಯಾನ್ ಸಂದೇಶ ನೀಡಲಾಗುತ್ತದೆ. ಪ್ಯಾನ್ ಪ್ಯಾನ್ ಸಂದೇಶ ಅರ್ಜೆನ್ಸಿ ಎಂದು ಪರಿಗಣಿಸಲಾಗುತ್ತದೆ, ಆದರೆ ಎಮರ್ಜೆನ್ಸಿ ಅಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ