ದೆಹಲಿಯಲ್ಲಿ ಗೆದ್ದು ಬೀಗಿದ ಆಮ್ ಆದ್ಮಿ ಪಕ್ಷ| ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಹಾಗೂ ಪ್ರೇಮಿಗಳ ದಿನ ನಡುವಿದೆ ಅವಿನಾಭಾವ ಸಂಬಂಧ| ಈ ಬಾರಿಯೂ ಫೆ. 14ರಂದೇ ಪ್ರಮಾಣವಚನ ಸ್ವೀಕರಿಸ್ತಾರಾ ಕೇಜ್ರೀವಾಲ್?
ನವದೆಹಲಿ[ಫೆ.11]: ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಹೊರ ಬಿದ್ದಿದೆ. ದೆಹಲಿ ಜನತೆ ಮತ್ತೊಮ್ಮೆ ಅರವಿಂದ ಕೇಜ್ರೀವಾಲ್‌ರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷದ ಸ್ಥಾನಗಳು ಕಡಿಮೆಯಾಗಿದ್ದರೂ, ಸರಳ ಬಹುಮತದೊಂದಿಗೆ ಗೆಲುವಿನ ನಗೆ ಬೀರಿದೆ. ಕೆಲವೇ ದಿನಗಳಲ್ಲಿ ಕೇಜ್ರೀವಾಲ್ ಮೂರನೇ ಬಾರಿ ದೆಹಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಸದ್ಯ ಅರವಿಂದ್ ಕೇಜ್ರೀವಾಲ್ ಫೆಬ್ರವರಿ 14 ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸ್ತಾರಾ? ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಯಾಕೆಂದರೆ ಕೇಜ್ರೀವಾಲ್ ಹಾಗೂ ಪ್ರೇಮಿಗಳ ದಿನಕ್ಕೂ ಅವಿನಾಭಾವ ಸಂಬಂಧವೊಂದಿದೆ.
ದೆಹಲಿ ‘ಕಮಲ’ ಮುಡಿಯದಿರಲು ಕಾರಣ: ಬೆರೆಸಲೇ ಇಲ್ಲ ಅಭಿವೃದ್ಧಿಯ ಹೂರಣ!
undefined
ಅರವಿಂದ್ ಕೇಜ್ರೀವಾಲ್ ಈ ಹಿಂದೆ 2 ಬಾರಿ ದೆಹಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಿರುವಾಗ ಫೆಬ್ರವರಿ 14ರೊಂದಿಗಿನ ಅವರ ಸಂಬಂಧ ಅವಿನಾಭಾವ. ಹೌದು 2019ರ ಡಿಸೆಣಬರ್ 4 ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆದಿತ್ತು. 8 ರಂದು ಫಲಿತಾಂಶ ಹೊರ ಬಿದ್ದಿತ್ತು. ಬಿಜೆಪಿ 31, ಆಪ್ 28 ಹಾಗೂ ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಮ್ ಆದ್ಮಿ ಹಾಗೂ ಕಾಂಗ್ರೆಸ್ ಸೇರಿ ಅಂದು ಸರ್ಕಾರ ರಚಿಸಿದ್ದವು ಹಾಗೂ ಡಿಸೆಂಬರ್ 28ರಂದು ಮೊದಲ ಬಾರಿ ಕೇಜ್ರೀವಾಲ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಆದರೆ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ತಲೆದೋರಿದ ಅಸಮಾಧಾನಗಳಿಂದ, ಈ ಮೈತ್ರಿ ಸರ್ಕಾರ ಕೇವಲ 49 ದಿನ ಆಡಳಿತ ನಡೆಸಿತು. ಬಳಿಕ 2014ರ ಫೆಬ್ರವರಿ 14 ರಂದು ಕೇಜ್ರೀವಲ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು.
2015ರ ಜನವರಿ 12 ರಂದು ದೆಹಲಿಯಲ್ಲಿ ಮತ್ತೆ ವಿಧಾನಸಭಾ ಚುನಾವಣೆಯ ಘೋಷಣೆಯಾಯ್ತು. ಚುನಾವಣಾ ಆಯೋಜ ಫೆಬ್ರವರಿ 7 ರಂದು ಮತದಾನ ನಡೆಸಿ 10 ರಂದು ಫಲಿತಾಂಶ ನೀಡುವುದಾಗಿ ಘೋಷಿಸಿತ್ತು. ಹೀಗಿರುವಾಗ ಅಂದು ಆಮ್ ಆದ್ಮಿ ಪಕ್ಷದ ವಕ್ತಾರ ರಾಘವ್ ಚಡ್ಡಾ ಘೋಷಣೆಯೊಂದನ್ನು ಮಾಡುತ್ತಾ 'ಒಂದು ವೇಳೆ ನಮ್ಮ ಪಕ್ಷ ಅಧಿಕಾರ ಪಡೆದರೆ ಅರವಿಂದ್ ಕೇಜ್ರೀವಾಲ್ ಫೆಬ್ರವರಿ 14 ರಂದು ಪ್ರಮಾಣವಚನ ಸ್ವೀಕರಿಸಿ ದೆಹಲಿ ಜನತೆಯೊಂದಿಗೆ ಪ್ರೇಮಿಗಳ ದಿನ ಆಚರಿಸುತ್ತಾರೆ' ಎಂದಿದ್ದರು. ಪೂರ್ಣ ಪರಿಶ್ರಮದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ ಆಮ್ ಆದ್ಮಿ ಪಕ್ಷ 70 ಕ್ಷೇತ್ರಗಳ ಪೈಕಿ 67 ಸ್ಥಾನಗಳಲ್ಲಿ ಗೆದ್ದು ಇತಿಹಾಸ ನಿರ್ಮಿಸಿತು. ಕಾಂಗ್ರೆಸ್ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಗೆದ್ದ ಕೇಜ್ರೀವಾಲ್ ಫೆಬ್ರವರಿ 14 ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಎರಡನೇ ಬಾರಿ ದೆಹಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.
‘ಆಪ್’ ಕಾ ದಿಲ್ಲಿ: ಕೇಜ್ರಿ ಕುಳಿತರು ಮತ್ತೆ ಗದ್ದುಗೆಯಲ್ಲಿ!
ಇದಾದ ಬಳಿಕ ಅರವಿಂದ್ ಕೇಜ್ರೀವಾಲ್ ಫೆಬ್ರವರಿ 14 ವಿಶೇಷ ದಿನವೆಂದು ಪರಿಗಣಿಸುತ್ತಾರೆ. ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ 2016ರ ಫೆಬ್ರವರಿ 14 ರಂದು ಟ್ವೀಟ್ ಒಂದನ್ನು ಮಾಡಿದ್ದ ಕೇಜ್ರೀವಾಲ್ 'ಕಳೆದ ವರ್ಷ ಇದೇ ದಿನ ದೆಹಲಿಗೆ ಆಪ್ ಜೊತೆ ಪ್ರೀತಿ ಹುಟ್ಟಿಕೊಂಡಿತ್ತು. ಇದು ಅತ್ಯಂತ ಆಳವಾದ, ಯಾವತ್ತೂ ಅಂತ್ಯಗೊಳ್ಳದ ಸಂಬಂಧವಾಗಿದೆ' ಎಂದು ಬರೆದಿದ್ದರು. 2018ರಲ್ಲಿ ಮೂರು ವರ್ಷ ಸರ್ಕಾರ ಪೂರೈಸಿದ ಸಂಭ್ರಮದಲ್ಲಿ ಕೇಜ್ರೀವಾಲ್ ಫೆಬ್ರವರಿ 14ರಂದೇ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು.
ಇನ್ನು 2020ರ ಫೆಬ್ರವರಿ 11 ಅಂದರೆ ಇಂದು ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಕೇಜ್ರೀವಾಲ್ ಮತ್ತೆ ದೆಹಲಿ ಗದ್ದುಗೆ ಏರುವುದು ಬಖಚಿತವಾಘಿದೆ. ಹೀಗಿರುವಾಗ ಅವರು ಫೆಬ್ರವರಿ 14ರಂದೇ ಪ್ರಮಾಣವಚನ ಸ್ವೀಕರಿಸಿ, ತಮಗೂ ಪ್ರೇಮಿಗಳ ದಿನಕ್ಕೂ ಅವಿನಾಭಾವ ಸಂಬಧ ಇದೆ ಎಂಬುವುದನ್ನು ಸಾಬೀತುಪಡಿಸುತ್ತಾರಾ? ಕಾದು ನೋಡಬೇಕಿದೆ.
ಕುಂಠಿತಗೊಳ್ಳುತ್ತಿದೆ ಮೋದಿ ಹವಾ? 2 ವರ್ಷದಲ್ಲಿ 7 ರಾಜ್ಯ ಕಳೆದುಕೊಂಡ ಬಿಜೆಪಿ!
ಫೆಬ್ರವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ