ರಾಮಮಂದಿರ ಪ್ರಾಣಪ್ರತಿಷ್ಠೆಗೆ ಅರ್ಧ ದಿನ ರಜೆ ಘೋಷಿಸಿದ ದೆಹಲಿ ಏಮ್ಸ್ ಆಸ್ಪತ್ರೆ, ತುರ್ತು ಸೇವೆ ಲಭ್ಯ!

Published : Jan 20, 2024, 10:17 PM ISTUpdated : Jan 20, 2024, 10:24 PM IST
ರಾಮಮಂದಿರ ಪ್ರಾಣಪ್ರತಿಷ್ಠೆಗೆ ಅರ್ಧ ದಿನ ರಜೆ ಘೋಷಿಸಿದ ದೆಹಲಿ ಏಮ್ಸ್ ಆಸ್ಪತ್ರೆ, ತುರ್ತು ಸೇವೆ ಲಭ್ಯ!

ಸಾರಾಂಶ

ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಈಗಾಗಲೇ ಹಲವು ರಾಜ್ಯಗಳು, ಕೇಂದ್ರ ಸರ್ಕಾರ ರಜೆ ಘೋಷಿಸಿದೆ. ಇದೀಗ ದೆಹಲಿಯ ಏಮ್ಸ್ ಆಸ್ಪತ್ರೆ ಅರ್ಧ ದಿನ ರಜೆ ಘೋಷಿಸಿದೆ. ಆದರೆ ತುರ್ತು ಸೇವೆ ಸೇರಿದಂತೆ ಕೆಲ ಸೇವೆಗಳು ಲಭ್ಯವಿದೆ.

ನವದೆಹಲಿ(ಜ.20) ಆಯೋಧ್ಯೆ ರಾಮ ಮಂದಿರ ದೀಪಾಲಂಕಾರದಿಂದ ಕಂಗೊಳಿಸಿದೆ. ಆಯೋಧ್ಯೆ ಬೀದಿ ಬಿದಿ ಹೂವು ತಳಿರು ತೋರಣಗಳಿಂದ ಅಲಂಕಾರಗೊಂಡಿದೆ. ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಎರಡು ದಿನ ಮಾತ್ರ ಬಾಕಿ. ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಿಸಿದ್ದರೆ, ಹಲವು ರಾಜ್ಯಗಳೂ ರಜೆ ಘೋಷಿಸಿದೆ. ಇದೀಗ ದೆಹಲಿಯ ಏಮ್ಸ್ ಆಸ್ಪತ್ರೆ ಅರ್ಧ ದಿನ ರಜೆ ಘೋಷಿಸಿದೆ. ಜನವರಿ 22ರಂದು ಮಧ್ಯಾಹ್ನ 2.30ರಿಂದ ದೆಹಲಿ ಏಮ್ಸ್ ಆಸ್ಪತ್ರೆ ಎಂದಿನಂತ ಕಾರ್ಯನಿರ್ವಹಿಸಲಿದೆ. ಆದರೆ ಸೋಮವಾರ 2.30ರ ವರಗೆ ತುರ್ತು ಸೇವೆ ಮಾತ್ರ ಲಭ್ಯವಾಗಲಿದೆ.

ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಕಣ್ತುಂಬಿಕೊಳ್ಳಲು ಭಕ್ತರು ಸಜ್ಜಾಗಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳು ಪವಿತ್ರ ಹಾಗೂ ಐತಿಹಾಸಿಕ ರಾಮ ಮಂದಿರ ಪ್ರಾಣಪ್ರತಿಷ್ಠೆ ವೀಕ್ಷಿಸಲು, ಪೂಜೆ, ಭಜನೆಯಲ್ಲಿ ತೊಡಗಿಸಿಕೊಳ್ಳಲು ಅರ್ಧ ದಿನ ರಜೆ ಘೋಷಿಸಲಾಗಿದೆ ಎಂದು ದೆಹಲಿ ಏಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ. ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ರಜೆ ನೀಡಲಾಗಿದೆ ಎಂದು ಏಮ್ಸ್ ಆಡಳಿತ ಮಂಡಳಿ ಹೇಳಿದೆ.

ರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ, ಜ.22ಕ್ಕೆ ಸಾರ್ವಜನಿಕ ರಜೆ ಘೋಷಿಸಿದ ಉತ್ತರ ಪ್ರದೇಶ!

ತುರ್ತು ಸೇವೆ, ಒಪಿಡಿ ವಿಭಾಗ ಸೇರಿದಂತೆ ಕೆಲ ಸೇವೆಗಳು ಎಂದಿನಂತೆ ಇರಲಿದೆ. ಲೇಡಿ ಹಾರ್ಡಿಂಗ್ ಸಫ್ದರ್ಜಂಗ್ ಆಸ್ಪತ್ರೆ ಕೂಡ ಅರ್ಧ ದಿನ ರಜೆ ಘೋಷಿಸಿದೆ. ಇನ್ನು ದೆಹಲಿ ಸರ್ಕಾರ ಕೂಡ ದೆಹಲಿಯಲ್ಲಿ ಅರ್ಧ ದಿನ ರಜೆ ಘೋಷಿಸಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಸ್ತಾಪವನ್ನು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅಂಗೀಕರಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಆರಂಭದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಇದೀಗ ಜನವರಿ 22ರ ಪ್ರಾಣಪ್ರತಿಷ್ಠೆ ದಿನ ಸಾರ್ವಜನಿಕ ರಜೆ ಘೋಷಿಸಿದೆ. ಸರ್ಕಾರಿ ಕಚೇರಿ, ಬ್ಯಾಂಕ್, ಶಾಲಾ ಕಾಲೇಜು, ಖಾಸಗಿ ಸಂಸ್ಥೆ, ಕೇಚರಿಗಳಿಗೂ ರಜೆ ನೀಡಲಾಗಿದೆ. ಕೇಂದ್ರ ಸರ್ಕಾರ ಕೂಡ ಅರ್ಧ ದಿನ ರಜೆ ಘೋಷಿಸಿದೆ. ಈ ಬಗ್ಗೆ  ದೇಶಾದ್ಯಂತ ಭಾರಿ ಸಾರ್ವಜನಿಕ ಬೇಡಿಕೆ ಇತ್ತು. ಅಗಾಧ ಸಾರ್ವಜನಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಜನವರಿ 22 ರಂದು ಕೇಂದ್ರ ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಶೀಘ್ರದಲ್ಲೇ ಅರ್ಜುನ್ ಸರ್ಜಾ ಹನುಮಾನ್ ಮಂದಿರಕ್ಕೆ ಪ್ರಧಾನಿ ಮೋದಿ ಭೇಟಿ, ಮಾತುಕತೆ ರಹಸ್ಯ ಬಿಚ್ಚಿಟ್ಟ ನಟ!

ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೇ ‘ಯಜಮಾನತ್ವ’ ವಹಿಸಿ ಭಾಗಿಯಾಗಲಿದ್ದಾರೆ ಎಂದು ಪೂಜಾವಿಧಿಗಳ ಮುಖ್ಯ ಉಸ್ತುವಾರಿಯಾಗಿರುವ ಪಂಡಿತ್‌ ಲಕ್ಷ್ಮೀಕಾಂತ್‌ ದೀಕ್ಷಿತ್‌ ಸ್ಪಷ್ಟಪಡಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್