ಭಾರತಕ್ಕೆ ಬೆದರಿ ಫೋನ್‌ ಬಳಕೆ ಬಿಟ್ಟ ದಾವೂದ್‌!

By Kannadaprabha News  |  First Published Dec 4, 2019, 9:10 AM IST

ಭೂಗತ ಲೋಕವನ್ನೇ ಹಿಡಿತದಲ್ಲಿಟ್ಟುಕೊಂಡ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಭಾರತದ ತನಿಖಾ ಸಂಸ್ಥೆಗೆ ಹೆದರಿ ಮೂರು ವರ್ಷಗಳಿಂದ ಫೋನನ್ನೇ ಬಳಸುತ್ತಿಲ್ಲವಂತೆ! 


ನವದೆಹಲಿ (ಡಿ. 04): ಪಾಕಿಸ್ತಾನದ ಕರಾಚಿಯಿಂದಲೇ ಭೂಗತ ಲೋಕದ ಮೇಲೆ ಹಿಡಿತ ಸಾಧಿಸಿರುವ ಭಾರತದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ದಾವೂದ್‌ ಇಬ್ರಾಹಿಂ ಭಾರತದ ತನಿಖಾ ಸಂಸ್ಥೆಗಳ ಕಾರ್ಯಾಚರಣೆಗೆ ಬೆದರಿ ಕಳೆದ 3 ವರ್ಷಗಳಿಂದ ಫೋನ್‌ಗಳನ್ನೇ ಬಳಸುತ್ತಿಲ್ಲ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮಧ್ಯಪೂರ್ವ ಮತ್ತು ಯುರೋಪ್‌ನಲ್ಲಿ ಡಿ-ಕಂಪನಿಯ ಕಾನೂನು ಬಾಹಿರ ಚಟುವಟಿಕೆಗಳ ತಡೆಗಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಕಾರಾರ‍ಯಚರಣೆಗೆ ಇಳಿದ ಬಳಿಕ, ಫೋನ್‌ ಬಳಕೆ ಮಾಡಿದರೆ ನೆಟ್‌ವರ್ಕ್ ಮೇಲೆ ನಿಗಾವಹಿಸಿ ಭಾರತದ ಪೊಲೀಸರು ತನ್ನನ್ನು ಖೆಡ್ಡಾಕ್ಕೆ ಕೆಡುವುತ್ತಾರೆ ಎಂಬ ಭೀತಿಯಿಂದ ದಾವೂದ್‌ ಕಳೆದ 3 ವರ್ಷಗಳಿಂದ ಮೊಬೈಲ್‌ ಬಳಕೆಗೆ ಹಿಂದೇಟು ಹಾಕುತ್ತಿದ್ದಾನೆ ಎನ್ನಲಾಗಿದೆ.

Tap to resize

Latest Videos

ಫೇಸ್‌ಬುಕ್‌ನಲ್ಲಿ ಅಪರಿಚತರೊಂದಿಗೆ ಚಾಟ್ ಮಾಡೋ ಮುನ್ನ ಈ ಸುದ್ದಿ ಓದಿ!

2016ರ ನವೆಂಬರ್‌ನಲ್ಲಿ ದಾವೂದ್‌ ಇಬ್ರಾಹಿಂ ತನ್ನ ಸಹಾಯಕರೊಬ್ಬರೊಂದಿಗೆ ಮಾತನಾಡಿದ 15 ನಿಮಿಷಗಳ ಫೋನ್‌ ರೆಕಾರ್ಡಿಂಗ್‌ ಅನ್ನು ದೆಹಲಿ ಪೊಲೀಸರು ದಾಖಲಿಸಿಕೊಂಡಿದ್ದರು. ಅದಾದ ನಂತರ ಆತನ ಯಾವುದೇ ಸಂಭಾಷಣೆ ಸಿಕ್ಕಿಲ್ಲ.

ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ವ್ಯಕ್ತಿ ಮೋದಿ

ಇದರಲ್ಲಿ ದಾವೂದ್‌ ಕಂಠಪೂರ್ತಿ ಕುಡಿದು ತೀರಾ ಖಾಸಗಿಯಾಗಿ ಮಾತನಾಡಿದ್ದು, ಭೂಗತ ಚಟುವಟಿಕೆ ಅಥವಾ ಕಾರ್ಯಾಚರಣೆಗಳ ಬಗ್ಗೆ ಯಾವುದೇ ಅಂಶಗಳು ದಾಖಲೆಯಾಗಿಲ್ಲ ಎಂದು ಐಪಿಎಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆ ನಂತರ, ಈ ಕುರಿತು ಗುಪ್ತಚರ ದಳ ಮತ್ತು ಬೇಹುಗಾರಿಕೆ ಸಂಸ್ಥೆಯಾದ ರಾ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ದಾವೂದ್‌ನ ಭೂಗತ ಚಟುವಟಿಕೆಗಳ ಮೇಲೆ ಕಣ್ಗಾವಲು ವಹಿಸಲು ಯತ್ನಿಸಲಾಗಿತ್ತು. ಅಲ್ಲದೆ, ಡಿ-ಕಂಪನಿ ಮತ್ತು ಅದರ ಮುಖ್ಯಸ್ಥ ದಾವೂದ್‌ ಇಬ್ರಾಹಿಂ ಹಾಗೂ ಅವನ ಆಪ್ತರ ದೂರವಾಣಿ ಕರೆಗಳನ್ನು ತಡೆ ಹಿಡಿಯುವ ಸಾಮರ್ಥ್ಯ ಭಾರತಕ್ಕಿದೆ. ಆದರೆ, ಆ ನಂತರ ದಾವೂದ್‌ ಫೋನ್‌ಗಳನ್ನೇ ಮಾಡುತ್ತಿಲ್ಲ ಎಂಬಂತಿದೆ. ಹಾಗಂತ ಅವನು ತನ್ನ ಭೂಗತ ಕಾರ್ಯಾಚರಣೆಗಳನ್ನು ಕರಾಚಿಯಿಂದ ಬೇರೆಡೆ ವರ್ಗಾಯಿಸಿದ್ದಾನೆ ಎಂದು ಅರ್ಥವಲ್ಲ. ದಾವೂದ್‌ ಮತ್ತು ಅವನ ಗ್ಯಾಂಗ್‌ ಸದಸ್ಯರು ಪಾಕಿಸ್ತಾನದಲ್ಲೇ ಇರುವುದನ್ನು ಸಾಬೀತುಪಡಿಸುವ ಅಂಶಗಳು ತಮ್ಮ ಬಳಿಯಿವೆ ಎಂದು ಐಪಿಎಸ್‌ ಅಧಿಕಾರಿ ಹೇಳಿದ್ದಾರೆ.

click me!