
ಚುನಾವಣಾ ಬಾಂಡ್‌ಗಳನ್ನು ದೇಶದಲ್ಲಿ ರದ್ದುಗೊಂಡ ಬಳಿಕ ರಾಜಕೀಯ ಪಕ್ಷಗಳಿಗೆ ದೇಣಿಗೆ ಹರಿವು ಕುಂಠಿತವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ರಾಜಕೀಯ ಪಕ್ಷಗಳ ಹಣಕಾಸು ಮೂಲಗಳು ಖಾಲಿಯಾಗದಂತೆ ಭಾರತೀಯ ಕಾರ್ಪೊರೇಟ್ ಜಗತ್ತು ನೋಡಿಕೊಂಡಿದೆ. ಚುನಾವಣಾ ಆಯೋಗವು ಪ್ರಕಟಿಸಿರುವ 2024–25 ರ ಚುನಾವಣಾ ಟ್ರಸ್ಟ್‌ಗಳ (Electoral Trusts – ET) ದೇಣಿಗೆ ವರದಿ ಪರಿಶೀಲಿಸಿದಾಗ, ಅದರಲ್ಲಿ ಸಿಂಹಪಾಲು ಮೊತ್ತ ಭಾರತೀಯ ಜನತಾ ಪಕ್ಷ (BJP) ಪಾಲಾಗಿರುವುದು ಬಹಿರಂಗವಾಗಿದೆ.
ಟಾಟಾ ಗ್ರೂಪ್ ನಿಯಂತ್ರಿತ Progressive Electoral Trust (PET) 2024–25ರಲ್ಲಿ ಒಟ್ಟು ₹915 ಕೋಟಿಯನ್ನು ರಾಜಕೀಯ ಪಕ್ಷಗಳಿಗೆ ಹಂಚಿದ್ದು, ಅದರಲ್ಲಿ ಬಹುಪಾಲು 83% ಅಂದರೆ ₹757.6 ಕೋಟಿ BJP ಗೆ ಹರಿದುಬಂದಿದೆ. ಕಾಂಗ್ರೆಸ್‌ಗೆ PET ಕೇವಲ ₹77.3 ಕೋಟಿ (8.4%) ದೇಣಿಗೆ ನೀಡಿದೆ.
ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ, BJP 2024–25ರಲ್ಲಿ ವಿವಿಧ ಟ್ರಸ್ಟ್‌ಗಳಿಂದ ಪಡೆದ ದೇಣಿಗೆಗಳು ಇಂತಿದೆ
Progressive Electoral Trust (PET) — ₹757.6 ಕೋಟಿ
New Democratic Electoral Trust — ₹150 ಕೋಟಿ
Harmony Electoral Trust — ₹30.1 ಕೋಟಿ
Triumph Electoral Trust — ₹21 ಕೋಟಿ
Jan Kalyan Electoral Trust — ₹9.5 ಲಕ್ಷ
N. Igartig Electoral Trust — ₹7.75 ಲಕ್ಷ
ಇನ್ನೂ BJP ಗೆ ದಾಖಲೆಯ ಅತ್ಯಂತ ದೊಡ್ಡ ದೇಣಿಗೆಯನ್ನು ನೀಡುತ್ತಿರುವ Prudent Electoral Trust ವರದಿ ಪ್ರಕಟವಾಗಿಲ್ಲ. ಅದು ಹೊರಬಂದ ಮೇಲೆ BJP ದೇಣಿಗೆ ಮೊತ್ತ ಇನ್ನಷ್ಟು ಏರಿಕೆ ಕಾಣುವುದು ಖಚಿತ.
PET — ₹77.3 ಕೋಟಿ
New Democratic Trust — ₹5 ಕೋಟಿ
Jan Kalyan Trust — ₹9.5 ಲಕ್ಷ
Prudent Trust (ಕಾಂಗ್ರೆಸ್ ವರದಿ ಪ್ರಕಾರ) — ₹216.33 ಕೋಟಿ
AB General Electoral Trust — ₹15 ಕೋಟಿ
ಒಟ್ಟು: ₹517 ಕೋಟಿ, ಅದರಲ್ಲೂ ₹313 ಕೋಟಿ ಟ್ರಸ್ಟ್‌ಗಳಿಂದಲೇ ಬಂದಿವೆ.
PET ಹಲವು ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳಿಗೆ ₹10 ಕೋಟಿಯ ದೇಣಿಗೆಗಳನ್ನು ನೀಡಿದೆ. ಅವುಗಳೆಂದರೆ, ತೃಣಮೂಲ ಕಾಂಗ್ರೆಸ್ (TMC), ವೈಎಸ್‌ಆರ್ ಕಾಂಗ್ರೆಸ್ (YSRCP), ಶಿವಸೇನೆ, ಬಿಜು ಜನತಾ ದಳ (BJD), ಭಾರತ್ ರಾಷ್ಟ್ರ ಸಮಿತಿ (BRS), ಜನತಾ ದಳ (ಯುನೈಟೆಡ್) – JDU, ದ್ರಾವಿಡ ಮುನ್ನೇತ್ರ ಕಳಗಂ (DMK), ಲೋಕ ಜನ ಶಕ್ತಿ ಪಕ್ಷ – LJP (ರಾಮ್ ವಿಲಾಸ್).
2023–24: ₹828 ಕೋಟಿ (ಬಾಂಡ್‌ಗಳಿಂದ)
2024–25: ದೇಣಿಗೆ ಗಮನಾರ್ಹವಾಗಿ ಕುಸಿತ
ಆದರೂ 2022–23ರ ₹171 ಕೋಟಿಗಿಂತ ಹೆಚ್ಚು.
2024–25: ₹184.5 ಕೋಟಿ (₹153.5 ಕೋಟಿ ಟ್ರಸ್ಟ್‌ಗಳಿಂದ)
2023–24: ₹612 ಕೋಟಿ (ಬಾಂಡ್‌ಗಳಿಂದ)
2023–24: ₹245.5 കോടി
2024–25: ₹60 ಕೋಟಿಗೆ ಇಳಿಕೆ
ಬಾಂಡ್‌ಗಳ ಮೂಲಕ ಪಡೆದ ₹495 ಕೋಟಿ ಆದಾಯ
ಟ್ರಸ್ಟ್ ದೇಣಿಗೆ ₹85 ಕೋಟಿಯಿಂದ ₹15 ಕೋಟಿಗೆ ಕುಸಿತ
2024–25ರಲ್ಲಿ PET ಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಟಾಟಾ ಕಂಪನಿಗಳ ಪಟ್ಟಿ:
Tata Sons Pvt Ltd — ₹308 ಕೋಟಿ
TCS — ₹217.6 ಕೋಟಿ
Tata Steel — ₹173 ಕೋಟಿ
Tata Motors — ₹49.4 ಕೋಟಿ
Tata Power — ₹39.5 ಕೋಟಿ
Tata Communications — ₹14.8 ಕೋಟಿ
Tata Consumer, Tata Elxsi, Tata Autocomp Systems — ₹19.7 ಕೋಟಿ
BJP — ₹150 ಕೋಟಿ
Congress — ₹5 ಕೋಟಿ
Shiv Sena (UBT) — ₹5 ಕೋಟಿ
BJP — ₹21 ಕೋಟಿ
TDP — ₹4 ಕೋಟಿ
BJP — ₹30.1 ಕೋಟಿ
Shiv Sena (UBT) — ₹3 ಕೋಟಿ
NCP–Sharad Pawar — ₹2 ಕೋಟಿ
Shiv Sena — ₹1 ಕೋಟಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ