ದೇಶ, ರಾಜ್ಯದಲ್ಲಿ ಕೊರೋನಾ ಅಭಿಯಾನ, ಹೀಗಿದೆ ಸ್ಥಿತಿಗತಿ!

Published : Jun 27, 2021, 11:19 AM ISTUpdated : Jun 27, 2021, 11:23 AM IST
ದೇಶ, ರಾಜ್ಯದಲ್ಲಿ ಕೊರೋನಾ ಅಭಿಯಾನ, ಹೀಗಿದೆ ಸ್ಥಿತಿಗತಿ!

ಸಾರಾಂಶ

* ಕೊರೋನಾ ಹಾವಳಿ ಮಧ್ಯೆ ದೇಶದಲ್ಲಿ ಮುಂದುವರೆದ ಲಸಿಕೆ ಅಭಿಯಾನ * ದೇಶ, ರಾಜ್ಯದಲ್ಲಿ ಎಲ್ಲಿಗೆ ತಲುಪಿದೆ ವ್ಯಾಕ್ಸಿನೇಷನ್ ಡ್ರೈವ್? * ದೇಶದ ಸರಾಸರಿಗಿಂತ ಕರ್ನಾಟಕದಲ್ಲಿ ಲಸಿಕೆ ಪಡೆದವರ ಸರಾಸರಿಯೇ ಹೆಚ್ಚು

ನವದೆಹಲಿ(ಜೂ.27): ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ಭರದಿಂದ ಸಾಗಿದೆ. ಡಿಸೆಂಬರ್‌ನೊಳಗೆ ಇಡೀ ದೇಶದ ಅರ್ಹ ನಾಗರಿಕರಿಗೆ ಲಸಿಕೆ ನೀಡುವ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಸರ್ಕಾರ ಹೊಂದಿದೆ. ಇನ್ನು ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ ಜನರು ಕೂಡಾ ಕೊರೋನಾ ಎರಡನೇ ಅಲೆ ಬಂದ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ಲಸಿಕೆ ಪಡೆಯಲು ನೋಂದಾವಣೆ ಮಾಡಿಕೊಳ್ಳುತ್ತಿದ್ದು, ಕೇಂದ್ರಗಳತ್ತ ಧಾವಿಸುತ್ತಿದ್ದಾರೆ. ಹೀಗಿರುವಾಗ ಲಸಿಕೆ ಪೂರೈಕೆಯಲ್ಲಿ ಕೊಂಚ ವಿಳಂಬವಾಗುತ್ತಿದೆಯಾದರೂ, ಈ ಕೊರತೆ ನೀಗಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ.

ಫೇಕ್ ಕ್ಯಾಂಪ್‌ನಲ್ಲಿ ಲಸಿಕೆ ಹಾಕಿಸ್ಕೊಂಡಿದ್ದ ನಟಿ, ಸಂಸದೆಗೆ ಅನಾರೋಗ್ಯ

ಹೀಗಿರುವಾಗ ದೇಶದಲ್ಲಿ ಲಸಿಕೆ ಅಭಿಯಾನ ಎಲ್ಲಿಗೆ ತಲುಪಿದೆ ಎಂಬ ಕುತೂಹಲ ಕಾಡುವುದು ಸಹಜ. ಅದರಲ್ಲೂ ಕಳೆದೊಂದು ವಾರದಿಂದ ಲಸಿಕೆ ಅಭಿಯಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ರಾಜ್ಯಗಲೂ ಈ ನಿಟ್ಟಿನಲ್ಲಿ ಗಮನ ಹರಿಸುತ್ತಿವೆ. ಕಳೆದೊಂದು ವಾರದಲ್ಲಿ ಅತೀ ಹೆಚ್ಚು ಲಸಿಕೆ ನೀಡಿದ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ ಎರಡನೇ ಹಾಗೂ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 

ಒಟ್ಟಾರೆಯಾಗಿ ಎಷ್ಟು ಲಸಿಕೆ?

ದೇಶದಲ್ಲಿ ಈವರೆಗೂ ಒಟ್ಟು 31,65,59,644 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇದರಲ್ಲಿ 26,17,27,189 ಮಂದಿ ಕೇವಲ ಮೊದಲ ಡೋಸ್‌ ಪಡೆದಿದ್ದರೆ, 5,48,32,455 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ(3,10,33,034 ಲಸಿಕೆ) ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ(3,04,53,930 ಲಸಿಕೆ) ಎರಡನೇ ಸ್ಥಾನದಲ್ಲಿದೆ.  ಈ ಪಟ್ಟಿಯಲ್ಲಿ ಕರ್ನಾಟಕ(2,16,22,687 ಲಸಿಕೆ) ಐದನೇ ಸ್ಥಾನದಲ್ಲಿದೆ.

18 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಫಟಾಫಟ್ ಲಸಿಕೆ!

ಭಾರತ: ಅರ್ಹರು(18 ವರ್ಷಕ್ಕಿಂತ ಮೇಲ್ಪಟ್ಟವರು): 95 ಕೋಟಿ
ಕನಿಷ್ಠ ಮೊದಲ ಡೋಸ್ ಪಡೆದವರು: 28.02%
ಎರಡೂ ಡೋಸ್ ಪಡೆದವರು: 5.77%

ಕರ್ನಾಟಕ: ಅರ್ಹರು(18 ವರ್ಷಕ್ಕಿಂತ ಮೇಲ್ಪಟ್ಟವರು): 5.11 ಕೋಟಿ
ಕನಿಷ್ಠ ಮೊದಲ ಡೋಸ್ ಪಡೆದವರು: 35.42%
ಎರಡೂ ಡೋಸ್ ಪಡೆದವರು: 6.85%

ಬೆಂಗಳೂರು ನಗರ+BBMP: ಅರ್ಹರು(18 ವರ್ಷಕ್ಕಿಂತ ಮೇಲ್ಪಟ್ಟವರು): 1 ಲಕ್ಷ
ಕನಿಷ್ಠ ಮೊದಲ ಡೋಸ್ ಪಡೆದವರು: 54.16%
ಎರಡೂ ಡೋಸ್ ಪಡೆದವರು: 9.58%

ಈ ಅಂಕಿ ಅಂಶಗಳನ್ನು ಗಮನಿಸಿದರೆ ಭಾರತದಲ್ಲಿ ಈವರೆಗೆ ವಿತರಣೆಯಾದ ಮೊದಲ ಹಾಗೂ ಎರಡನೇ ಲಸಿಕೆಯ ಸರಾಸರಿಗಿಂತ, ಕರ್ನಾಟಕದಲ್ಲಿ ವಿತರಣೆಯಾದ ಲಸಿಕೆಯ ಸರಾಸರಿ ಹೆಚ್ಚಿದೆ ಎಂಬುವುದು ಉಲ್ಲೇಖನೀಯ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ