ದೇಶದಲ್ಲೀಗ ದುಪ್ಪಟ್ಟು ಲಾಭದ ಆಸೆ ತೋರಿಸಿ ವಂಚಿಸುವ ಹಂದಿ ವಧೆ ಹೂಡಿಕೆ ಹಗರಣ: ಕೇಂದ್ರ ಗೃಹ ಇಲಾಖೆ

By Kannadaprabha News  |  First Published Jan 3, 2025, 7:34 AM IST

ದೇಶದ ಅಸಂಖ್ಯಾತ ನಿರುದ್ಯೋಗಿ ಯುವಜನರು, ಗೃಹಿಣಿಯರು, ವಿದ್ಯಾರ್ಥಿಗಳು, ಮತ್ತಿತರರು ಇವರ ಬಲೆಗೆ ಬಿದ್ದು ನಿತ್ಯ ಭಾರಿ ಮೊತ್ತದ ಹಣ ಕಳೆದುಕೊಳ್ಳುತ್ತಿದ್ದಾರೆಂದು ಕೇಂದ್ರ ಗೃಹ ಇಲಾಖೆಯ ವಾರ್ಷಿಕ ವರದಿಯಲ್ಲಿ ಹೇಳಿದೆ. 


ನವದೆಹಲಿ (ಜ.03): ಆಕರ್ಷಕ ಹೂಡಿಕೆ, ದುಪ್ಪಟ್ಟು ಲಾಭದ ಆಸೆ ತೋರಿಸಿ ವಂಚಿಸುವ ವ್ಯವಸ್ಥಿತ ಜಾಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಾಚರಿಸುತ್ತಿದ್ದು, ದೇಶದ ಅಸಂಖ್ಯಾತ ನಿರುದ್ಯೋಗಿ ಯುವಜನರು, ಗೃಹಿಣಿಯರು, ವಿದ್ಯಾರ್ಥಿಗಳು, ಮತ್ತಿತರರು ಇವರ ಬಲೆಗೆ ಬಿದ್ದು ನಿತ್ಯ ಭಾರಿ ಮೊತ್ತದ ಹಣ ಕಳೆದುಕೊಳ್ಳುತ್ತಿದ್ದಾರೆಂದು ಕೇಂದ್ರ ಗೃಹ ಇಲಾಖೆಯ ವಾರ್ಷಿಕ ವರದಿಯಲ್ಲಿ ಹೇಳಿದೆ. ಚೀನಾದಲ್ಲಿ 2016ರಲ್ಲಿ ಆರಂಭವಾದ ಈ ಜಾಲ ಇದೀಗ ವಿಶ್ವಾದ್ಯಂತ ಕೋಟ್ಯಂತರ ಜನರನ್ನು ವಂಚಿಸುತ್ತಿದೆ. ಹೆಚ್ಚಾಗಿ ಸೈಬರ್‌ ಖದೀಮರು ಗೂಗಲ್‌ ಸರ್ವೀಸ್‌ ವೇದಿಕೆಯನ್ನು ಬಳಸಿಕೊಂಡು ಹೂಡಿಕೆಯ ಜಾಹೀರಾತು ಲಿಂಕ್‌ ನೀಡಿ ಹಗರಣದ ಜಾಲ ಬೀಸುತ್ತಾರೆ. ಇಂಥ ಹಗರಣಕ್ಕೆ ಹಂದಿ ವಧೆ ಹಗರಣ ಅಥವಾ ಹೂಡಿಕೆ ಹಗರಣ ಎಂಬ ಹೆಸರೂ ಇದೆ. 

ಚೀನಾದಲ್ಲಿ ಆರಂಭ: ಈ ಹಗರಣ ಮೊದಲಿಗೆ 2016ರಲ್ಲಿ ಚೀನಾದಲ್ಲಿ ಶುರುವಾಯಿತು. ಸೈಬರ್‌ ಕ್ರಿಮಿನಲ್‌ಗಳು ಸುಲಭವಾಗಿ ಮೋಸಹೋಗಬಹುದಾದ ವ್ಯಕ್ತಿಗಳ ವಿಶ್ವಾಸಗಳಿಸಿ ನಂತರ ಕ್ರಿಪ್ಟೋ ಕರೆನ್ಸಿ ಅಥವಾ ಇತರೆ ಆಕರ್ಷಕ ಯೋಜನೆಗಳಲ್ಲಿ ಹಣ ಹೂಡುವಂತೆ ಆಮಿಷವೊಡ್ಡುತ್ತಾರೆ. ಹಂದಿಗಳನ್ನು ಚೆನ್ನಾಗಿ ತಿನ್ನಿಸಿ ಕೊಬ್ಬಿಸಿದ ಬಳಿಕ ಕಸಾಯಿಖಾನೆಗೆ ತಳ್ಳುವಂತೆ ಇಲ್ಲೂ ಹೂಡಿಕೆದಾರರ ವಿಶ್ವಾಸಗಳಿಸಿ ಸಾಕಷ್ಟು ಹಣ ಹೂಡಿಕೆ ಮಾಡಿಸಿದ ನಂತರ ವಂಚನೆ ಮಾಡಲಾಗುತ್ತದೆ.

Tap to resize

Latest Videos

ಎಲ್‌ಪಿಜಿ ದರ 14 ರು. ಇಳಿಕೆ ಮಾಡಿದ ಕೇಂದ್ರ ಸರ್ಕಾರ: ರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ವಾಣಿಜ್ಯ ಅಡುಗೆ ಅನಿಲ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. 19 ಕೇಜಿ ವಾಣಿಜ್ಯ ಎಲ್‌ಪಿಜಿ ದರವನ್ನು 14.5 ರು. ಇಳಿಕೆ ಮಾಡಿದೆ. ಇದರ ಜೊತೆಗೆ ವೈಮಾನಿಕ ಇಂಧನ ದರವನ್ನು ಪ್ರತಿ 1000 ಲೀಟರ್‌ಗೆ 1401 ರು. ಕಡಿತಗೊಳಿಸಿದೆ. ದರ ಇಳಿಕೆ ಬಳಿಕ ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ದರ 1804 ರು. ಆಗಿದ್ದರೆ, ವಿಮಾನದ ಇಂಧನ ದರವು 90455 ರು. ಆಗಲಿದೆ. ವೈಮಾನಿಕ ಇಂಧನ ದರ ಸತತ 2 ಏರಿಕೆ ಬಳಿಕ ಇಳಿಕೆ ಕಂಡಿದೆ. ಇನ್ನು ವಾಣಿಜ್ಯ ಎಲ್‌ಪಿಜಿ ದರ ಸತತ 5 ಏರಿಕೆ ಬಳಿಕ ಇಳಿಕೆ ಕಂಡಿದೆ.

ಮಂಗಳಸೂತ್ರ ಕಸಿಯುತ್ತಿರುವ ಕೇಂದ್ರ ಸರ್ಕಾರ: ಕಾಂಗ್ರೆಸ್‌ ಕಿಡಿ

ಒಪ್ಪಂದ ಅನ್ವಯ ಪರಸ್ಪರ ಅಣ್ವಸ್ತ್ರ ಮಾಹಿತಿ ವಿನಿಮಯ ಮಾಡಿದ ಭಾರತ- ಪಾಕ್‌: 1988ರಲ್ಲಿ ಮಾಡಿಕೊಂಡ ಒಪ್ಪಂದದ ಅನ್ವಯ, ಭಾರತ ಮತ್ತು ಪಾಕಿಸ್ತಾನ ದೇಶಗಳು ಬುಧವಾರ ತಮ್ಮ ತಮ್ಮ ದೇಶದಲ್ಲಿ ಇರುವ ಅಣ್ವಸ್ತ್ರಗಳ ಕುರಿತ ಮಾಹಿತಿಯನ್ನು ಪರಸ್ಪರ ಹಂಚಿಕೊಂಡಿವೆ. ಪರಮಾಣು ಸ್ಥಾಪನೆಗಳು ಮತ್ತು ಸೌಲಭ್ಯಗಳ ಮೇಲಿನ ದಾಳಿಯನ್ನು ನಿಷೇಧಿಸುವ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ ಈ ವಿನಿಮಯ ನಡೆದಿದೆ.‘ಭಾರತ ಮತ್ತು ಪಾಕಿಸ್ತಾನ ರಾಜತಾಂತ್ರಿಕ ಮಾರ್ಗಗಳ ಮೂಲಕ ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಪರಮಾಣುಗಳ ಸ್ಥಾಪನೆ ಮತ್ತು ಸೌಲಭ್ಯಗಳ ಪಟ್ಟಿಯನ್ನು ಏಕಕಾಲದಲ್ಲಿ ವಿನಿಮಯ ಮಾಡಿಕೊಂಡಿದೆ. ಪರಮಾಣುಗಳ ಸ್ಥಾಪನೆ ಮತ್ತು ಸೌಲಭ್ಯದ ನಡುವಿನ ದಾಳಿಯನ್ನು ನಿಲ್ಲಿಸುವ ಕಾರಣಕ್ಕೆ ಒಪ್ಪಂದ ನಡೆದಿದೆ’ ಎಂದು ಸಚಿವಾಲಯ ಹೇಳಿದೆ.

click me!