ಪೋಸ್ಟ್​ ಮಾರ್ಟಮ್​ನಲ್ಲಿ ದೇಹ ಇನ್ನೇನು ಕೊಯ್ಯಬೇಕು ಎನ್ನುವಷ್ಟರಲ್ಲಿಯೇ ಎದ್ದು ಕುಳಿತ ಕುಡುಕ!

By Suchethana DFirst Published Sep 29, 2024, 5:32 PM IST
Highlights

ಕುಡುಕನೊಬ್ಬ ಸತ್ತ ಎಂದು ವೈದ್ಯರು ಘೋಷಿಸಿದ ಬಳಿಕ ಆತನನ್ನು ಪೋಸ್ಟ್ ಮಾರ್ಟಮ್​ಗೆ ಕರೆದುಕೊಂಡು ಹೋದಾಗ ಆತ ಎದ್ದು ಕುಳಿತ ಶಾಕಿಂಗ್ ಘಟನೆ ನಡೆದಿದೆ. ಆಗಿದ್ದೇನು? 
 

ಶವ ಸಂಸ್ಕಾರಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ಸತ್ತಿದ್ದಾರೆ ಎಂದವರು ಕಣ್ಣು ತೆರೆದಿರುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಆದರೆ ಇದೀಗ ಮರಣೋತ್ತರ ಪರೀಕ್ಷೆ ಸಮಯದಲ್ಲಿ ದೇಹವನ್ನು ಇನ್ನೇನು ಕೊಯ್ಯಬೇಕು ಎನ್ನುವಷ್ಟರಲ್ಲಿಯೇ ಕುಡುಕನೊಬ್ಬ ಎದ್ದು ಕುಳಿತ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ.  ಸತ್ತ ಎಂದು ವೈದ್ಯರು ಘೋಷಿಸಿದ ವ್ಯಕ್ತಿಯೊಬ್ಬ ಕೆಲವು ಗಂಟೆಗಳ ನಂತರ ಇದ್ದಕ್ಕಿದ್ದಂತೆ ಜೀವಂತವಾಗಿರುವ ಘಟನೆ ಇದಾಗಿದೆ.  ಇದು ವೈದ್ಯರು ಮತ್ತು ಪೊಲೀಸರನ್ನು ಕಕ್ಕಾಬಿಕ್ಕಿ ಮಾಡಿದೆ. ಬಿಹಾರ ಷರೀಫ್‌ನ ಸದರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. 
 
ವರದಿಗಳ ಪ್ರಕಾರ, ವ್ಯಕ್ತಿ ಸ್ನಾನಗೃಹದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಶೌಚಾಲಯವನ್ನು ಒಳಗಿನಿಂದ ಮುಚ್ಚಿದ್ದರಿಂದ ಒಳಗೆ ಯಾರೋ ಇದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿಗೆ ಅರ್ಥವಾಯಿತು. ಏನಾದರೂ ಅನಾಹುತ ಸಂಭವಿಸುವ ಭಯದಿಂದ ಅಲ್ಲಿದ್ದ ಆರೋಗ್ಯ ಕಾರ್ಯಕರ್ತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಶೌಚಾಲಯದ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಶೌಚಾಲಯದ ನೆಲದ ಮೇಲೆ ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಪೊಲೀಸರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಆತನ ನಾಡಿಮಿಡಿತವನ್ನು ಪರೀಕ್ಷಿಸಿದರು ಮತ್ತು ಸತ್ತಿರುವುದಾಗಿ ಘೋಷಿಸಿದರು.  ನಿಧಾನವಾಗಿ ಶೌಚಾಲಯದಲ್ಲಿ ಶವ ಪತ್ತೆಯಾದ ಸುದ್ದಿ ಆಸ್ಪತ್ರೆಯಲ್ಲಿ ಕಾಳ್ಗಿಚ್ಚಿನಂತೆ ಹರಡಿತು, ನಂತರ ಅವರನ್ನು ನೋಡಲು ಜನರು ಅಲ್ಲಿ ಜಮಾಯಿಸಿದರು.

ರಣಬೀರ್​ಗಿಂತಲೂ ಮಧ್ಯರಾತ್ರಿ ನನಗೆ ವಿಕ್ಕಿನೇ ಇಷ್ಟ ಎಂದ ತೃಪ್ತಿ ಡಿಮ್ರಿ: ನಟಿ ಕೊಟ್ಟ ಕಾರಣ ಹೀಗಿದೆ ನೋಡಿ!

Latest Videos

ಸಾಕ್ಷ್ಯ ಸಂಗ್ರಹಿಸಲು ವಿಧಿವಿಜ್ಞಾನ ಘಟಕವನ್ನು ಕರೆಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸಲಾಯಿತು.  ತಂಡವು ಶವಪರೀಕ್ಷೆಗಾಗಿ ದೇಹವನ್ನು ಸ್ಥಳಾಂತರಿಸಲು ಪ್ರಾರಂಭಿಸಿದಾಗ, ವ್ಯಕ್ತಿಗೆ  ಪ್ರಜ್ಞೆ ಬಂದಿದೆ. ಇದರಿಂದ ಅಲ್ಲಿದ್ದವರು ಹೌಹಾರಿ ಹೋಗಿದ್ದಾರೆ.  ಈ ವ್ಯಕ್ತಿಯನ್ನು  ರಾಕೇಶ್ ಕೇವಟ್ ಎಂದು ಗುರುತಿಸಲಾಗಿದ್ದು,  ಬಿಹಾರದ ಜಿರೈನ್ ಗ್ರಾಮದವನಾಗಿದ್ದಾನೆ.  ನಾನು ಸತ್ತಿಲ್ಲ; ನಾನು ಬದುಕುತ್ತಿದ್ದೇನೆ ಎಂದು ಕೂಗುತ್ತಿದ್ದಂತೆಯೇ ಎಲ್ಲರೂ ಶಾಕ್​ಗೆ ಒಳಗಾಗಿದ್ದಾರೆ.  ನಂತರ  ವೈದ್ಯರು ರಾಕೇಶ್​ನನ್ನು ಪರೀಕ್ಷಿಸಿ ಆತ  ಉತ್ತಮ ಆರೋಗ್ಯದಿಂದ ಇರುವುದಾಗಿ ಹೇಳಿದರು.  

ಕೊನೆಗೆ ಪರೀಕ್ಷೆ ಮಾಡಿದಾಗ ತಿಳಿದದ್ದು ಏನೆಂದರೆ, ರಾಕೇಶ್​ ಸಿಕ್ಕಾಪಟ್ಟೆ ಕುಡಿದಿದ್ದ.  ತನ್ನ ಪಾದರಕ್ಷೆಗಳನ್ನು ಬಾಗಿಲಿನ ಹೊರಗೆ ಬಿಟ್ಟಿದ್ದ ಆತ ಸೀದಾ ಆಸ್ಪತ್ರೆಯ ಶೌಚಾಲಯದ ಒಳಗೆ ಹೋಗಿದ್ದ. ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ. ಈತನನ್ನು ಪರೀಕ್ಷಿಸಿದ್ದ ವೈದ್ಯರು ಹೃದಯಾಘಾತದಿಂದ ಸತ್ತಿರುವುದಾಗಿ ಘೋಷಿಸಿದ್ದರು. ಆದರೆ ಆತ ಸತ್ತಿಲ್ಲ ಎಂದು ತಿಳಿದ ಮೇಲೆ  ಆತನಿಗೆ ಯಾವುದೇ  ಆರೋಗ್ಯ ಸಮಸ್ಯೆಗಳು ಇಲ್ಲ ಎಂದಿದ್ದಾರೆ. ಅಷ್ಟಕ್ಕೂ ಆತ ಆಸ್ಪತ್ರೆಗೆ ತನ್ನ ಸಂಬಂಧಿಯನ್ನು ನೋಡಲು ಬಂದಿದ್ದ. ತೀವ್ರವಾಗಿ ಕುಡಿದಿದ್ದರೆ ಶೌಚಾಲಯದ ಒಳಗೆ ಹೋದಾಗ ಹೀಗೆಲ್ಲಾ ಆಗಿದೆ ಎಂದು ಕೊನೆಗೆ ತಿಳಿದುಬಂದಿದೆ. ಸದ್ಯ  ಸುರಕ್ಷತಾ ಕ್ರಮವಾಗಿ, ರಾಕೇಶನನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.  

ಜಹೀರ್ ಇಕ್ಬಾಲ್ ಜೊತೆಗಿನ ರಹಸ್ಯ ಸಂಬಂಧದ ಕುರಿತು ಮೊದಲ ಬಾರಿಗೆ ನಟಿ ಸೋನಾಕ್ಷಿ ಸಿನ್ಹಾ ಓಪನ್​ ಮಾತು

click me!