Madhavpuram ದೆಹಲಿಯ ಮಹಮ್ಮದ್‌ಪುರ ಈಗ ಮಾಧವಪುರಂ,ಬಿಜೆಪಿ ಘೋಷಣೆ ಬೆನ್ನಲ್ಲೇ ವಿವಾದ ಆರಂಭ!

By Suvarna NewsFirst Published Apr 27, 2022, 7:50 PM IST
Highlights
  • ಉತ್ತರ ಪ್ರದೇಶದ ಬಳಿಕ ಇದೀಗ ದೆಹಲಿಯಲ್ಲಿ ಮರುನಾಮಕರಣ
  • ಹಳೇ ಹೆಸರು ಗುಲಾಮಗಿರಿಯ ಸಂಕೇತ ಎಂದ ಬಿಜೆಪಿ
  • ಹೊಸ ನಾಮಫಲಕ ಹಾಕಿದ ಬಿಜೆಪಿ, ಮತ್ತೊಂದು ವಿವಾದ ಆರಂಭ

ನವದೆಹಲಿ(ಏ.27): ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಪ್ರದೇಶ, ಸ್ಥಳಗಳ ಹೆಸರನ್ನು ಬದಲಾಯಿಸಿ ಪುರಾಣದ ಹೆಸರಿನೊಂದಿಗೆ ಮರುನಾಮಕರಣ ಮಾಡಿದನ್ನು ನಾವು ನೋಡಿದ್ದೇವೆ. ಇದೀಗ ದೆಹಲಿ ಬಿಜೆಪಿ ಮಹಮ್ಮದಪುರ್ ಗ್ರಾಮವನ್ನು ಮಾಧವಪುರಂ ಎಂದು ಮರುನಾಮಕರಣ ಮಾಡಿದೆ. ಹಳೇ ಹೆಸರು ಗುಲಾಮಗಿರಿಯ ಸಂಕೇತ ಎಂದು ಬಿಜೆಪಿ ಹೇಳಿದೆ.

ದೆಹಲಿ ಬಿಜೆಪಿ ಮಹಮ್ಮದಪುರ್ ಹೆಸರನ್ನು ತೆಗೆದು, ಇತಿಹಾಸದಲ್ಲಿದ್ದ ಮಾಧವಪುರಂ ಹೆಸರನ್ನೇ ಇಡಲಾಗಿದೆ. ಹೊಸ ನಾಮಫಲಕವನ್ನು ಅಳವಡಿಸಿರುವ ಬಿಜೆಪಿ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಗುಲಾಮಗಿರಿ ಬಿಟ್ಟಿಲ್ಲ ಎಂದು ಹೇಳಿದೆ.

Latest Videos

ಟಿಪ್ಪು ಎಕ್ಸ್​ಪ್ರೆಸ್ ರೈಲಿಗೆ ಒಡೆಯರ್ ಹೆರಿಡುವಂತೆ ಪ್ರತಾಪ್ ಸಿಂಹ ಆಗ್ರಹ

ಮಾಧವಪುರ ಮರುನಾಮಕರಣ ಹೆಸರಿನ ಪ್ರಸ್ತಾವನೆಗೆ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಅನುಮೋದನೆ ನೀಡಿದೆ. ಕಾರಣ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಹೀಗಾಗಿ ಯಾವುದೇ ಅಡೆ ತಡೆ ಇಲ್ಲದೆ ಮರುನಾಮಕರಣಗೊಂಡಿದೆ. ಇಲ್ಲಿನ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಬಿಜೆಪಿ ಸಾಧಿಸಿದೆ.

ಮಾಧವಪುರ ಎಂದು ಮರುನಾಮಕಣ ಮಾಡಲು ಮುನ್ಸಿಪಲ್ ಕಾರ್ಪರೇಶನ್ ಕಳೆದ ವರ್ಷ ದೆಹಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಈ ಪ್ರಸ್ತಾವನೆ ಸಲ್ಲಿಸಲಾಗಿತ್ತು. ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಸತತ ಪ್ರಯತ್ನದಿಂದ ಇದೀಗ ಮರುನಾಮಕರಣ ಯಶಸ್ವಿಯಾಗಿದೆ.

 

माधवपुरम गांव के नामकरण का प्रस्ताव निगम में पास होने के बाद आज गांव के नामकरण की प्रक्रिया को पूरा किया।

अब से यह गांव मोहम्मदपुर की जगह "माधवपुरम" नाम से जाना जाएगा।

आजादी के 75 वर्ष बाद भी गुलामी का कोई प्रतीक, चिन्ह हमारा हिस्सा हो, ये कोई भी दिल्लीवासी नही चाहता। pic.twitter.com/0GdfL2YD9M

— Adesh Gupta (@adeshguptabjp)

 

ದೆಹಲಿ ಬಿಜೆಪಿ ಈಗಾಗಲೇ ನಗರದ 40 ಪ್ರದೇಶಗಳ ಹೆಸರನ್ನು ಮರುನಾಮಕರಣ ಮಾಡಲು ಆಗ್ರಹಿಸಿದೆ. ಹುಮಾಯೂನ್‌ಪುರ್, ಯೂಸುಫ್ ಸರಾಯ್, ಮಸೂದ್‌ಪುರ್, ಜಮ್ರೂದ್‌ಪುರ್, ಬೇಗಂಪುರ, ಸೈದುಲ್ ಅಜಬ್, ಫತೇಪುರ್ ಬೆರಿ, ಹೌಜ್ ಖಾಸ್ ಮತ್ತು ಶೇಖ್ ಸರಾಯ್ ಸೇರಿದಂತೆ ಹಲವು ಹೆಸರನ್ನು ಬದಲಿಸಲು ಬಿಜೆಪಿ ಆಗ್ರಹಿಸಿದೆ.

ಮುಂಬೈ ಪಾರ್ಕ್‌ಗೆ ಟಿಪ್ಪು ಸುಲ್ತಾನ್ ಹೆಸರು: ಬಿಜೆಪಿ, ವಿಎಚ್‌ಪಿ ತೀವ್ರ ವಿರೋಧ!

ಮುಸ್ಲಿಮ್ ಹೆಸರುಗಳ ಬದಲಾವಣೆಯಿಂದ ಮುಂಬರವು ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಕಳೆದುಕೊಳ್ಳಲಿದೆ ಎಂದು ಆಮ್ ಆದ್ಮಿ ಸಭೆಯಲ್ಲಿ ಉಲ್ಲೇಖಿಸಿದೆ. ಹೀಗಾಗಿ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಆಪ್ ನಿರ್ಧರಿಸಿದೆ. ಇಷ್ಟೇ ಅಲ್ಲ ಯಾವುದೇ ಕಾರಣಕ್ಕೂ ಹೆಸರು ಮರುನಾಮಕರಣಕ್ಕೆ ಅವಕಾಶ ನೀಡಬಾರದು ಎಂದು ಆಪ್ ನಾಯಕರು ಆಗ್ರಹಿಸಿದ್ದಾರೆ.

ಟಿಷರ ಹೆಸರಿನಲ್ಲಿರುವ ರಸ್ತೆಗಳಿಗೆ ಕನ್ನಡಿಗ ಸೇನಾನಿಗಳ ಹೆಸರಿಡಿ: ಸಂಸದ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬ್ರಿಟಿಷರ ಹೆಸರಿನಲ್ಲಿರುವ ಸರ್ಕಾರಿ ಸಂಸ್ಥೆಗಳು ಮತ್ತು ರಸ್ತೆಗಳಿಗೆ ಅಧಿಕೃತವಾಗಿ ಕರ್ನಾಟಕದ ಸ್ವಾತಂತ್ರ್ಯ ವೀರರ ಹೆಸರುಗಳನ್ನು ಮರುನಾಮಕರಣ ಮಾಡುವಂತೆ ಬಿಜೆಪಿ ಸಂಸದ ಪಿ.ಸಿ.ಮೋಹನ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಗಳವಾರ ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿವೆ. ಆದರೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅನೇಕ ಸರ್ಕಾರಿ ಸಂಸ್ಥೆಗಳು ಮತ್ತು ರಸ್ತೆಗಳು ಬ್ರಿಟಿಷರು ಆಡಳಿತಾವಧಿಯಲ್ಲಿಟ್ಟಹೆಸರುಗಳಿಂದ ಇಂದಿಗೂ ಪರಿಚಿತವಾಗಿವೆ. ಹಾಗಾಗಿ ಈ ಹೆಸರುಗಳನ್ನು ಬದಲಿಸುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಬ್ರಿಟಿಷರ ಆಡಳಿತಾವಧಿಯಲ್ಲಿ ಇಟ್ಟಹೆಸರುಗಳಾದ ಶಿವಾಜಿನಗರದ ಲೇಡಿ ಕರ್ಜನ್‌ ರಸ್ತೆಯಲ್ಲಿರುವ ಬೌರಿಂಗ್‌ ಅಂಡ್‌ ಲೇಡಿ ಕರ್ಜನ್‌ ಆಸ್ಪತ್ರೆ, ಚಾಮರಾಜಪೇಟೆಯ ಮಿಂಟೋ ಆಸ್ಪತ್ರೆ, ಕೆ.ಆರ್‌.ಮಾರುಕಟ್ಟೆಬಳಿಯಿರುವ ವಿಕ್ಟೋರಿಯಾ ಆಸ್ಪತ್ರೆ. ಅವೆನ್ಯೂ ರಸ್ತೆ, ಲ್ಯಾವೆಲ್ಲೆ ರಸ್ತೆ, ಕನ್ನಿಂಗ್‌ಹ್ಯಾಮ್‌ ರಸ್ತೆಗಳನ್ನು ಇಂದಿಗೂ ಅದೇ ಹೆಸರಿನಿಂದ ಗುರುತಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

click me!