
ಮುಂಬೈ (ಆ.08) ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಾಲ ಕಳೆಯುವವರ ಸಂಖ್ಯೆ ಹೆಚ್ಚು. ಫ್ರೆಂಡ್ ರಿಕ್ವೆಸ್ಟ್ ಬಂದಾಗ ಫ್ರೊಫೈಲ್ ಚೆಕ್ ಮಾಡಿ, ಸ್ನೇಹಿತರು, ಆಪ್ತರ ಹೆಸರಲ್ಲಿದ್ದರೆ ಖಚಿತಪಡಿಸಿಕೊಳ್ಳಿ. ಅನಾಮಿಕರಾದರೆ ಅನಿವಾರ್ಯವಾಗಿದ್ದರೆ, ಪರಿಶೀಲಿಸಿ ರಿಕ್ವೆಸ್ಟ್ ಸ್ವೀಕರಿಸಿದರೆ ಉತ್ತಮ. ನಿವೃತ್ತಿ ಜೀವನದಲ್ಲಿದ್ದ 80 ಹರೆಯದ ವೃದ್ಧರೊಬ್ಬರು ಹಾಯಾಗಿ ಜೀವನ ಸಾಗಿಸುತ್ತಿದ್ದರು. ಬ್ಯಾಂಕ್‌ನಲ್ಲಿ ತಮ್ಮ ಜೀವನದ ಉಳಿತಾಯದ ಹಣ, ಪ್ರತಿ ದಿನ ಮೊಬೈಲ್‌ನಲ್ಲಿ ಒಂದಷ್ಟು ಹೊತ್ತು ಜಾಲಾಡುತ್ತಾ ಕಾಲ ಕಳೆಯುತ್ತಿದ್ದರು. ಇದರ ನಡುವೆ ಬಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಬರೋಬ್ಬರಿ 9 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.
ವಿಶ್ರಾಂತಿ ಜೀವನದಲ್ಲಿದ್ದ ವೃದ್ಧಿ ಸೋಶಿಯಲ್ ಮೀಡಿಯಾದಲ್ಲಿ ಬರುವ ತಳುಕು ಬಳುಕು ರೀಲ್ಸ್‌ನಿಂದು ತುಂಬಾ ಪ್ರಭಾವಿತನಾಗಿದ್ದ. ತನ್ನ ಸೋಶಿಯಲ್ ಮೀಡಿಯಾದಲ್ಲಿ ಶಾರ್ವಿ ಅನ್ನೋ ಮಹಿಳೆಯ ಪೋಸ್ಟ್‌ಗಳನ್ನು ನೋಡಿ ಮರುಳಾಗಿದ್ದ ವೃದ್ಧಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಆದರೆ ಈ ಫ್ರೆಂಡ್ ರಿಕ್ವೆಸ್ಟ್‌ನ್ನು ಶಾರ್ವಿ ಸ್ವೀಕರಿಸಿರಲಿಲ್ಲ. ಇತ್ತ ವೃದ್ಧಿ ಕೂಡ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಶಾರ್ವಿ ಮನಸ್ಸಿನಿಂದ ದೂರವಾಗುತ್ತಿದ್ದಂತೆ ಅಚಾನಕ್ಕಾಗಿ ಒಂದು ಫ್ರೆಂಡ್ ರಿಕ್ವೆಸ್ಟ್ ಆಗಮಿಸಿದೆ.
ಶಾರ್ವಿ ಹೆಸರಲ್ಲಿ ವೃದ್ಧಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಎರಡೇ ನಿಮಿಷದಲ್ಲಿ ವೃದ್ಧಿ ಆಕ್ಸೆಪ್ಟ್ ಮಾಡಿದ್ದಾನೆ. ಬಳಿಕ ಮೆಸೇಜ್ ಆರಂಭಗೊಂಡಿದೆ. ಚಾಟಿಂಗ್ ಶುರುವಾಗಿದೆ. ಮೊಬೈಲ್ ನಂಬರ್ ಹಂಚಿಕೊಂಡಿದ್ದಾರೆ. ಬಳಿಕ ವ್ಯಾಟ್ಸಾಪ್ ಮೂಲಕ ಚಾಟಿಂಗ್ ಶುರುವಾಗಿದೆ. ಕರೆ ಮಾಡಿ ಮಾತಾಡಲು ಆರಂಭಿಸಿದ್ದಾರೆ. ತಾನು ಗಂಡನಿಂದ ವಿಚ್ಚೇದನ ಪಡೆದಿದ್ದು, ಮಕ್ಕಳ ಜೊತೆಗಿದ್ದೇನೆ ಎೆಂದು ಹೇಳಿಕೊಂಡಿದ್ದಾಳೆ. ಮಕ್ಕಳಿಗೆ ಆರೋಗ್ಯ ಸರಿ ಇಲ್ಲ, ಶಾಲಾ ಫೀಸ್ ಎಂದು 20 ಸಾವಿರ, 30 ಸಾವಿರ ರೂಪಾಯಿ ಹಣ ಪಡೆದುಕೊಳ್ಳುತ್ತಿದ್ದಳು. ಇತ್ತ ವೃದ್ಧ ಅಯ್ಯೋ ಪಾಪಾ ಎಂದು ಹಣ ನೀಡಿದ್ದ.
ಕೆಲ ದಿನಗಳಲ್ಲಿ ಕವಿತಾ ಹೆಸರಿನಲ್ಲಿ ಮೆಸೇಜ್ ಬಂದಿದೆ. ತನಗೆ ಶಾರ್ವಿ ಗೊತ್ತು ಎಂದಿದ್ದಾಳೆ. ನಿಮ್ಮ ಜೊತೆ ಗೆಳೆತನದಲ್ಲಿರಬೇಕು ಎಂದು ಮೆಸೇಜ್ ಮಾಡಿದ್ದೇನೆ. ಒಂದಷ್ಟು ಸಮಯ ಚಾಟಿಂಗ್ ಮಾಡೋಣ ಎಂದೆಲ್ಲಾ ಮೆಸೇಜ್ ಕಳುಹಿಸಿದ್ದಾಳೆ. ಇತ್ತ ಶಾರ್ವಿ ಜೊತೆಗೆ ಮತ್ತೊಬ್ಬಳು ಎಂದು ವೃದ್ಧಿ ಒಕೆ ಎಂದಿದ್ದಾನೆ. ಕೆಲ ಹೊತ್ತಲ್ಲೇ ಕವಿತಾ ಸಂದೇಶದ ಜೊತೆ ಅಶ್ಲೀ ಫೋಟೋಗಳು ಬಂದಿದೆ. ಇಲ್ಲಿಂದ ವೃದ್ಧನ ಸಂಕಷ್ಟ ಹೆಚ್ಚಾಗಿದೆ.
ಶಾರ್ವಿ ತಂಗಿ ಎಂದು ದಿನಾಝ್ ಮಹಿಳೆ ಕರೆ ಮಾಡಿದ್ದಾಳೆ, ಬಳಿಕ ಜಾಸ್ಮಿನ್ ಎಂಬ ಮಹಿಳೆ ಕೂಡ ಕರೆ ಮಾಡಿದ್ದಾಳೆ. ನಾಲ್ಕು ಹೆಸರಿನಲ್ಲಿ ಕರೆ ಮಾಡಿ, ಚಾಟಿಂಗ್ ಮಾಡಿ ವೃದ್ಧನ ಖೆಡ್ಡಾಗೆ ಬೀಳಿಸಿದ್ದಾರೆ. ಚಾಟಿಂಗ್ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾರೆ. ಅಶ್ಲೀಲ ಫೋಟೋಗಳನ್ನು ಕಳುಹಿಸಿರುವ ಸ್ಕ್ರೀನ್ ಶಾಟ್ ಇದೆ. ಬಹಿರಂಗಪಡಿಸುತ್ತೇನೆ. ಬದುಕನ್ನೇ ಅಂತ್ಯಗೊಳಿಸುತ್ತೇನೆ ಎಂದೆಲ್ಲಾ ಬೆದರಿಸಿದ್ದಾರೆ. ಬೆದರಿದ ವೃದ್ಧಿ 2023ರಿಂದ ಇಲ್ಲೀವರೆಗೆ 734 ಟ್ರಾನ್ಸಾಕ್ಷನ್ ಮಾಡಿದ್ದಾರೆ. ಈ ಮೂಲಕ ಒಟ್ಟ 8.7 ಕೋಟಿ ರೂಪಾಯಿ ಕಳುಹಿಸಿದ್ದಾರೆ. ತನ್ನ ಎಲ್ಲಾ ಉಳಿತಾಯ ಮುಗಿದಾಗ, ಮಗನಿಂದ 5 ಲಕ್ಷ ರೂಪಾಯಿ, ಮಗಳ ಗಂಡನಿಂದ 2.5 ಲಕ್ಷ ರೂಪಾಯಿ ಪಡೆದು ಅನಾಮಿಕ ಮಹಿಳೆಗೆ ನೀಡಿದ್ದಾರೆ.
ಮಗನಿಗೆ ಅನುಮಾನ ಬಂದು ತಂದೆ ಬಳಿ ಕೇಳಿದಾಗ ಪರಿಸ್ಥಿತಿ ಅರಿವಾಗಿದೆ. ತನ್ನ ಎಲ್ಲಾ ದುಡ್ಡು ಕಳೆದುಕೊಂಡ ವೃದ್ಧ ತೀವ್ರ ಆಘಾತ, ಆತಂಕ, ಒತ್ತಡದಿಂದ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಕುಟುಂಬಸ್ಥರು ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಮಗ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾಲ್ಕು ಹೆಸರಿನಲ್ಲಿ ಮೆಸೇಜ್ ಮಾಡಿದ್ದು ಒಬ್ಬಳೇ ಮಹಿಳೆ ಅನ್ನೋದು ಪೊಲೀಸರಿಗೆ ಸುಳಿವು ಸಿಕ್ಕಿದೆ. ಮುಂದಿನ ತನಿಖೆ ನಡೆಯುತ್ತಿದೆ. ಇತ್ತ ವೃದ್ಧಿನ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ