
ಪಣಜಿ : ಭಾರತವು ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹರ್ಷಿಸಿದರು.ದಕ್ಷಿಣ ಗೋವಾದ ಕಾಣಕೋಣ ಬಳಿಯ ಪರ್ತಗಾಳಿಯಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದ 550ನೇ ವರ್ಷದ ಆಚರಣೆಯಲ್ಲಿ ಪಾಲ್ಗೊಂಡು ಶ್ರೀರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮಾಡಿದ ಮೋದಿ, ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಧಾಮ ಮತ್ತು ಉಜ್ಜಯಿನಿಯಲ್ಲಿ ಮಹಾಕಾಲ ಮಹಾಲೋಕ ಕಾರಿಡಾರ್ ನಿರ್ಮಾಣವು ರಾಷ್ಟ್ರದ ಜಾಗೃತಿಯನ್ನು ಪ್ರತಿಬಿಂಬಿಸುತ್ತದೆ’ ಎಂದರು.
ಇದೇ ವೇಳೆ, ‘ಗೋಕರ್ಣ ಮಠ ಹಾಗೂ ಉಡುಪಿಯ ಶ್ರೀಕೃಷ್ಣ ಮಠಗಳ ನಡುವೆ ಸಾಮ್ಯತೆ ಇದೆ. ಇವು ಒಂದೇ ಆಧ್ಯಾತ್ಮಿಕತೆಯ ಜೀವನಧಾರೆಗಳು’ ಎಂದ ಮೋದಿ, ‘ಇವೆರಡೂ ಭಾರತದ ಪಶ್ಚಿಮ ಕರಾವಳಿ ತೀರಗಳಿಗೆ ಸಾಂಸ್ಕೃತಿಕ ಶಕ್ತಿ ನೀಡುವ ಮಠಗಳು. ಒಂದೇ ದಿನ 2 ಮಠಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸೌಭಾಗ್ಯ’ ಎಂದು ಶ್ಲಾಘಿಸಿದರು.
‘ವಿಕಸಿತ ಭಾರತದ ಹಾದಿ ಜನರ ಒಗ್ಗಟ್ಟಿನ ಮೂಲಕ ಸಾಗುತ್ತದೆ. ಸಮಾಜವು ಒಗ್ಗೂಡಿದಾಗ, ಪ್ರತಿಯೊಂದು ವಲಯವು ಒಟ್ಟಾಗಿ ನಿಂತಾಗ ದೇಶವು ಮುನ್ನಡೆ ಸಾಧಿಸುತ್ತದೆ’ ಎಂದೂ ಹೇಳಿದರು.
ಪಣಜಿ: ಗೋಕರ್ಣ ಪರ್ತಗಾಳಿ ಮಠದ 550ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗೋವಾದಲ್ಲಿ 77 ಅಡಿ ಎತ್ತರದ ವಿಶ್ವದ ಅತಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದು ವಿಶ್ವದ ಅತಿ ಎತ್ತರದ ರಾಮನ ಪ್ರತಿಮೆ ಎನ್ನಿಸಿಕೊಂಡಿದೆ.ಕರ್ನಾಟಕದ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಧ್ಯಾಹ್ನ ಪ್ರಧಾನಿ ಗೋವಾದ ಪರ್ತಗಾಳಿ ಮಠದಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾದರು.
ಈ ವೇಳೆ ರಾಮನ ಪ್ರತಿಮೆ ಲೋಕಾರ್ಪಣೆಗೊಳಿಸಿದರು. ಇದನ್ನು ಗುಜರಾತ್‌ನಲ್ಲಿ ಏಕತಾ ಪ್ರತಿಮೆಯನ್ನು ವಿನ್ಯಾಸ ಗೊಳಿಸಿದ ಶಿಲ್ಪಿ ರಾಮ್ ಸುತಾರ್ ನಿರ್ಮಿಸಿದ್ದಾರೆ.ರಾಮನ ಪ್ರತಿಮೆ ಲೋಕಾರ್ಪಣೆಗೊಳಿಸಿದ ಬಳಿಕ ಪ್ರಧಾನಿ ಅವರು ಪರ್ತಗಾಳಿ ಮಠ ಅಭಿವೃದ್ಧಿಪಡಿಸಿದ ರಾಮಾಯಣ ಥೀಮ್‌ಪಾರ್ಕ್ ಉದ್ಯಾನವನ ಉದ್ಘಾಟಿಸಿ. ವಿಶೇಷ ಅಂಚೆ ಚೀಟಿ ಮತ್ತು ಕಾರ್ಯಕ್ರಮದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ