ದೆಹಲಿ ಕೆಂಪು ಕೋಟೆ ಬಳಿ ಕಾರು ಬ್ಲಾಸ್ಟ್, ರಾಜಧಾನಿ, ಮುಂಬೈ ಸೇರಿ ಹಲವು ನಗರದಲ್ಲಿ ಹೈ ಅಲರ್ಟ್

Published : Nov 10, 2025, 08:11 PM IST
Delhi Red fort blast video

ಸಾರಾಂಶ

ದೆಹಲಿ ಕೆಂಪು ಕೋಟೆ ಬಳಿ ಕಾರು ಬ್ಲಾಸ್ಟ್, ರಾಜಧಾನಿ, ಮುಂಬೈ ಸೇರಿ ಹಲವು ನಗರದಲ್ಲಿ ಹೈ ಅಲರ್ಟ್, ಕಾರು ಸ್ಫೋಟದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಯೋತ್ಪಾದಕ ಕೃತ್ಯ ಎಂದು ಶಂಕಿಸಲಾಗಿದೆ.

ದೆಹಲಿ (ನ.10) ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡು ಕೆಲವರು ಮೃತಪಟ್ಟ ಘಟನೆ ನಡೆದಿದೆ. ಮೇಲ್ನೋಟಕ್ಕೆ ಭಯೋಕ್ಪಾದ ಕೃತ್ಯ ಎಂದು ಶಂಕಿಸಲಾಗಿದೆ. ಮೆಟ್ರೋ ನಿಲ್ದಾಣದ ಬಳಿ ಪಾರ್ಕ್ ಮಾಡಿದ್ದ ಕಾರು ಸ್ಫೋಟಗೊಂಡಿದೆ. ಕೆಲವೇ ಕ್ಷಣದಲ್ಲಿ ಪಕ್ಕದಲ್ಲೇ ಇದ್ದ ಮತ್ತೊಂದು ಕಾರು ಸ್ಫೋಟಗೊಂಡಿದೆ. ಇದರ ಬೆಂಕಿಯ ಜ್ವಾಲೆಗೆ ಹಲವು ಕಾರುಗಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವುದು ಖಚಿತವಾಗಿದೆ. ಹಲವರು ಗಾಯಗೊಂಡಿದ್ದಾರೆ. ದೆಹಲಿ ಕಾರು ಸ್ಫೋಟದಿಂದ ದೆಹಲಿಯಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಇತ್ತ ಮುಂಬೈ ಸೇರಿದಂತೆ ಪ್ರಮುಖ ನಗರಗಳಿಗೂ ಹೈ ಅಲರ್ಟ್ ಘೋಷಿಸಲಾಗಿದೆ.

ದೆಹಲಿಯ ಫರಿದಾಬಾದ್ ಉಗ್ರರ ಪ್ಲಾನ್ ವಿಫಲಗೊಳಿಸಿದ ಬೆನ್ನಲ್ಲೇ ಸ್ಫೋಟ

ದೆಹಲಿಯ ಫರಿದೀಬಾದ್ ಬಳಿ ಭಯೋತ್ಪಾದಕರ ದಾಳಿ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿತ್ತು. ಎರಡು ಮನೆಗಳಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2,500 ಕೆಜಿಗೂ ಹೆಚ್ಚು ಸ್ಫೋಟಕ ಪತ್ತೆಯಾಗಿತ್ತು. ಭಯೋತ್ಪಾದಕರ ಈ ಕೃತ್ಯವನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿ ದಾಳಿ ವಿಫಲಗೊಳಿಸಿತ್ತು. ಇದರ ಬೆನ್ನಲ್ಲೇ ದೆಹಲಿಯಲ್ಲಿ ಕಾರು ಸ್ಫೋಟಗೊಂಡಿದೆ. ಹೀಗಾಗಿ ಅನುಮಾನಗಳು ಹೆಚ್ಚಾಗಿದೆ. ಇದೇ ಕಾರಣಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ನೀಡಲಾಗಿದೆ. ದೆಹಲಿಯಿಂದ ಹೊರಹೋಗುವ, ಒಳ ಪ್ರವೇಶಿಸುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಮುಂಬೈನಲ್ಲೂ ಭದ್ರತೆ ಹೆಚ್ಚಳ ಮಾಡಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ.

7 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

2 ಕಾರು ಸ್ಫೋಟದಿಂದ ಪಕ್ಕದಲ್ಲಿದ್ದ ಹಲವು ಕಾರುಗಳಿಗೂ ಬೆಂಕಿ ಹೊತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. 7 ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಕಾರಣ ನಂದಿಸಲು ಕೆಲ ಸಮಯವೇ ಬೇಕಾಗಿತ್ತು.

ಪ್ರತ್ಯಕ್ಷ ದರ್ಶಿಗಳು ಹೇಳುವುದೇನು?

ಭಾರಿ ಸ್ಫೋಟಗೊಳ್ಳುತ್ತಿದ್ದಂತೆ ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿ ಕೆಂಪು ಬೆಂಕಿಯ ಜ್ವಾಲೆ ಆವರಿಸಿತ್ತು. ಭಯದಿಂದ ದೂರ ಓಡಿದೆವು.ಹಲವರು ಗಾಯಗೊಂಡಿದ್ದಾರೆ ಎಂದಿದ್ದಾರೆ. ಮನೆಯಲ್ಲಿರುವಾಗ ಸ್ಫೋಟದ ಸದ್ದು ಕೇಳಿತು. ಹೀಗಾಗಿ ಹೊರಬಂದು ನೋಡಿದಾಗ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಹಲವರ ಚೀರಾಟ ಕೇಳಿಸಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಫರೀದಾಬಾದ್ ಭಯೋತ್ಪಾದಕ ಕೃತ್ಯ ವಿಫಲಗೊಳಿಸಿದ ಬೆನ್ನಲ್ಲೇ ಸ್ಫೋಟ

ಇಂದು ಜಮ್ಮು ಮತ್ತು ಕಾಶ್ಮೀರ ಭದ್ರತಾ ಪಡೆಗಳು ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿ ಭಯೋತ್ಪಾದಕ ಕೃತ್ಯ ವಿಫಲಗೊಲಿಸಿತ್ತು. ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿಗಳು, ರಹಸ್ಯವಾಗಿ ಭಯೋತ್ಪಾದಕ ಕತ್ಯಕ್ಕೆ ಸಹಾಯ ನೀಡುತ್ತಿದ್ದರು. ಈ ಕುರಿತ ಮಾಹಿತಿ ಪಡೆದು ರಹಸ್ಯ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು, ಮನೆಯಿಂದ 2,500 ಕೆಜಿಗೂ ಹೆಚ್ಚು ಸ್ಫೋಟಕ ಪತ್ತೆ ಮಾಡಿ ವಶಕ್ಕೆ ಪಡೆದಿದೆ. ಭದ್ರತಾ ಪಡೆಗಳು ಆರಂಭದಲ್ಲಿ ಸುಮಾರು 360 ಕಿಲೋಗ್ರಾಂಗಳಷ್ಟು ಸ್ಫೋಟಕಗಳು ವಶಪಡಿಸಿಕೊಂಡ ಕೆಲವೇ ಗಂಟೆಗಳ ಮತ್ತೊಂದು ಮನೆಯಿಂದ 2,500 ಕೆಜಿ ಐಇಡಿ ವಶಪಡಿಸಿಕೊಳ್ಳಲಾಗಿತ್ತು. ಎರಡು ಮನೆಗಳಿಂದ ಸುಮಾರು 2,900 ಕಿಲೋಗ್ರಾಂಗಳಷ್ಟು ಸ್ಫೋಟಕ ಪತ್ತೆಯಾಗಿದೆ.

ಇದೇ ಪ್ರಕರಣದಲ್ಲಿ 3ನೇ ವೈದ್ಯೆ ಬಂಧನ

ಐಇಡಿ ಸ್ಪೋಟಕ ಪತ್ತೆ ಪ್ರಕರಣದಲ್ಲಿ ಒಟ್ಟು ಮೂವರು ವೈದ್ಯೆಯರ ಬಂಧಿಸಲಾಗಿದೆ. ಲಕ್ನೋ ಮಹಿಳಾ ವೈದ್ಯೆ ಶಾಹೀನ್ ಶಾಹಿದ್‌ನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಡಾ ಶಾಹೀನ್ ಲಕ್ನೋದ ಲಾಲ್ ಬಾಗ್ ನಿವಾಸಿಯಾಗಿದ್ದಾರೆ. ವೈದ್ಯೆಯಾಗಿ ಗುರುತಿಸಿಕೊಂಡಿದ್ದು, ರಹಸ್ಯವಾಗಿ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ನೀಡುತ್ತಿದ್ದರು ಅನ್ನೋ ಆರೋಪ ಕೇಳಿಬಂದಿದೆ. ವೈದ್ಯೆಯನ್ನು ವಿಚಾರಣೆಗಾಗಿ ಶ್ರೀನಗರಕ್ಕೆ ಕರೆದುಕೊಂಡು ಹೋಗಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು