ತನ್ನಿಂದ ಬಿಜೆಪಿಗೆ 104 ಸ್ಥಾನ ಎಂದು ಲೆ. ಗವರ್ನರ್‌ ಹೇಳಿದ್ದರು: ಕೇಜ್ರಿವಾಲ್‌

By Kannadaprabha NewsFirst Published Jan 18, 2023, 9:56 AM IST
Highlights

ದೆಹಲಿ ಸರ್ಕಾರ ಮತ್ತು ಲೆ.ಗವರ್ನರ್‌ ನಡುವಿನ ತಿಕ್ಕಾಟ ಮುಂದುವರೆದಿದೆ. ಗವರ್ನರ್ ವಿರುದ್ಧ ಕೇಜ್ರಿವಾಲ್ ಹೊಸ ಆರೋಪ ಮಾಡಿದ್ದಾರೆ

ನವದೆಹಲಿ: ದೆಹಲಿ ಸರ್ಕಾರ ಮತ್ತು ಲೆ.ಗವರ್ನರ್‌ ನಡುವಿನ ತಿಕ್ಕಾಟ ಮುಂದುವರೆದಿದ್ದು, ‘ದೆಹಲಿ ನಗರ ಪಾಲಿಕೆ ಚುನಾವಣೆಯಲ್ಲಿ ತನ್ನಿಂದಾಗಿ ಬಿಜೆಪಿ 104 ಸ್ಥಾನಗಳನ್ನು ಗೆದ್ದಿದೆ. ಇಲ್ಲದಿದ್ದರೆ 20 ಸ್ಥಾನಗಳನ್ನು ಗೆಲ್ಲಲಾಗುತ್ತಿರಲಿಲ್ಲ ಎಂದು ಲೆ.ಗವರ್ನರ್‌ ವಿ.ಕೆ ಸಕ್ಸೇನಾ ಅವರೇ ಸ್ವತಃ ನನ್ನ ಬಳಿ ಹೇಳಿಕೊಂಡಿದ್ದಾರೆ’ ಎಂದು ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ. 

ಪ್ರಾಥಮಿಕ ಶಾಲಾ ಶಿಕ್ಷಕರನ್ನು ತರಬೇತಿಗಾಗಿ ಫಿನ್ಲೆಂಡ್‌ಗೆ ಕಳುಹಿಸುವ ದೆಹಲಿ ಸರ್ಕಾರದ ನಿರ್ಧಾರಕ್ಕೆ ಅಡ್ಡಿಪಡಿಸಿದ ಲೆ.ಗವರ್ನರ್‌ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್‌ ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಬಿಜೆಪಿಗೆ 7 ಸ್ಥಾನಗಳನ್ನು ಗೆಲ್ಲಿಸಿಕೊಡುತ್ತೇನೆಂದು ಸಕ್ಸೇನಾ ಹೇಳಿದ್ದಾರೆ’ ಎಂದು ಆರೋಪಿಸಿದರು.  ‘ನಮ್ಮ ತಲೆಯ ಮೆಲೆ ಕೂರಲು ಲೆ.ಗವರ್ನರ್‌ ಯಾರು? ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಧರಿಸಲು ಅವರು ಯಾರು? ಸಕ್ಸೇನಾ ನನ್ನ ಹೋಮ್‌ವರ್ಕ್ ಪರೀಕ್ಷಿಸಿದ ಹಾಗೆ ನನ್ನ ಶಿಕ್ಷಕರೇ ನನ್ನ ಹೋಮ್‌ವರ್ಕ್ ಪರೀಕ್ಷಿಸಿರಲಿಲ್ಲ. ಅವರು ನನ್ನ ಮುಖ್ಯೋಪಾಧ್ಯಾಯರಲ್ಲ’ ಎಂದು ವ್ಯಂಗ್ಯವಾಡಿದರು.

5 ಬಿಜೆಪಿ ಶಾಸಕರು ಸಸ್ಪೆಂಡ್‌:

ಮಕ್ಕಳ ಹಾಗೂ ಶಿಕ್ಷಕರ ತರಬೇತಿ ಕುರಿತು ಸಕ್ಸೇನಾ ಅಕ್ರಮವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಪ್‌ ಶಾಸಕ ಅತಿಶಿ ಸಲ್ಲಿಸಿದ್ದ ನಿಲುವಳಿ ವಿರೋಧಿಸಿ ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದ 5 ಬಿಜೆಪಿ ಶಾಸಕನ್ನು ಸ್ಪೀಕರ್‌ ರಾಮ್‌ ನಿವಾಸ್‌ 1 ದಿನದ ಮಟ್ಟಿಗೆ ಕಲಾಪದಿಂದ ಸಸ್ಪೆಂಡ್‌ ಮಾಡಿದ್ದಾರೆ.

ಗವರ್ನರ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಆಪ್ ಸರ್ಕಾರಕ್ಕೆ ಮುಖಭಂಗ, ಕೇಜ್ರಿವಾಲ್‌ಗೆ ಮಂಗಳಾರತಿ!

ಆಪ್‌ನಿರ್ಭರ ಅಥವಾ ಆತ್ಮನಿರ್ಭರ ನಡುವೆ ಸೂಕ್ತ ಆಯ್ಕೆ ಮಾಡಿ: ಅಮಿತ್‌ ಶಾ

click me!