ಕೊರೋನಾ ನಿರ್ವಹಣೆ: ಕೇಂದ್ರದ ಸಾಧನೆ ಬಗ್ಗೆ ಪುಸ್ತಕ!

By Kannadaprabha NewsFirst Published Aug 4, 2021, 9:52 AM IST
Highlights

* 45 ಕೋಟಿ ಡೋಸ್‌ ವಿತರಣೆ

* ವಿಶ್ವದಲ್ಲಿ ಒಟ್ಟು ವಿತರಣೆಯಲ್ಲಿ ಭಾರತದ ಪಾಲೇ ಶೇ.10

* ಕೋವಿಡ್‌ ನಿಗ್ರಹ: ಕೇಂದ್ರದ ಸಾಧನೆ ಕುರಿತು ಪುಸ್ತಕ

ನವದೆಹಲಿ(ಅ.04): ಕೋವಿಡ್‌ ನಿಯಂತ್ರಣ ಮತ್ತು ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಾಧನೆ ಏನೆಂದು ತಿಳಿಸುವ ಕಿರು ಪುಸ್ತಕವೊಂದನ್ನು ಮಂಗಳವಾರ ಬಿಜೆಪಿ ಸಂಸದರಿಗೆ ನೀಡಲಾಯಿತು. ಕೊರೋನಾ ನಿಗ್ರಹ ವಿಚಾರದಲ್ಲಿ ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ, ಚುನಾವಣಾ ರಾಜ್ಯಗಳ ಪರವಾಗಿ ಕೆಲಸ ಮಾಡಿದೆ ಎಂದು ವಿಪಕ್ಷಗಳು ಟೀಕಿಸಿದ್ದವು. ಅದರ ಬೆನ್ನಲ್ಲೇ ಸರ್ಕಾರದ ಸಾಧನೆ ವಿವರಿಸುವ ಪುಸ್ತಕ ಬಿಡುಗಡೆ ಮಾಡಿ ಮಾಹಿತಿ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಪುಸ್ತಕ ಬಿಡುಗಡೆ ಮಾಡಿದೆ.

ಹಾಗೆಯೇ ಜಗತ್ತಿನಲ್ಲಿಯೇ ಭಾರತ ಅತಿ ವೇಗವಾಗಿ ಲಸಿಕೆ ವಿತರಿಸಿದೆ. ಈವರೆಗೆ ಭಾರತ ಸುಮಾರು 45 ಕೋಟಿ ಡೋಸ್‌ ಲಸಿಕೆ ವಿತರಿಸಿದ್ದರೆ, ಅಮೆರಿಕ 34.3 ಕೋಟಿ, ಬ್ರೆಜಿಲ್‌ 13.7 ಕೋಟಿ, ಬ್ರಿಟನ್‌ 8.4 ಕೋಟಿ ಡೋಸ್‌ ನೀಡಿದೆ. ಜಗತ್ತಿನಲ್ಲಿ ಈವರೆಗೆ ಹಂಚಿಕೆಯಾದ ಲಸಿಕೆ ಪೈಕಿ ಶೇ.10ರಷ್ಟುಲಸಿಕೆಯನ್ನು ಭಾರತವೊಂದೇ ವಿತರಿಸಿದೆ ಎಂಬೆಲ್ಲಾ ಮಾಹಿತಿ ನೀಡಲಾಗಿದೆ.

ಮೋದಿ ಏನೇನು ಮಾಡಿದರು?

10 ಇಷ್ಟು ಸಲ ದೇಶವನ್ನು ಉದ್ದೇಶಿಸಿ ಭಾಷಣ

21 ಇಷ್ಟು ಬಾರಿ ರಾಜ್ಯಗಳ ಜೊತೆ ಸಮಾಲೋಚನೆ

40 ಇಷ್ಟು ಪ್ರಮಾಣದಲ್ಲಿ ಕೋವಿಡ್‌ ಸಭೆ ನಡೆಸಿದ್ದಾರೆ.

ದೇಶವಾರು ಪಟ್ಟಿ

ಭಾರತ 45.0 ಕೋಟಿ

ಅಮೆರಿಕ 34.3 ಕೋಟಿ

ಬ್ರೆಜಿಲ್‌ 13.7 ಕೋಟಿ

ಬ್ರಿಟನ್‌ 8.4 ಕೋಟಿ

34 ಕೋಟಿ ಲಸಿಕೆ ವಿತರಣೆಗೆ ಪಡೆದ ದಿನ

ಭಾರತ 166

ಅಮೆರಿಕ 221

click me!