ಮದ್ಯಪಾನಕ್ಕೆ ವಯೋಮತಿ ಇಳಿಕೆ, ಹಿಂದೆ ಸರಿಯುವ ಮಾತೇ ಇಲ್ಲ!

By Suvarna News  |  First Published Aug 26, 2021, 9:23 PM IST

* ಮದ್ಯ ಸೇವನೆ ವಯೋಮಿತಿ ಇಳಿಕೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ
* ಮದ್ಯ ಸೇವನೆ ಮಾಡಬಹುದು ಎಂದರೆ ಕುಡಿದು ವಾಹನ ಚಲಾಯಿಸಿ ಎಂಬ ಅರ್ಥವಲ್ಲ
* ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಸಂಸ್ಥೆ


ನವದೆಹಲಿ (ಆ. 26)  ದೆಹಲಿ ಸರ್ಕಾರ  ಮದ್ಯ ಸೇವನೆಯ ಕನಿಷ್ಠ ವಯಸ್ಸನ್ನು 25 ರಿಂದ 21 ವರ್ಷಕ್ಕೆ ಇಳಿಸಿ  ಆದೇಶ ಹೊರಡಿಸಿತ್ತು. 

ಮತದಾನ ಮಾಡಲು 18 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ ಮದ್ಯ ಸೇವನೆಗೆ ಯಾಕಿಲ್ಲ ಎಂದು ಸರ್ಕಾರವೇ ಪ್ರಶ್ನೆ ಮಾಡಿದೆ. ದೆಹಲಿ  ಹೈಕೋರ್ಟ್ ನಲ್ಲಿ ದಾಖಲಾದ ಅರ್ಜಿಯೊಂದರ ವಿಚಾರಣೆ ವೇಳೆ ಸರ್ಕಾರವೇ ಇಂಥ ಪ್ರಶ್ನೆ ಮುಂದಿಟ್ಟಿದ್ದು ತನ್ನ ಹೆಜ್ಜೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದೆ.

Latest Videos

undefined

ವ್ಯಕ್ತಿ ಮದ್ಯ ಸೇವನೆ ಮಾಡಬಹುದು ಎಂದು   ಹೇಳಿದರೆ ಆತ ಕುಡಿದು ವಾಹನ ಚಲಾಯಿಸಿದರೂ ತೊಂದರೆ  ಇಲ್ಲ ಎಂಬ  ಅರ್ಥವಲ್ಲ ಎಂದು ಹೇಳಿದೆ. ಇದಕ್ಕೆ ಕಾರಣ ಅರ್ಜಿ ಸಲ್ಲಿಸಿದ ಸಂಸ್ಥೆಯ  ಹೆಸರು ಕಮ್ಯೂನಿಟಿ ಆಗೆನಿಸ್ಟ್ ಡ್ರಂಕನ್ ಡ್ರೈವಿಂಗ್.  ವಯೋಮಿತಿ ಇಳಿಕೆ ಮಾಡಿರುವುದು ಮದ್ಯ ಸೇವನೆ ಮಾಡಿ ವಾಃನ ಚಲಾವಣೆ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂದುನ ಸಂಸ್ಥೆ ವಾದ ಮುಂದಿಟ್ಟಿತ್ತು.

ಕುಡುಕ ಗಂಡನ ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಮುಂದಾದಳು

ಕುಡಿದು ವಾಹನ ಚಲಾವಣೆ ಮತ್ತು ವಯೋಮಿತಿಗೂ ಸಂಬಂಧವೇ ಇಲ್ಲ. ಕಾನೂನು  ಕುಡಿದು ವಾಹನ ಚಲಾವಣೆಗೆ ಎಲ್ಲಿಯೂ ಅವಕಾಶ ನೀಡಿಲ್ಲ.  ಅದರ ಬಗ್ಗೆ ಇರುವ ನಿಯಮಗಳ ಅನುಸಾರ ಕ್ರಮ ಜರುಗಿಸಲಾಗುತ್ತದೆ ಎಂದು  ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನು ತೆರೆಯಲಾಗುವುದಿಲ್ಲ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಶೇ.60ಕ್ಕೂ ಹೆಚ್ಚು ಮದ್ಯದಂಗಡಿಗಳಿವೆ. ಶೇ. 40ರಷ್ಟು ಖಾಸಗಿ ಮದ್ಯದಂಗಡಿಗಳು ರಾಜ್ಯ ಸರ್ಕಾರಿ ಸ್ವಾಮ್ಯದ ಅಂಗಡಿಗಳಿಗಿಂತ ಹೆಚ್ಚಿನ ಆದಾಯ ನೀಡುತ್ತವೆ. ಆದ್ದರಿಂದ ಸರ್ಕಾರ ಚಿಲ್ಲರೆ ಮದ್ಯ ವ್ಯಾಪಾರದಿಂದ ಹೊರಬರಲಿದ್ದು ಮದ್ಯ ಮಾಫಿಯಾಕ್ಕೆ ಹೊಡೆತ ನೀಡಲು ಇಂಥ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸರ್ಕಾರ ಸಮರ್ಥನೆ ಮಾಡಿಕೊಂಡಿತ್ತು. 

 

click me!