ಕೊರೋನಾ ಲಸಿಕೆ ವಿಚಾರವಾಗಿ 50 ವರ್ಷ ಮೇಲ್ಪಟ್ಟವರಿಗೆ ವಿಶೇಷ ಎಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ಇದರ ವಿಶೇಷತೆ, ಪ್ರಯೋಜ, ಬಳಕೆ ಏನು..? ಇಲ್ಲಿ ಓದಿ
Covid-19 ವ್ಯಾಕ್ಸೀನಗ ಇಂಟೆಲಿಜೆನ್ಸ್ ನೆಟ್ವರ್ಕ್ನ ಡಿಜಿಟಲ್ ಎಪ್ಲಿಕೇಷನ್ ವರ್ಷನ್ 2.0ನಲ್ಲಿ ಸ್ವಯಂ ನೋಂದಣಿ ಮಾಡಲು ಸಾಧ್ಯವಾಗಲಿದೆ. ಕೊರೋನಾ ಲಸಿಕೆ ಪಡೆಯುವ ಫಲಾನುಭವಿಗಳಿಗಾಗಿ ಈ ಎಪ್ಲಿಕೇಷನ್ ಸಿದ್ಧವಾಗಿದ್ದು, ಶೀಘ್ರವೇ ಲಾಂಚ್ ಆಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
CO-Win 2.0 ವಿಶೇಷವಾಗಿ ದೇಶದಲ್ಲಿ ಕೊರೋನಾ ಲಸಿಕೆ ಹಂಚಲು ಸಿದ್ಧಪಡಿಸಲಾಗಿದೆ. ಇದಲ್ಲಿ 50 ವರ್ಷ ಮತ್ತು ಮೇಲ್ಪಟ್ಟವರು ನೋಂದಣಿ ಮಾಡಿಕೊಳ್ಳಬಹುದಾಗಿದೆ.
undefined
ಲಸಿಕೆ ಪಡೆದ ಬಳಿಕ ಮೃತ ಮಹಿಳೆಗೆ 50 ಲಕ್ಷ ಪರಿಹಾರ.
ಪ್ರಧಾನಿಯವರ ಮುಖ್ಯ ಕಾರ್ಯದರ್ಶಿ ಪಿಕೆ ಮಿಶ್ರಾ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ನಾಲ್ಕನೇ ಹಂತದ ಸಭೆಯಲ್ಲಿ ಕೊರೋನಾ ಲಸಿಕೆ ನೀಡುವ ಕಾರ್ಯದ ಪ್ರಕ್ರಿಯೆ ಬಗ್ಗೆ ಚರ್ಚಿಸಲಾಗಿದೆ.
ಕೋವಿಡ್ -19 ವ್ಯಾಕ್ಸಿನೇಷನ್‌ನ ಮುಂದಿನ ಹಂತದಲ್ಲಿ, ಖಾಸಗಿ ವಲಯದ ಆರೋಗ್ಯ ಸೌಲಭ್ಯಗಳನ್ನು ಮಹತ್ವದ ರೀತಿಯಲ್ಲಿ ಸೇರಿಸಲು ಸರ್ಕಾರ ಯೋಜಿಸಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಿದ್ದಾರೆ.
ಕೊರೋನಾ ಲಸಿಕೆ ಹಾಕಿಸಿಕೊಂಡವರು ಮದ್ಯಪಾನ ಮಾಡಬಹುದಾ?
ಭಾರತವು ಪ್ರಸ್ತುತ ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್‌ಲೈನ್ ಸ್ಟಾಫ್‌ಗೆ ಕೋವಿಡ್ -19 ಲಸಿಕೆ ನೀಡುತ್ತಿದ್ದು, ದೇಶಾದ್ಯಂತ ಮುಂದಿನ ಹಂತದಲ್ಲಿ ಮಾರ್ಚ್‌ನಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆಗಳನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಹೇಳಿದ್ದಾರೆ. ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಜನವರಿ 16 ರಂದು ಪ್ರಾರಂಭವಾಯಿತು.