ಇತ್ತ ಡಿಕೆಶಿ ಬಿಡುಗಡೆ, ಅತ್ತ ದಂಪತಿ ಸೆಲೆಬ್ರಿಟಿಗಳಿಗೆ ED ಸಮನ್ಸ್

By Web DeskFirst Published Oct 28, 2019, 9:33 PM IST
Highlights

ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಇಡಿ ಕರೆ/ ನವೆಂಬರ್ 4 ರಂದು ವಿಚಾರಣೆಗೆ ಬರಲು ಸಮನ್ಸ್/ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಇಕ್ಬಾಲ್ ಮಿರ್ಚಿಯ ಆರ್ಥಿಕ ಅವ್ಯವಹಾರದ ಜೊತೆ ನಂಟು ಹೊಂದಿರುವ ಆರೋಪ

ನವದೆಹಲಿ[ಅ. 28]  ಡಿಕೆ ಶಿವಕುಮಾರ್ ಅವರ   ಇಡಿ ವಿಚಾರಣೆ ದೊಡ್ಡ ಸುದ್ದಿಯಲ್ಲಿರುವಾಗಲೇ  ರಾಜಕುಂದ್ರ ಮತ್ತು ಶಿಲ್ಪಾಶೆಟ್ಟಿಗೆ ED ಸಮನ್ಸ್ ನೀಡಿದೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಇಕ್ಬಾಲ್ ಮಿರ್ಚಿಯ ಆರ್ಥಿಕ ಅವ್ಯವಹಾರದ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ ಚುರುಕು ಮುಟ್ಟಿಸಿದೆ.

ಮಾಜಿ ಸಚಿವ ಪ್ರಫುಲ್ ಪಟೇಲ್ ವಿಚಾರಣೆ ಬಳಿಕ ಸ್ಟಾರ್ ದಂಪತಿಗಳಿಗೆ ಸೋಮವಾರ  ಸಮನ್ಸ್ ಜಾರಿಯಾಗಿದೆ. ಡಿ ಗ್ಯಾಂಗಿನ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ಉದ್ಯಮಿ ರಾಜ್ ಕುಂದ್ರಾಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದೆ. ದಾವೂದ್ ಇಬ್ರಾಹಿಂ ಗ್ಯಾಂಗಿನ ಇಕ್ಬಾಲ್ ಮಿರ್ಚಿ ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿ ನವೆಂಬರ್ 4 ರಂದು ವಿಚಾರಣೆಗೆ ಬರಲು ತಿಳಿಸಲಾಗಿದೆ.

ಡಿಕೆಶಿಗೆ ಗ್ರ್ಯಾಂಡ್ ವೆಲ್ ಕಮ್ : ಶಕ್ತಿ ಪ್ರದರ್ಶನದ ಹಿಂದಿನ ಮರ್ಮವೇನು?

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿನ ಆಸ್ತಿ ವ್ಯವಹಾರ ನೋಡಿಕೊಳ್ಳುತ್ತಿದ್ದ ಎನ್ನಲಾದ ಇಕ್ಬಾಲ್ ಮಿರ್ಚಿಗಾಗಿ ಕೆಲಸ ಮಾಡುತ್ತಿದ್ದ ಆರೋಪಿತ ವ್ಯಕ್ತಿಯೊಬ್ಬರು ನೀಡಿದ್ದ ಹೇಳಿಕೆ ಕುಂದ್ರಾಗೆ ಮುಳುವಾಗಿದೆ.  ಐಪಿಎಲ್ ಮ್ಯಾಚ್ ಫಿಕ್ಸಿಂಗ್, ಬಿಟ್ ಕಾಯಿನ್ ಅವ್ಯವಹಾರಗಳಲ್ಲಿ ಈ ದಂಪತಿ ಸಿಲುಕಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಇಕ್ಬಾಲ್ ಮಿರ್ಚಿ ಆಪ್ತ ಹುಮಾಯುನ್ ಮರ್ಚಂಟ್ ನನ್ನು ಬಂಧಿಸಲಾಗಿತ್ತು. ನಂತರ ಬೆಂಗಳೂರು ಮೂಲದ 45 ವರ್ಷ ವಯಸ್ಸಿನ ರಿಂಕು ದೇಶಪಾಂಡೆ ಎಂಬ ಮಹಿಳೆಯನ್ನು ಮನಿಲಾಂಡ್ರಿಂಗ್ (ಪಿಎಂಎಲ್ ಎ) ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು.

ಪ್ರಮುಖವಾಗಿ ಜಾರಿ ನಿರ್ದೇಶನಾಲಯ ಹೊರ ದೇಶದಲ್ಲಿನ ವಹಿವಾಟುಗಳ ಮೇಲೆ ಕಣ್ಣಿಡುತ್ತದೆ. ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕತ್ವವನ್ನು ಶಿಲ್ಪಾ ಶೆಟ್ಟಿ ಹೊಂದಿದ್ದರು. ಫಿಕ್ಸಿಂಗ್ ಆರೋಪದಲ್ಲಿ 2 ವರ್ಷ ಕಾಲ ರಾಜಸ್ಥಾನ ರಾಯಲ್ಸ್ ಟೂರ್ನಿಯಿಂದ ಹೊರುಳಿಯಬೇಕಾಗಿ ಬಂದಿತ್ತು.

 

click me!