ದೆಹಲಿ ಸ್ಫೋಟಕ್ಕೂ ಪುಲ್ವಾಮಾ ಲಿಂಕ್, ಕಾರು ಮಾಲೀಕ ಸಲ್ಮಾನ್ ವಶಕ್ಕೆ, ನದೀಮ್‌ಗೆ ಹುಡುಕಾಟ

Published : Nov 10, 2025, 11:36 PM IST
Delhi Red Fort blast

ಸಾರಾಂಶ

ದೆಹಲಿ ಸ್ಫೋಟಕ್ಕೂ ಪುಲ್ವಾಮಾ ಲಿಂಕ್, ಕಾರು ಮಾಲೀಕ ಸಲ್ಮಾನ್ ವಶಕ್ಕೆ, ನದೀಮ್‌ಗೆ ಹುಡುಕಾಟ , ದೆಹಲಿ ಸ್ಫೋಟಕ್ಕೂ ಫರೀದಾಬಾದ್ ಸ್ಫೋಟಕ ಪತ್ತೆಗೂ ಲಿಂಕ್ ಇದೆ ಅನ್ನೋ ಅನುಮಾನ ಹೆಚ್ಚಾಗುತ್ತಿದೆ.

ನವದೆಹಲಿ (ನ.10) ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಉಗ್ರರ ಕೈವಾಡದ ಅನುಮಾನ ಬಲವಾಗುತ್ತಿದೆ. ತನಿಖೆ ನಡೆಸುತ್ತಿರುವ ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಹ್ಯುಂಡೈ ಐ20 ಕಾರಿನ ಹಿಂಭಾಗದಲ್ಲಿ ಸ್ಫೋಟವಾಗಿದೆ. ಇಷ್ಟೇ ಅಲ್ಲ ಸ್ಫೋಟಕ ಬಳಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲ ಸ್ಫೋಟಗೊಂಡ ಕಾರು ಫರೀದಾಬಾದ್ ನೋಂದಣಿ ಕಾರಾಗಿದೆ. ಈ ಕಾರಿನ ಮಾಲೀಕ ಸಲ್ಮಾನ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾರನ್ನು ಮಾರಾಟ ಮಾಡಿರುವುದಾಗಿ ಸಲ್ಮಾನ್ ಹೇಳಿದ್ದಾನೆ. ಆದರೆ ಈ ಸ್ಫೋಟದ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಲಿಂಕ್ ಪತ್ತೆಯಾಗಿದೆ.

ದೆಹಲಿ ಸ್ಫೋಟಕ್ಕೂ ಇದೆಯಾ ಪುಲ್ವಾಮಾ ಲಿಂಕ್

ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ ಮೊದಲು ಬ್ಲಾಸ್ಟ್ ಆದ ಕಾರು ಐ20. ಇದರ ಮೊದಲ ನೋಂದಣಿ ಹರ್ಯಾಣ ರಿಜಿಸ್ಟ್ರೇಶನ್ ಹೊಂದಿದೆ. ಇದರ ಮಾಲೀಕ ಸಲ್ಮಾನ್. ಕಾರಿನ ರಿಜಿಸ್ಟ್ರೇಶನ್ ವಿಳಾಸ ಶಾಂತಿನಗರ, ಗುರುಗಾಂವ್, ಹರ್ಯಾಣ ಎಂದಿದೆ. ಈತ ಐಟಿ20 ಕಾರನ್ನು ಮಾರಾಟ ಮಾಡಿದ್ದಾನೆ ಎಂದು ಹೇಳಿದ್ದಾನೆ. ಈತ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ತಾರೀಖ್‌ಗೆ ಕಾರು ಮಾರಾಟ ಮಾಡಿದ್ದಾನೆ. ತಾರೀಖ್ ಈ ಕಾರನ್ನು ನದೀಮ್‌ಗೆ ಮಾರಾಟ ಮಾಡಿದ್ದಾನೆ. ಆದರೆ ನದೀಮ್ ಹೆಸರಿಗೆ ಕಾರು ರಿಜಿಸ್ಟ್ರೇಶನ್ ಆಗಿಲ್ಲ.  ಯಾವುದೇ ದಾಖಲೆಗಳು ವರ್ಗಾವಣೆ ಆಗಿಲ್ಲ. ಇತ್ತ ನದೀಮ್ ನಾಪತ್ತೆಯಾಗಿದ್ದಾನೆ.  ದೆಹಲಿ ಸ್ಫೋಟಕ್ಕೂ ಪುಲ್ವಾಮಾಗೂ ತೀವ್ರ ನಂಟು ಪತ್ತೆಯಾಗುತ್ತಿದೆ.

ಮೊದಲು ಐ20 ಕಾರು ಸ್ಫೋಟಗೊಂಡಿತ್ತು. ಬಳಿಕ ಮತ್ತೊಂದು ಕಾರು ಸ್ಫೋಟಗೊಂಡಿದೆ. ಈ ಸ್ಫೋಟದ ತೀವ್ರತೆಗೆ 8 ರಿಂದ 10 ಕಾರುಗಳು ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು. ಘಟನೆಯಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಹಿಂದೆ ಉಗ್ರರ ಕೈವಾಡವಿದೆ ಅನ್ನೋ ಅನುಮಾನ ಮತ್ತಷ್ಟು ಹೆಚ್ಚಾಗಲು ಕೆಲ ಕಾರಣಗಳಿವೆ.

ಪರೀದಾಬಾದ್ ಸ್ಪೋಟಕ ವಶಕ್ಕೂ ಡೆಲ್ಲಿ ಬ್ಲಾಸ್ಟ್‌ಗೆ ಇದೆಯಾ ಲಿಂಕ್

ಇಂದು (ನ.10) ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರ ಭದ್ರತಾ ಪಡೆ, ಪೊಲೀಸರು ಹರ್ಯಾಣದ ಫರೀಬಾದ್‌ನಲ್ಲಿ ಎರಡು ಮನೆಯಿಂದ 2900 ಕೆಜಿ ಸ್ಫೋಟಕ ವಶಪಡಿಸಿದ್ದಾರೆ. ಬೆಳಗ್ಗೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರೆ ರಾತ್ರಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡುತ್ತಿರುವ ವೈಟ್ ಕಾಲರ್ ಉಗ್ರರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಈ ಪ್ರಕರಣದಲ್ಲಿ ವೈದ್ಯರಾದ ಡಾ ಆದಿಲ್, ಮುಜಾಮಿಲ್ ಸೇರಿ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಭಾರಿ ಪ್ರಮಾಣದಲ್ಲಿ ಸ್ಫೋಟಕ ವಶಕ್ಕೆ ಪಡೆಯುವ ಮೂಲಕ ಉಗ್ರರ ಪ್ಲಾನ್ ವಿಫಲಗೊಳಿಸಲಾಗಿತ್ತು. ಇದೀಗ ದೆಹಲಿಯಲ್ಲಿ ಕಾರು ಸ್ಫೋಟಗೊಂಡ ಪ್ರಕರಣದಲ್ಲಿ ಸ್ಫೋಟವಾಗಿರುವ ಕಾರು ಹರ್ಯಾಣದ ಕಾರಿಗಿದೆ.

ಆದಿಲ್, ಮುಜಾಮಿಲ್ ವಿಚಾರಣೆ

ದೆಹಲಿ ಸ್ಫೋಟದ ಬೆನ್ನಲ್ಲೇ ದೆಹಲಿ ಪೊಲೀಸರು ಇಂದು ಬೆಳಗ್ಗೆ ಅರೆಸ್ಟ್ ಆಗಿರುವ ಶಂಕಿತ ಉಗ್ರರಾದ ವೈದ್ಯ ಆದಿಲ್ ಹಾಗೂ ಮುಜಾಮಿಲ್ ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿ ಕಾರು ಸ್ಫೋಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಗ್ರರ ಕೈವಾಡವಿದೆ ಅನ್ನೋ ಅನುಮಾನಗಳು ಹೆಚ್ಚಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ