ಮದುವೆಯಲ್ಲಿ ಅದನ್ನೇ ಮರತೆ ನವ ಜೋಡಿ, 5 ನಿಮಿಷದಲ್ಲಿ ಸಮಸ್ಯೆಗೆ ಪರಿಹಾರ ಹುಡುಕಿದ್ದು ಹೇಗೆ?

Published : Dec 28, 2025, 09:09 PM IST
Wedding ceremony

ಸಾರಾಂಶ

ಮದುವೆಯಲ್ಲಿ ಅದನ್ನೇ ಮರತೆ ನವ ಜೋಡಿ, 5 ನಿಮಿಷದಲ್ಲಿ ಸಮಸ್ಯೆಗೆ ಪರಿಹಾರ ಹುಡುಕಿದ್ದು ಹೇಗೆ?, ಮದುವೆ ಕಾರ್ಯಗಳು ನಡೆಯುತ್ತಿರುವ ನಡುವೆ ದಿಢೀರ್ ಇಬ್ಬರಿಗೂ ತಮ್ಮ ಮರೆವು ಗೊತ್ತಾಗಿದೆ. ಇತ್ತ ಮದುವೆ ಪ್ರಕ್ರಿಯೆ ಮುಂದುವರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮದುವೆ ಕಾರ್ಯಗಳು ಆರಭಗೊಂಡಿದೆ. ನವ ಜೋಡಿ ಮಂಟಪದಲ್ಲಿ ಕುಳಿತಿದ್ದಾರೆ. ಆದರೆ ಏಕಾಏಕಿ ಮದುವೆ ಸಮಾರಂಭ ಮುಂದುವರಿಸಲು ಸಾದ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ವಧು ಹಾಗೂ ವರ ಇಬ್ಬರೂ ಸಿಂದೂರ ಮರೆತಿದ್ದಾರೆ. ಮದುವೆಯಲ್ಲಿ ಸಿಂದೂರಕ್ಕಿರುವ ಪ್ರಾಮುಖ್ಯತೆ ಬಿಡಿಸಿ ಹೇಳಬೇಕಾಗಿಲ್ಲ. ಸಿಂದೂರ ತೊಡಿಸದೇ ಮದುವೆ ಮುಂದಿನ ಕಾರ್ಯಗಳು ನಡೆಯುವುದಿಲ್ಲ. ಆದರೆ ಸಿಂದೂರವನ್ನು ಪಕ್ಕದ ಟೌನ್‌ನಿಂದ ಹುಡುಕಿ ತರುವುದು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಅಲ್ಲೀವರೆಗೆ ಮದುವೆ ಕಾರ್ಯ ಸ್ಥಗಿತಗೊಳಿಸುವುದು ಶುಭವಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಮಸ್ಯೆಗೆ ನಿಮಿಷದಲ್ಲಿ ಪರಿಹಾರ ಕಂಡುಕೊಂಡು ಮದುವೆ ಸರಾಗವಾಗಿ ನಡೆದ ಘಟನೆ ನಡೆದಿದೆ.

ನವ ಜೋಡಿಗಳ ಮದುವೆಯಲ್ಲಿ ಸಿಂದೂರ ಮರೆತ ಜೋಡಿ

ವರ ಹಾಗೂ ವಧು ಎಲ್ಲಾ ತಯಾರಿಯೊಂದಿಗೆ ಆಗಮಿಸಿದ್ದಾರೆ. ಹಲವು ಜವಾಬ್ದಾರಿಗಳನ್ನು ಈವೆಂಟ್ ಕಂಪನಿಗಳಿಗೆ ನೀಡಿದ್ದಾರೆ. ಕುಟುಂಬಸ್ಥರು ಎಲ್ಲರು ರಿಲ್ಯಾಕ್ಸ್ ಮೂಡ್‌ನಲ್ಲಿ ಕುಳತಿದ್ದರು. ಎಲ್ಲಾ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದರು. ಆದರೆ ಮದುವೆ ತರಾತುರಿಯಲ್ಲಿ ಸಿಂದೂರ ತರಲು ಮರೆತಿದ್ದಾರೆ. ತಕ್ಷಣಕ್ಕೆ ಸಿಂದೂರ ಎಲ್ಲಿ ಸಿಗುತ್ತೆ? ತರಲು ಹೋಗುವವರು ಯಾರು? ಎಲ್ಲಿದೆ? ಹೀಗೆ ನೂರಾರು ಪ್ರಶ್ನೆಗಳು ಉದ್ಭವಿಸಿದೆ. ಈ ವೇಳೆ ಕುಟುಂಬಸ್ಥರು ಬೇರೆ ದಾರಿ ಕಾಣದೆ ಬ್ಲಿಂಕಿಟ್ ಮೂಲಕ ಸಿಂದೂರ ಬುಕ್ ಮಾಡಿದ್ದಾರೆ.

15 ನಿಮಿಷದಲ್ಲಿ ಸಿಂದೂರ ಡೆಲಿವರಿ

ಸಿಂದೂರ ಬುಕ್ ಮಾಡಿದ 15 ನಿಮಿಷದಲ್ಲಿ ಮದುವೆ ಮಂಟಪಕ್ಕೆ ಡೆಲಿವರಿ ಆಗಿದೆ. ಸಿಂದೂರ ಪಡೆದು ವರ, ವಧುವಿಗೆ ಹಣೆಗೆ ಸಿಂದೂರ ಇಟ್ಟು ಮದುವೆ ಸಂಪ್ರದಾಯ ಮುಂದುವರಿಸಿದ್ದಾರೆ. ಇದು ಮದುವೆಯ ಆರತಕ್ಷತೆಯ ಕಾರ್ಯ್ರಮವಾಗಿತ್ತು. ಸಿಂದೂರ ಅವಶ್ಯಕತೆಯಾಗಿತ್ತು. ಕೆಲ ಹೊತ್ತು ವಧು ವರ ಮಾತ್ರವಲ್ಲ ಕುಟುಂಬಸ್ಥರು ಸಿಂದೂರಕ್ಕಾಗಿ ಕಾಯಬೇಕಾಯಿತು. ಆದರೆ ಹೆಚ್ಚಿನ ಸಮಯ ವಿಳಂಬವಿಲ್ಲದೆ ಸಿಂದೂರ ಡೆಲಿವರಿಯಾಗಿತ್ತು.

ಸಿಂದೂರವೆ ತಂದಿಲ್ಲ ಎಂದಾಗ ಕುಟುಂಬಸ್ಥರು, ಸಂಬಂಧಿಕರು ನಕ್ಕು ಸುಸ್ತಾಗಿದ್ದರು. ಪ್ರಮುಖ ವಸ್ತುಗಳನ್ನೇ ಮರೆತಿದ್ದೀರಿ? ಮದುವೆ ಬಳಿಕ ಈ ಮರೆವು ಅಪಾಯ ತಂದೊಡ್ಡಲಿದೆ ಎಂದು ಕುಟುಂಬಸ್ಥರು ವ್ಯಂಗ್ಯವಾಡಿದ್ದಾರೆ. ಇತ್ತ ಸಿಂದೂರ ಇಟ್ಟು ಕಾರ್ಯಕ್ರಮ ಮುಗಿಸಿದ್ದಾರೆ. ಮದುವೆಈ ಸಿಂದೂರ ಮರೆತ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಮರೆವು ಸಹಜ, ಆದರೆ ಸಿಂದೂರವೇ ಮರತರೇ ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇದು ಪ್ರಚಾರಕ್ಕಾಗಿ ಮಾಡಿದ ವಿಡಿಯೋ, ವಧು ವರರ ಪ್ರಚಾರವೋ ಅಥವಾ ಇ ಕಾಮರ್ಸ್ ಕಂಪನಿಯ ಪ್ರಚಾರವೋ ಎಂದು ಪ್ರಶ್ನಿಸಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿಗ್ವಿಜಯ್ ಹೊಗಳಿಕೆ ಬೆನ್ನಲ್ಲೇ RSSನ್ನು ಅಲ್ ಖೈದಾ ಉಗ್ರ ಸಂಘಟನೆ ಎಂದ ಕಾಂಗ್ರೆಸ್ ನಾಯಕ
ಕೋಳಿಗಳಲ್ಲಿ ಹಕ್ಕಿ ಜ್ವರ ಆತಂಕ; ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಚಿಕನ್ ಊಟಕ್ಕೆ FSSAI ನಿಷೇಧ!