ಶಬರಿಮಲೆ ಯಾತ್ರೆ ಅಂತಿಮ ಹಂತ, ಮಕರಜ್ಯೋತಿ ದರ್ಶನಕ್ಕೆ ಕ್ಷಣಗಣನೆ!

By Suvarna NewsFirst Published Jan 14, 2020, 10:20 AM IST
Highlights

ಶಬರಿಮಲೆ ಯಾತ್ರೆ ಅಂತಿಮಹಂತ| ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ

ಶಬರಿಮಲೆ[ಜ.14]: ಪ್ರಸಕ್ತ ವರ್ಷದ ಶಬರಿಮಲೆ ಯಾತ್ರೆ ಅಂತಿಮಹಂತ ತಲುಪಿದ್ದು, ಜ.15ರ ಬುಧವಾರ ಮಕರಜ್ಯೋತಿ ದರ್ಶನವಾಗಲಿದೆ. ಪೊನ್ನಂಬಳಮೇಡು ಬೆಟ್ಟದಲ್ಲಿ ಸಂಜೆ 6.45ಕ್ಕೆ ಪವಿತ್ರ ಮಕರಜ್ಯೋತಿಯ ದರ್ಶನವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸೋಮವಾರ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಶುದ್ಧೀಕರಣ ಪ್ರಕ್ರಿಯೆಗಳನ್ನು ನಡೆಸಲಾಯಿತು.

ಮಂಗಳವಾರ ‘ಪಂಪ ವಿಳಕ್ಕು’ ಹಾಗೂ ‘ಪಂಪಸಧ್ಯ’ ಪೂಜೆಗಳು ನಡೆಯಲಿದೆ. ಮಂಗಳವಾರ ತಡರಾತ್ರಿ 2 ಗಂಟೆಯಿಂದ ಮಕರ ಸಂಕ್ರಮಣ ಪೂಜೆಗಳು ನಡೆಯಲಿದ್ದು, ಬುಧವಾರ ಸಂಜೆ 6.45ರ ವೇಳೆಗೆ ಪೊನ್ನಂಬಳಮೇಡುವಿನಲ್ಲಿ ಪವಿತ್ರ ಮಕರ ಜ್ಯೋತಿ ದರ್ಶನವಾಗಲಿದೆ.

ಬಳಿಕ ಜನವರಿ 16 ರಿಂದ 20ರ ವರೆಗೆ ಸಾರ್ವಜನಿಕ ದರ್ಶನಕ್ಕೆ ದೇಗುಲ ತೆರೆದಿರಲಿದ್ದು, ಜ.21ರಂದು ಪಂದಳ ರಾಜ ಮನೆತನದ ಪೂಜಾ ಕಾರ್ಯಗಳು ಮುಗಿದ ಬಳಿಕ ದೇಗುಲವನ್ನು ಮುಚ್ಚಲಾಗುತ್ತದೆ.

click me!