ಬರೋಬ್ಬರಿ ಐದು ತಿಂಗಳ ನಂತರ ರಾಜಧಾನಿಯ ಹೋಟೆಲ್‌ಗಳು ಓಪನ್

By Suvarna NewsFirst Published Aug 20, 2020, 10:36 PM IST
Highlights

ದೆಹಲಿ ಸರ್ಕಾರದ ನಿರ್ಧಾರ/ ಐದು ತಿಂಗಳ ನಂತರ ಹೋಟೆಲ್ ಒಪನ್/ ವಾಣಿಜ್ಯ ಉದ್ದೇಶಗಳಿಗೆ ವೇಗ/ ನಿಯಂತ್ರಣದ ಹಾದಿಯಲ್ಲಿ ಕೊರೋನಾ

ನವದೆಹಲಿ(ಆ. 20)  ಸುಮಾರು ಐದು ತಿಂಗಳ ನಂತರ ದೆಹಲಿ ಸರ್ಕಾರ ಹೋಟೆಲ್ ಗಳನ್ನು ತೆರೆಯಲು ಅವಕಾಶ ನೀಡಿದೆ. ದೆಹಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ವಿಭಾಗ ಈ ತೀರ್ಮಾನ ತೆಗೆದುಕೊಂಡಿದ್ದು ಹೋಟೆಲ್ ಉದ್ಯಮಿಗಳು ತೀರ್ಮಾನವನ್ನು ಸ್ವಾಗತ ಮಾಡಿದ್ದಾರೆ.

ದೆಹಲಿ ಲೆಫ್ಟಿನಂಟ್ ಗವರ್ನರ್ ಅನಿಲ್ ಬೈಜಲ್  ಮುಂದೆ ಪ್ರವಾಸೋದ್ಯಮ ಸಚಿವ ಪ್ರಟೇಲ್ ಪ್ರಸ್ತಾವನೆ ಇಟ್ಟಿದ್ದರು.  ಇದೊಂದು ಸಕಾರಾತ್ಮಕ ಹೆಜ್ಜೆಯಾಗಿದ್ದು ವಾಣಿಜ್ಯ ಉದ್ದೇಶಗಳು ವೇಗ ಪಡೆದುಕೊಳ್ಳಲಿವೆ ಎಂದು ಪಟೇಲ್ ತಿಳಿಸಿದ್ದಾರೆ.

ಅರ್ಧಮಂದಿಯ ಆದಾಯ ಸ್ಥಗಿತ; ಎಲ್ಲದಕ್ಕೂ ಕಾರಣ ಕೊರೋನಾ

ಐಟಿಸಿ ಹೋಟೆಲ್ ಸಮೂಹದ ಸಿಒಒ ಅನೀಲ್ ಚಡ್ಡಾ ಇದನ್ನು ಸ್ವಾಗತ ಮಾಡಿದ್ದಾರೆ, ನಾವು ಅತಿಥಿಗಳನ್ನು ಸ್ವಾಗತಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಕೊರೋನಾ ಮಿರಿಮೀರಿದ ಕಾರಣಕ್ಕೆ ಸರ್ಕಾರ ಕೆಲವು ಹೋಟೆಲ್ ಗಳನ್ನು ಕೊರೋನಾ ಕ್ವಾರಂಟೈನ್ ಸೆಂಟರ್ ಆಗಿ ಮಾಡಿಕೊಂಡಿದೆ.  ಮಾರ್ಚ್ ತಿಂಗಳಿನಿಂದಲೇ ಐಷರಾಮಿ ಹೋಟೆಲ್ ಗಳು ಸಂಪೂರ್ಣ ಬಂದ್ ಆಗಿದ್ದವು. 

ಕೊರೋನಾ ವೈರಸ್ ಹಬ್ಬುತ್ತಿದ್ದ ಕಾರಣ ಲಾಕ್ ಡೌನ್ ಘೋಷಣೆಯಾದ ನಂತರ ಹೋಟೆಲ್ ಗಳನ್ನು ಬಂದ್ ಮಾಡಲಾಗಿತ್ತು. ಕೇಂದ್ರ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ ಆಯಾ ರಾಜ್ಯ ಸರ್ಕಾರಗಳು ಕೆಲವೊಂದು ಇತಿಮಿತಿಯನ್ನು ಹಾಗೆ ಇಟ್ಟುಕೊಂಡಿವೆ. ಮೆಟ್ರೋ ಮತ್ತು ಸಿನಿಮಾ ಮಂದಿರ ತೆರೆಯಲು ಇನ್ನು ಅವಕಾಶ ಸಿಕ್ಕಿಲ್ಲ.

click me!