
ನವದೆಹಲಿ: ಮನುಷ್ಯರಲ್ಲಿ ಎರಡು ಮೂತ್ರಪಿಂಡಗಳಿರುತ್ತವೆ. ಕೆಲವೊಮ್ಮೆ ಅನಾರೋಗ್ಯದಿಂದ ಎರಡರಲ್ಲಿ ಒಂದು ಕಿಡ್ನಿ ಡ್ಯಾಮೇಜ್ ಆದರೂ ಇನ್ನೊಂದರ ಆಧಾರದ ಮೇಲೆ ಮುಂದಿನ ಜೀವನ ಸಾಗಿಸಬಹುದು. ಆದರೆ ನವದೆಹಲಿಯ 47 ವರ್ಷದ ವಿಜ್ಞಾನಿ ದೇವೇಂದ್ರನ ಬಾರ್ಲೇವಾರ್ ಎಂಬವರಿಗೆ 2 ಅಲ್ಲ, 5 ಕಿಡ್ನಿಗಳನ್ನು ಹೊಂದಿದ್ದಾರೆ. ದೇವೇಂದ್ರ ಅವರು ರಕ್ಷಣಾ ಸಚಿವಾಲದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ದೇವೆಂದ್ರ ಅವರಿಗೆ 5 ಕಿಡ್ನಿಗಳಿವೆ ಅದರೆ ನೀವು ನಂಬಲೇಬೇಕು. ಆದರೆ 5ರಲ್ಲಿ ಒಂದೇ ಕಿಡ್ನಿ ಕೆಲಸ ಮಾಡುತ್ತಿದೆ.
ದೇವೇಂದ್ರ ಬಾರ್ಲೇವಾರ್ ಅವರು ಮೂರು ಬಾರಿ ಮೂತ್ರಪಿಂಡ ಕಸಿ (ಕಿಡ್ನಿ ಟ್ರಾನ್ಸ್‌ಪ್ಲಾಂಟ್) ಚಿಕಿತ್ಸೆಗೆ ಒಳಗಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ದೀರ್ಘಕಾಲದಿಂದ ಧರ್ಮೇಂದ್ರ ಬಾರ್ಲ್ವೇರಾ ಕಿಡ್ನಿಗೆ ಸಂಬಂಧಿಸಿದ (CKD) ರೋಗದಿಂದ ಬಳಲುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರಬೇಕು. 2010ರಲ್ಲಿ ಮೊದಲ ಬಾರಿಗೆ ದೇವೇಂದ್ರ ಅವರು ಕಿಡ್ನಿ ಟ್ರಾನ್‌ಪ್ಲಾಂಟ್‌ಗೆ ಒಳಗಾಗಿದ್ದರು. ಈ ವೇಳೆ ತಾಯಿಯೇ ದೇವೇಂದ್ರ ಅವರಿಗೆ ಕಿಡ್ನಿ ದಾನ ಮಾಡಿದ್ದರು. ಈ ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಯಶಸ್ವಿಯಾಗಿದ್ದರಿಂದ ಡಯಾಲಿಸಿಸ್ ಅಗತ್ಯವಿರಲಿಲ್ಲ.
2012ರಲ್ಲಿ ದೇವೇಂದ್ರ ಬಾರ್ಲೇವಾರ್ ಎರಡನೇ ಬಾರಿಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ಗೆ ಒಳಾಗದರು. ಈ ಸಮಯದಲ್ಲಿ ಸಂಬಂಧಿಯೊಬ್ಬರಿಗೆ ಕಿಡ್ನಿಯನ್ನು ದಾನವಾಗಿ ಪಡೆದುಕೊಂಡಿದ್ದರು. 2022ರವರೆಗೆ ದೇವೇಂದ್ರ ಆರೋಗ್ಯ ಚೆನ್ನಾಗಿತ್ತು. ಕೋವಿಡ್ ಸೋಂಕಿಗೆ ಒಳಗಾಗಿದ್ದರಿಂದ ದೇವೇಂದ್ರ ಅವರು ಡಯಾಲಿಸಿಸ್ ಮಾಡಿಸಿಕೊಳ್ಳುವ ಅನಿವಾರ್ಯ ಎದುರಾಗಿತ್ತು. 2023ರಲ್ಲಿ ಮೃತ ವ್ಯಕ್ತಿಯೊಬ್ಬರು ಅಂಗಾಂಗ ದಾನ ಮಾಡಿದ್ರಿಂದ ಮೂರನೇ ಬಾರಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಅಮೃತಾ ಆಸ್ಪತ್ರೆಯ ಡಾ.ಅನಿಲ್ ಶರ್ಮಾ ನೇತೃತ್ವದಲ್ಲಿ ದೇವೇಂದ್ರ ಬಾರ್ಲೆವಾರ್ ಅವರಿಗೆ ಮೂರನೇ ಬಾರಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಲಾಗಿದೆ. ಶಸ್ತ್ರಚಿಕಿತ್ಸೆ 10 ದಿನದ ನಂತರ ದೇವೇಂದ್ರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ . ಮೂರನೇ ದಾನ ಮಾಡಿದ ಮೂತ್ರಪಿಂಡವನ್ನು ಬಾರ್ಲೆವಾರ್ ಅವರ ಸ್ವಂತ ಮೂತ್ರಪಿಂಡ ಮತ್ತು ಇತರ ಕಸಿ ಮೂತ್ರಪಿಂಡದ ಬಲಭಾಗದಲ್ಲಿ ಇರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ದೇವೇಂದ್ರ ಬಾರ್ಲೇವಾರ್ ಅವರಿಗೆ ಮೂರನೇ ಬಾರಿಗೆ ಮೂತ್ರಪಿಂಡದ ಕಸಿ ಮಾಡೋದು ತುಂಬಾ ಸವಾಲಿನ ಕೆಲಸವಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯ ಸಮಸ್ಯೆ ಮತ್ತು ಪದೇ ಪದೇ ಕಸಿ ಶಸ್ತ್ರಚಿಕಿತ್ಸೆ ವಿಫಲವಾಗಿದ್ದರಿಂದ ಅಪಾಯದ ಪ್ರಮಾಣ ಅಧಿಕವಾಗಿತ್ತು. ಈಗಾಗಲೇ ನಾಲ್ಕು ಮೂತ್ರಪಿಂಡಗಳನ್ನು ಹೊಂದಿರುವ ವ್ಯಕ್ತಿಗೆ ಐದನೆಯದು ತುಂಬಾ ಕಷ್ಟಕರವಾಗಿತ್ತು. ತಜ್ಞ ವೈದ್ಯರ ತಂಡದಿಂದಾಗಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಕಿಡ್ನಿ ಪಡೆದ ಬಾರ್ಲೇವಾರ್ ಮತ್ತೊಮ್ಮೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಂದಲ್ಲ ಮೂರು ಬಾರಿ ಕಿಡ್ನಿ ಪಡೆದಿರುವುದು ಬಾರ್ಲೆವಾರ್ ಅವರ ಅದೃಷ್ಟ ಎಂದು ಡಾ.ಅನಿಲ್ ಶರ್ಮಾ ಹೇಳಿದ್ದಾರೆ.
ಇದ್ನನೂ ಓದಿ: ವಿಶ್ವದಲ್ಲಿಯೇ ಅತೀ ಅಪರೂಪ ಪ್ರಕರಣ, 30 ವರ್ಷದ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಕಿಡ್ನಿ ಕಸಿ
ಮೂತ್ರಪಿಂಡ ವೈಫಲ್ಯ ಏಕೆ ಸಂಭವಿಸುತ್ತದೆ ?
ಮೂತ್ರಪಿಂಡದ ಹಾನಿಯ ನಂತರ ಮೂತ್ರಪಿಂಡ ಕಸಿ ಮಾಡಲಾಗುತ್ತದೆ. ಮಧುಮೇಹ (Diabetes) ಮತ್ತು ಅಧಿಕ ರಕ್ತದೊತ್ತಡವು ಮೂತ್ರಪಿಂಡ ವೈಫಲ್ಯಕ್ಕೆ ಎರಡು ದೊಡ್ಡ ಕಾರಣಗಳಾಗಿವೆ. ಅಧಿಕ ರಕ್ತದ ಸಕ್ಕರೆ ಮತ್ತು ಅಧಿಕ ರಕ್ತದೊತ್ತಡವು ಮೂತ್ರಪಿಂಡದ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ ಮೂತ್ರಪಿಂಡವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಮಧುಮೇಹ ಮತ್ತು ಅಧಿಕ ಬಿಪಿಯ ಹೊರತಾಗಿ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಮದ್ಯಪಾನ (Alcohol)ದಂತಹ ಕೆಟ್ಟ ಅಭ್ಯಾಸಗಳಿಂದಲೂ ಮೂತ್ರಪಿಂಡದ ಹಾನಿ ಸಂಭವಿಸಬಹುದು.
ಇದನ್ನೂ ಓದಿ; ಹೊಸ ಮೂತ್ರಪಿಂಡ ಕಸಿ ಮಾಡಿದ ನಂತರ ಅನುಪಯುಕ್ತ ಮೂತ್ರಪಿಂಡವನ್ನು ವೈದ್ಯರು ಏನು ಮಾಡ್ತಾರೆ ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ