ಮಗು ಕಳೆದುಕೊಂಡ ನೋವಿನಲ್ಲೂ ಮಹಾನ್ ಕೆಲಸ, 2 ದಿನದ ಶಿಶು ದೇಹ ದಾನ ಮಾಡಿದ ಪಾಲಕರು

Published : Dec 13, 2024, 12:18 PM ISTUpdated : Dec 13, 2024, 12:22 PM IST
ಮಗು ಕಳೆದುಕೊಂಡ ನೋವಿನಲ್ಲೂ ಮಹಾನ್ ಕೆಲಸ, 2 ದಿನದ ಶಿಶು ದೇಹ ದಾನ ಮಾಡಿದ ಪಾಲಕರು

ಸಾರಾಂಶ

ಹರಿದ್ವಾರದಲ್ಲಿ ಹೃದಯ ಸಮಸ್ಯೆಯಿಂದಾಗಿ ಎರಡುವರೆ ದಿನದ ಹೆಣ್ಣು ಮಗು ಮೃತಪಟ್ಟಿದೆ. ದುಃಖತಪ್ತ ಪೋಷಕರಾದ ರಾಮ್‌ಮೆಹರ್ ಮತ್ತು ನ್ಯಾನ್ಸಿ ಮಗುವಿನ ದೇಹವನ್ನು ಡೂನ್ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ. ವೈದ್ಯಕೀಯ ಶಿಕ್ಷಣಕ್ಕೆ ನೆರವಾಗಲು ದೇಹ ದಾನ ಮಾಡಿದ ದಂಪತಿ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇದು ದೇಶದಲ್ಲೇ ಇಷ್ಟು ಚಿಕ್ಕ ವಯಸ್ಸಿನ ಮಗುವಿನ ದೇಹದಾನದ ಮೊದಲ ಪ್ರಕರಣವಾಗಿದೆ.

ಮಗು ಹೊರಗಿನ ಪ್ರಪಂಚ ನೋಡ್ತಿದ್ದಂತೆ ತಾಯಿ – ತಂದೆ ಸಂತೋಷ ಎಲ್ಲೆ ಮೀರುತ್ತೆ. ಇಡೀ ಪ್ರಪಂಚವೇ ಮಗುವಾಗುತ್ತೆ. ಆದ್ರೆ ಈ ದಂಪತಿಗೆ ಮಗುವನ್ನು ಸರಿಯಾಗಿ ಕಣ್ತುಂಬಿಕೊಳ್ಳುವ ಭಾಗ್ಯ ಕೂಡ ಇಲ್ಲ. ಹುಟ್ಟಿದ ಎರಡೇ ದಿನಕ್ಕೆ ಮಗು ಸಾವನ್ನಪ್ಪಿದೆ. ಈ ದುಃಖದಲ್ಲೂ ಪಾಲಕರು ಉತ್ತಮ ಕೆಲಸ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮಗುವಿನ ದೇಹ ದಾನ (Child body donation) ಮಾಡಿ, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಘಟನೆ ಉತ್ತರಾಖಂಡ (Uttarakhand)ನಲ್ಲಿ ನಡೆದಿದೆ. ಹರಿದ್ವಾರದ ಜ್ವಾಲಾಪುರದ ಪುರುಷೋತ್ತಮ ನಗರದ ನಿವಾಸಿಗಳಾದ 30 ವರ್ಷದ ರಾಮ್‌ಮೆಹರ್ ಮತ್ತು ಅವರ ಪತ್ನಿ ನ್ಯಾನ್ಸಿ ತಮ್ಮ 2.5 ದಿನದ ಹೆಣ್ಣು ಮಗುವಿನ ದೇಹವನ್ನು ವೈದ್ಯಕೀಯ ಶಿಕ್ಷಣ (medical education)ಕ್ಕಾಗಿ ದಾನ ಮಾಡಿದ್ದಾರೆ. ದಂಪತಿ ತಮ್ಮ ಮಗಳ ದೇಹವನ್ನು ಡೂನ್ ವೈದ್ಯಕೀಯ ಕಾಲೇಜಿನ ಅನ್ಯಾಟಮಿ ವಿಭಾಗಕ್ಕೆ ದಾನ ಮಾಡಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ನ್ಯಾನ್ಸಿಯನ್ನು ಡೂನ್ ಆಸ್ಪತ್ರೆ (Doon Hospital)ಗೆ ದಾಖಲಿಸಲಾಗಿತ್ತು. ಡಿಸೆಂಬರ್ 8ರಂದು ನ್ಯಾನ್ಸಿಗೆ ಸಿಸೇರಿಯನ್ ಆಗಿತ್ತು. ನ್ಯಾನ್ಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು. ಆದ್ರೆ  ಮಗುವನ್ನು ಎತ್ತಿ ಆಡಿಸುವ ಭಾಗ್ಯ ನ್ಯಾನ್ಸಿಗಿರಲಿಲ್ಲ. ಹುಟ್ಟಿದ ಎರಡೇ ದಿನಕ್ಕೆ ನ್ಯಾನ್ಸಿ ಮುದ್ದಾದ ಹೆಣ್ಣು ಮಗು ಸಾವನ್ನಪ್ಪಿದೆ. 

18ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಡಿ ಗುಕೇಶ್ ಪಡೆದ ಬಹುಮಾನ ಎಷ್ಟು ಕೋಟಿ ಗೊತ್ತಾ?

ಡೂನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅನುರಾಗ್ ಅಗರ್ವಾಲ್ ಪ್ರಕಾರ, ಬಾಲಕಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಈ ಕಾರಣದಿಂದಾಗಿ ಆಕೆಯನ್ನು ಬೇರೆ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.   ಮಗು ಸಾವಿನಿ ನಂತ್ರ ಪಾಲಕರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಮಗುವಿನ ದೇಹ ದಾನ ಮಾಡಲು ರಾಮ್‌ಮೆಹರ್ ಮತ್ತು ನ್ಯಾನ್ಸಿ ಒಪ್ಪಿಕೊಂಡಿದ್ದಾರೆ. ಇದಾದ ನಂತ್ರ ದಂಪತಿ ದಧೀಚಿ ದೇಹದಾನ ಸಮಿತಿಯ ಅಧಿಕಾರಿಗಳನ್ನು ಸಂಪರ್ಕಿಸಿ ಬಾಲಕಿಯ ದೇಹವನ್ನು ದಾನ ಮಾಡಿದ್ದಾರೆ. 

ನವಜಾತ ಶಿಶುವಿಗೆ ಸರಸ್ವತಿ ಎಂದು ನಾಮಕರಣ ಮಾಡಿದ್ದಾರೆ ಅಂಗರಚನಾ ಶಾಸ್ತ್ರ ವಿಭಾಗದ ಡಾ.ರಾಜೇಶ್ ಮೌರ್ಯ.  ಸರಸ್ವತಿ ಜ್ಞಾನದ ದೇವತೆಯಾಗಿದ್ದು, ಈ ಬಾಲಕಿ ತನ್ನ ಮೂಲಕ ಮಗುವಿನ ಅಂಗರಚನಾಶಾಸ್ತ್ರವನ್ನು ಕಲಿಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾಳೆ. ಇದಲ್ಲದೇ, ದೇಶದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಹದಾನ ಮಾಡಿದ ಮೊದಲ ಪ್ರಕರಣ ಇದಾಗಿದೆ ಎಂದು ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಬಾಲಕಿಯ ಅಂಗಾಂಗಗಳನ್ನು ಡೂನ್ ವೈದ್ಯಕೀಯ ಕಾಲೇಜಿನ ಮ್ಯೂಸಿಯಂನಲ್ಲಿ ಇರಿಸಲಾಗುವುದು.

2034ರಲ್ಲಿ ನಡೆಯಲಿದೆ ಒನ್‌ ನೇಷನ್‌, ಒನ್‌ ಎಲೆಕ್ಷನ್‌?

ಮಗುವನ್ನು ಕಳೆದುಕೊಂಡ ನ್ಯಾನ್ಸಿ ದುಃಖದಲ್ಲಿದ್ದಾರೆ. ನಾನು ನನ್ನ ಮಗಳನ್ನು ಸರಿಯಾಗಿ ಅಪ್ಪಿಕೊಂಡಿಲ್ಲ, ನೋಡಿಲ್ಲ. ಆಗ್ಲೇ ಮಗು ನನ್ನಿಂದ ದೂರವಾಗಿದೆ. ಆಕೆ ನನಗೆ ಸಿಕ್ಕಿಲ್ಲ, ಆದ್ರೆ ಆಕೆ ದೇಹವನ್ನು ದಾನ ಮಾಡುವ ಮೂಲಕ ಅವಳನ್ನು ಅಮರ ಮಾಡುತ್ತೇನೆ ಎಂದು ನ್ಯಾನ್ಸಿ ಹೇಳಿದ್ದಾರೆ. ನನ್ನ ಮಗು ಮಹಾನ್ ಕೆಲಸ ಮಾಡಿದ್ದಾಳೆ. ಆರಂಭದಲ್ಲಿ ದೇಹ ದಾನ ಮಾಡಲು ನಾನು ಹಿಂಜರಿದಿದ್ದೆ. ಆದ್ರೆ ನಂತ್ರ ನನ್ನ ಹೆಂಡತಿ ಮತ್ತು ನಾನು ದಾನ ಮಾಡುವ ಮಹತ್ವದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನ್ಯಾನ್ಸಿ ಪತಿ ರಾಮ್ ಮೆಹರ್ ಹೇಳಿದ್ದಾರೆ.  ಹರಿದ್ವಾರ ಜಿಲ್ಲೆಯ ಪುರುಷೋತ್ತಮ ನಗರ ಗ್ರಾಮದ ರಾಮ್‌ಮೆಹರ್ ಮತ್ತು ನ್ಯಾನ್ಸಿ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಇದು ನ್ಯಾನ್ಸಿಯ ಎರಡನೇ ಮಗುವಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ