2.08 ಲಕ್ಷ ಕೇಸು, 4157 ಜನರ ಸಾವು: ಪಾಸಿಟಿವಿಟಿ ಶೇ.9.42ಕ್ಕೆ ಇಳಿಕೆ!

By Kannadaprabha NewsFirst Published May 27, 2021, 7:47 AM IST
Highlights

* 2.08 ಲಕ್ಷ ಕೇಸು, 4157 ಜನರ ಸಾವು

* ದಾಖಲೆಯ 22.17 ಲಕ್ಷ ಪರೀಕ್ಷೆ

* ಪಾಸಿಟಿವಿಟಿ ಶೇ.9.42ಕ್ಕೆ ಇಳಿಕೆ

ನವದೆಹಲಿ(ಮೇ.27): ಬುಧವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 2,08,921 ಜನರಲ್ಲ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.

ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.71 ಕೋಟಿಗೆ ತಲುಪಿದೆ. ಇನ್ನು ಇದೇ ಅವಧಿಯಲ್ಲಿ 4157 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 3.11ಲಕ್ಷಕ್ಕೆ ತಲುಪಿದೆ.

'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'

ಕಳೆದ 24 ಗಂಟೆಯಲ್ಲಿ 2.95 ಲಕ್ಷ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 24.95 ಲಕ್ಷಕ್ಕೆ ಇಳಿದಿದೆ.

ಚೇತರಿಕೆ ಪ್ರಮಾಣ ಶೇ.89.66ಕ್ಕೆ ಏರಿದೆ. ಪಾಸಿಟಿವಿಟಿ ದರ ಮತ್ತಷ್ಟುಇಳಿಕೆ ಕಂಡು ಶೇ.9.42ಕ್ಕೆ ತಲುಪಿದೆ. ಇನ್ನು ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಶೇ.1.15ಕ್ಕೆ ಕುಸಿದಿದೆ. ಎಂದು ಸರ್ಕಾರ ಮಾಹಿತಿ ನೀಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!