ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಚೀನಾಗಿಂತ ಕಡಿಮೆ!

By Suvarna NewsFirst Published May 4, 2020, 12:27 PM IST
Highlights

ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಶೇ.3.3:| ದ. ಕೊರಿಯಾ, ಚೀನಾಗಿಂತಲೂ ಉತ್ತಮ ಸಾಧನೆ

 

ನವದೆಹಲಿ(ಮೇ.04): ಭಾರತದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದರೂ, ಸೋಂಕಿಗೆ ಸಾವನ್ನಪ್ಪುತ್ತಿರುವವ ಸಂಖ್ಯೆ ಭಾರೀ ಕಡಿಮೆ ಇದೆ. ಒಟ್ಟು ಸೋಂಕಿತರ ಪೈಕಿ ಕೇವಲ ಶೇ.3.3ರಷ್ಟುಮಂದಿ ಮಾತ್ರ ಸೋಂಕಿಗೆ ಬಲಿಯಾಗುತ್ತಿದ್ದಾರೆ.

ಪ್ರತೀ ಲಕ್ಷಕ್ಕೆ 0.09 ಮಂದಿ ಮಾತ್ರ ಸಾವಿಗೀಡಾಗುತ್ತಿದ್ದು, ಇದು ಕೊರೋನಾವನ್ನು ವಿಶ್ವದಲ್ಲೇ ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿರುವ ದಕ್ಷಿಣ ಕೊರಿಯಾ ಹಾಗೂ ಚೀನಾದ ಸಾಧನೆಗಿಂತ ಉತ್ತಮ. ದಕ್ಷಿಣ ಕೊರಿಯಾದಲ್ಲಿ ಪ್ರತೀ ಲಕ್ಷಕ್ಕೆ 0.48 ಮಂದಿ ಹಾಗೂ ಚೀನಾದಲ್ಲಿ 0.33 ಮಂದಿ ಸಾವನ್ನಪ್ಪುತ್ತಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ 10,780 ಮಂದಿಗೆ ಸೋಂಕು ಆವರಿಸಿದ್ದು, 250 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿ ಸಾವಿನ ಶೇಕಡವಾರು ಶೇ.2.3ರಷ್ಠಿದೆ. ಕೊರೋನಾ ಉಗಮಸ್ಥಾನ ಚೀನಾದಲ್ಲಿ 83,595 ಮಂದಿಗೆ ಸೋಂಕು ತಟ್ಟಿ4,637 ಮಂದಿ ಸತ್ತಿದ್ದರು. ಅಲ್ಲಿ ಸಾವಿನ ಸಂಖ್ಯೆ ಶೇ.5.5ರಷ್ಠಿದೆ.

ಬೆಲ್ಜಿಎಂನಲ್ಲಿ ಸಾವಿನ ಪ್ರಮಾಣ ಹೆಚ್ಚಳವಿದ್ದು, ಅಲ್ಲಿ ಪ್ರತೀ ಲಕ್ಷಕ್ಕೆ 65 ಮಂದಿ ಸಾವಿಗೀಡಾಗುತ್ತಿದ್ದಾರೆ. ಕೋವಿಡ್‌ನಿಂದ ಅತೀ ಹೆಚ್ಚು ಸಾವು ನೋವುಗಳು ಉಂಟಾಗಿರುವ ಅಮೆರಿಕದಲ್ಲಿ ಲಕ್ಷಕ್ಕೆ 20 ಮಂದಿ ಸಾವನ್ನಪ್ಪುತ್ತಿದ್ದಾರೆ.

click me!