ದೆಹಲಿಯ ಖಜಾನೆ ಖಾಲಿ ಎಂದ ಸಿಎಂ ರೇಖಾ ಗುಪ್ತಾ, 'ನೆಪ ಹೇಳೋದು ಬಿಡಿ' ಎಂದು ತಿರುಗೇಟು ನೀಡಿದ ಆತಿಶಿ!

Published : Feb 24, 2025, 12:49 PM ISTUpdated : Feb 24, 2025, 02:10 PM IST
ದೆಹಲಿಯ ಖಜಾನೆ ಖಾಲಿ ಎಂದ ಸಿಎಂ ರೇಖಾ ಗುಪ್ತಾ, 'ನೆಪ ಹೇಳೋದು ಬಿಡಿ' ಎಂದು ತಿರುಗೇಟು ನೀಡಿದ ಆತಿಶಿ!

ಸಾರಾಂಶ

ದೆಹಲಿ ಸರ್ಕಾರ ಖಜಾನೆ ಖಾಲಿ ಮಾಡಿದೆ ಎಂದು ನೂತನ ಸಿಎಂ ರೇಖಾ ಗುಪ್ತಾ ಆರೋಪಿಸಿದ್ದಾರೆ. ಬಿಜೆಪಿ ಅಭಿವೃದ್ಧಿ ಮತ್ತು ಜನರ ಸಮಸ್ಯೆ ಪರಿಹರಿಸುವತ್ತ ಗಮನಹರಿಸಲಿದೆ ಎಂದು ವೀರೇಂದ್ರ ಸಚ್‌ದೇವ ಹೇಳಿದ್ದಾರೆ.

ನವದೆಹಲಿ (ಫೆ.24): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಆಮ್‌ ಆದ್ಮಿ ಪಾರ್ಟಿ ದೆಹಲಿ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿದೆ ಎಂದು ಇತ್ತೀಚೆಗೆ ದೆಹಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ರೇಖಾ ಗುಪ್ತಾ ಆರೋಪ ಮಾಡಿದ್ದಾರೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವ ವೇಳೆ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ. 'ದೆಹಲಿ ಸರ್ಕಾರದ ಖಜಾನೆಯನ್ನು ಹಿಂದಿ ಸರ್ಕಾರ ಯಾವ ರೀತಿ ಇಟ್ಟಿದೆ ಎಂದರೆ, ಅಧಿಕಾರಿಗಳೊಂದಿಗೆ ಪ್ರಸ್ತುತ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗೆ ಅನ್ನೋದನ್ನು ಪರಿಶೀಲನೆ ಮಾಡಿದಾಗ ಹೆಚ್ಚೂ ಕಡಿಮೆ ಖಜಾನೆ ಖಾಲಿಯಾಗಿದ್ದನ್ನು ಅರಿತುಕೊಂಡಿದ್ದೇವೆ' ಎಂದು ತಿಳಿಸಿದ್ದಾರೆ. ಈ ನಡುವೆ ಅಭಿವೃದ್ಧಿ ಹೊಂದಿದ ದೆಹಲಿಯನ್ನು ನಿರ್ಮಿಸುವುದು ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸುವುದು ಬಿಜೆಪಿ ಸರ್ಕಾರದ ಏಕೈಕ ಕಾರ್ಯಸೂಚಿಯಾಗಿದೆ ಎಂದು ಸಚ್‌ದೇವಾ ಹೇಳಿದರು.

26 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಏರಿದೆ. ಅದರೊಂದಿಗೆ ಆಮ್‌ ಆದ್ಮಿ ಪಾರ್ಟಿ ದಶಕಗಳ ಕಾಲದ ಅಧಿಕಾರವೂ ಕೊನೆಗೊಂಡಿದೆ. 70 ವಿಧಾನಸಭೆಯ ದೆಹಲಿಯಲ್ಲಿ 48 ಸೀಟ್‌ ಗೆದ್ದು ಬಿಜೆಪಿ ಅಧಿಕಾರ ಹಿಡಿದಿದೆ.
ಇನ್ನೊಂದೆಡೆ,  ಅರವಿಂದ್ ಕೇಜ್ರಿವಾಲ್ ಅವರ 10 ವರ್ಷಗಳ ನಾಯಕತ್ವದಲ್ಲಿ ದೆಹಲಿಯ ಬಜೆಟ್ 30,000 ಕೋಟಿ ರೂ.ಗಳಿಂದ 77,000 ಕೋಟಿ ರೂ.ಗಳಿಗೆ ಏರಿದೆ ಎಂದು ಎಎಪಿ ಹೇಳಿಕೊಂಡಿದೆ. "ನಾವು ಆರ್ಥಿಕವಾಗಿ ಬಲಿಷ್ಠ ಮತ್ತು ಪ್ರಗತಿ ಆಗುತ್ತಿದ್ದ ಸರ್ಕಾರವನ್ನು ಬಿಜೆಪಿಗೆ ಹಸ್ತಾಂತರಿಸಿದ್ದೇವೆ" ಎಂದು ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕಿ ಅತಿಶಿ ಹೇಳಿದ್ದಾರೆ. ಬಿಜೆಪಿ "ನೆಪ ಹೇಳುವ" ಬದಲು ತಮ್ಮ ಭರವಸೆಗಳನ್ನು ಈಡೇರಿಸುವತ್ತ ಗಮನಹರಿಸಬೇಕು ಎಂದಿದ್ದಾರೆ.

ಶನಿವಾರ ಎಎಪಿ ನಾಯಕಿ ಅತಿಶಿ ಅವರು ಗುಪ್ತಾ ಅವರಿಗೆ ಪತ್ರ ಬರೆದು, ಬಿಜೆಪಿ ಚುನಾವಣಾ ಪ್ರಚಾರದ ಸಮಯದಲ್ಲಿ ಭರವಸೆ ನೀಡಿದಂತೆ ಮಹಿಳೆಯರಿಗೆ ಮಾಸಿಕ 2,500 ರೂ. ನೆರವು ನೀಡುವ ವಿಷಯದ ಬಗ್ಗೆ ಚರ್ಚಿಸಲು ಅವರನ್ನು ಭೇಟಿಯಾಗುವಂತೆ ಕೋರಿದ್ದರು. ಪ್ರಧಾನಿಯವರ ಭರವಸೆಯ ಹೊರತಾಗಿಯೂ, ಬಿಜೆಪಿ ಸರ್ಕಾರವು ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯನ್ನು ಏಕೆ ಅನುಮೋದಿಸಲಿಲ್ಲ ಎಂದು ಅತಿಶಿ ಪ್ರಶ್ನೆ ಮಾಡಿದ್ದಾರೆ.

ದೆಹಲಿ ನೂತನ ಸಿಎಂ ರೇಖಾ ಗುಪ್ತಾ ಹಳೇ 'ಗಲಾಟೆ' ವಿಡಿಯೋಗಳು ವೈರಲ್‌

ದೆಹಲಿ ವಿಧಾನಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ಬಾಕಿ ಇರುವ 14 ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಗಳನ್ನು ಮಂಡಿಸುವುದರೊಂದಿಗೆ ಇದು ಬಿರುಗಾಳಿಯ ಅಧಿವೇಶನವಾಗುವುದು ನಿಶ್ಚಿತವಾಗಿದೆ.
ಮೊದಲ ದಿನದ ಸದನದ ಕಲಾಪಗಳು ಹೊಸದಾಗಿ ಆಯ್ಕೆಯಾದ ಶಾಸಕರು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಪ್ರಾರಂಭವಾಗಲಿವೆ. ಹಿರಿಯ ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಗುಪ್ತಾ ಮಂಡಿಸಲಿದ್ದಾರೆ. 

ಏಪ್ರಿಲ್‌ನಲ್ಲಿ ಸಿದ್ಧರಾಮಯ್ಯ ರಾಜೀನಾಮೆ, ಲಕ್ಷ್ಮೀ ಹೆಬ್ಬಾಳ್ಕರ್‌ ಮುಂದಿನ ಸಿಎಂ ಎಂದ ಜ್ಯೋತಿಷಿ ಪ್ರಶಾಂತ್ ಕಿಣಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ