Savitri Jindal: ಕಾಂಗ್ರೆಸ್ ಪಕ್ಷ ತೊರೆದ ಭಾರತದ ಶ್ರೀಮಂತ ಮಹಿಳೆ

By Santosh Naik  |  First Published Mar 28, 2024, 12:56 PM IST

Savitri Jindal Net Worth: ಒಪಿ ಜಿಂದಾಲ್ ಗ್ರೂಪ್‌ನ ಅಧ್ಯಕ್ಷರಾದ ಸಾವಿತ್ರಿ ಜಿಂದಾಲ್ ಅವರು ಭಾರತದ ಅಗ್ರ ಬಿಲಿಯನೇರ್‌ಗಳ ಪೈಕಿ ಒಬ್ಬರು. 2 ಲಕ್ಷ ಕೋಟಿಗಂತ ಅಧಿಕ ಮೌಲ್ಯದ ಸಂಪತ್ತನ್ನು ಹೊಂದಿರುವ ಇವರು ದೇಶದ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.
 


ನವದೆಹಲಿ (ಮಾ.28): ದೇಶದಲ್ಲಿ ಲೋಕಸಭೆ ಚುನಾವಣೆ ಕಣ ರಂಗೇರುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್‌ಗೆ ಒಂದರ ಮೇಲೆ ಒಂದರಂತೆ ಆಘಾತ ಎದುರಾಗಿದೆ. ನವೀನ್‌ ಜಿಂದಾಲ್‌ ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಬೆನ್ನಲ್ಲಿಯೇ ಅವರ ತಾಯಿ ಹಾಗೂ ಒಪಿ ಜಿಂದಾಲ್‌ ಗ್ರೂಪ್‌ನ ಅಧ್ಯಕ್ಷರಾದ ಸಾವಿತ್ರಿ ಜಿಂದಾಲ್‌ ಕೂಡ ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದಾರೆ. ದೇಶದ ಶ್ರೀಮಂತ ಮಹಿಳೆಯಾಗಿರುವ ಸಾವಿತ್ರಿ ಜಿಂದಾಲ್‌ ಅವರ ಹೆಸರು ವಿಶ್ವದ ಶ್ರೀಮಂತರ ಪಟ್ಟಿಯಲ್ಲೂ ಸೇರಿದೆ. ಒಪಿ ಜಿಂದಾಲ್ ಗ್ರೂಪ್ ಅಧ್ಯಕ್ಷೆ ಮತ್ತು ಹರಿಯಾಣದ ಮಾಜಿ ಸಚಿವೆ ಸಾವಿತ್ರಿ ಜಿಂದಾಲ್ ಬುಧವಾರ ತಡರಾತ್ರಿ ತಮ್ಮ ನಿರ್ಧಾರವನ್ನು  ಘೋಷಣೆ ಮಾಡಿದ್ದು ಮಾತ್ರವಲ್ಲದೆ, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ದೃಢಪಡಿಸಿದರು. ಸಾವಿತ್ರಿ ಜಿಂದಾಲ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮೂಲಕ ಇದನ್ನು ದೃಢಪಡಿಸಿದ್ದಾರೆ. 'ನಾನು 10 ವರ್ಷಗಳ ಕಾಲ ಹಿಸಾರ್ ಜನರನ್ನು ಶಾಸಕರಾಗಿ ಪ್ರತಿನಿಧಿಸಿದ್ದೇನೆ ಮತ್ತು ಮಂತ್ರಿಯಾಗಿ ಹರಿಯಾಣ ರಾಜ್ಯಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದೇನೆ. ಹಿಸಾರ್ ಜನರು ನನ್ನ ಕುಟುಂಬ ಮತ್ತು ನನ್ನ ಕುಟುಂಬದ ಸಲಹೆಯಂತೆ ನಾನು ಇಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಬರೆದಿದ್ದಾರೆ.

ಕಾಂಗ್ರೆಸ್ ನಾಯಕತ್ವ ಮತ್ತು ನನಗೆ ಯಾವಾಗಲೂ ಬೆಂಬಲ ಮತ್ತು ಗೌರವವನ್ನು ನೀಡಿದ ನನ್ನ ಎಲ್ಲಾ ಸಹೋದ್ಯೋಗಿಗಳ ಬೆಂಬಲಕ್ಕೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದು ಅವರು ಬರೆದಿದ್ದಾರೆ. ಮೂಲಗಳ ಪ್ರಕಾರ ಸಾವಿತ್ರಿ ಜಿಂದಾಲ್‌ ಬಿಜೆಪಿ ಪಕ್ಷ ಸೇರುವ ಸಾಧ್ಯತೆ ಇದೆ.

84 ವರ್ಷದ ಸಾವಿತ್ರಿ ಜಿಂದಾಲ್‌ ಅವರು ಭಾರತದ ಶ್ರೀಮಂತ ಮಹಿಳೆ, ಜಿಂದಾಲ್‌ ಗ್ರೂಪ್‌ ಬೃಹತ್‌ ವ್ಯವಹಾರವನ್ನು ಅವರು ನೋಡಿಕೊಂಡು ಹೋಗುತ್ತಿದ್ದಾರೆ.  ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮಾರ್ಚ್ 28ರ ಹೊತ್ತಿಗೆ, ಸಾವಿತ್ರಿ ಜಿಂದಾಲ್ ಅವರ ನಿವ್ವಳ ಮೌಲ್ಯವು 29.6 ಬಿಲಿಯನ್ ಯುಎಸ್‌ ಡಾಲರ್‌ ಆಗಿದೆ. ಇದು ಭಾರತೀಯ ರೂಪಾಯಿಯಲ್ಲಿ ಸುಮಾರು 2.47 ಲಕ್ಷ ಕೋಟಿ ರೂಪಾಯಿ. ದೇಶದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಅವರ ಹೆಸರು ಮೊದಲ ಸ್ಥಾನದಲ್ಲಿದ್ದರೆ, ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ 56ನೇ ಸ್ಥಾನದಲ್ಲಿದ್ದಾರೆ.

मैंने विधायक के रूप में 10 साल हिसार की जनता का प्रतिनिधित्व किया और मंत्री के रूप में हरियाणा प्रदेश की निस्वार्थ सेवा की है।

हिसार की जनता ही मेरा परिवार है और मैं अपने परिवार की सलाह पर आज कांग्रेस पार्टी की प्राथमिक सदस्यता से इस्तीफा दे रही हूं । कांग्रेस नेतृत्व के समर्थन…

— Savitri Jindal (@SavitriJindal)

Tap to resize

Latest Videos

ಅಂಬಾನಿ,ಅದಾನಿಗಿಂತಲೂ ಹೆಚ್ಚು ಸಂಪತ್ತು ಗಳಿಸಿದ ಸಾವಿತ್ರಿ ಜಿಂದಾಲ್; ಸಂಪತ್ತಿನಲ್ಲಿ9.6 ಶತಕೋಟಿ ಡಾಲರ್ ಏರಿಕೆ

ಒಪಿ ಜಿಂದಾಲ್ ಗ್ರೂಪ್‌ನ ಅಧ್ಯಕ್ಷರಾಗಿರುವ ಇವರು, 10 ವರ್ಷಗಳ ಕಾಲ ಹಿಸಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ ಮತ್ತು ಹರಿಯಾಣ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜಿಂದಾಲ್‌ ಗ್ರೂಪ್‌ನ ಸಂಸ್ಥಾಪಕ ಹಾಗೂ ಇವರ ಪತಿ ಒಪಿ ಜಿಂದಾಲ್‌ 2005ರಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟ ಬಳಿಕ, ಸಾವಿತ್ರಿ ಜಿಂದಾಲ್‌ ಹಿಸಾರ್‌ ಕ್ಷೇತ್ರದಿಂದ ಹರಿಯಾಣ ವಿಧಾನಸಭೆಗೆ ಆಯ್ಕೆಯಾಗಿದ್ದರು. 2009ರಲ್ಲಿ ಇದೇ ಕ್ಷೇತ್ರದಿಂದ ಅವರು ಮರು ಆಯ್ಕೆಯಾಗಿದ್ದಲ್ಲದೆ,  2013ರ ಅಕ್ಟೋಬರ್‌ನಲ್ಲಿ ಹರಿಯಾಣ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ನೇಮಕಗೊಂಡರು. 2006 ರಲ್ಲಿ, ಅವರು ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಸತಿ ರಾಜ್ಯ ಸಚಿವರಾಗಿ ಕೆಲಸ ಮಾಡಿದರು, ಆದರೆ ಅವರು 2014 ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿಸಾರ್‌ನಿಂದ ಸೋಲು ಕಂಡಿದ್ದರು.

ನೀತಾ ಅಂಬಾನಿಯೂ ಅಲ್ಲ, ಯಾವ ನಟಿಯೂ ಅಲ್ಲ; ಭಾರತದ ಅತ್ಯಂತ ಶ್ರೀಮಂತ ಮಹಿಳೆ ಈಕೆ

ಉಕ್ಕು, ಇಂಧನ, ಮೂಲಸೌಕರ್ಯ, ಸಿಮೆಂಟ್, ಹೂಡಿಕೆ ಮತ್ತು ಪೇಂಟ್‌ ಕ್ಷೇತ್ರಗಳನ್ನು ಒಳಗೊಂಡಂತೆ ಹಲವು ಕ್ಷೇತ್ರಗಳಲ್ಲಿ ಒಪಿ ಜಿಂದಾಲ್‌ ಗ್ರೂಪ್‌ನ ವ್ಯವಹಾರ ಹರಡಿದೆ. ಜೆಎಸ್‌ಡಬ್ಲ್ಯು ಗ್ರೂಪ್ ದೇಶದಲ್ಲಿ ಮಾತ್ರವಲ್ಲದೆ ಭಾರತದ ಹೊರಗೂ ಬೃಹತ್‌ ಉದ್ಯಮವನ್ನು ಹೊಂದಿದೆ. ಕಂಪನಿಯು ಅಮೇರಿಕಾ, ಯುರೋಪ್ ಮತ್ತು ಯುಎಇಯಿಂದ ಚಿಲಿಗೆ ವ್ಯಾಪಾರ ಸಂಪರ್ಕ ಹೊಂದಿದೆ. ಸಾವಿತ್ರಿ ಜಿಂದಾಲ್‌ಗಿಂತ ಮೊದಲು ಅವರ ಪುತ್ರ ನವೀನ್ ಜಿಂದಾಲ್ ಕೂಡ ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರಿದ್ದರು. ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ (JSPL) ಅಧ್ಯಕ್ಷ ನವೀನ್ ಜಿಂದಾಲ್ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ನವೀನ್ ಜಿಂದಾಲ್ ಅವರು 2004 ರಿಂದ 2009 ಮತ್ತು 2009 ರಿಂದ 2014 ರವರೆಗೆ ಕುರುಕ್ಷೇತ್ರದಿಂದ ಕಾಂಗ್ರೆಸ್ ಸಂಸದರಾಗಿದ್ದಾರೆ.

click me!