ಭಾರತದ ಚಹಾಕ್ಕೆ ಮಸಿ ಬಳಿಯಲು ಜಾಗತಿಕ ಸಂಚು: ಮೋದಿ!

By Suvarna NewsFirst Published Feb 8, 2021, 9:03 AM IST
Highlights

ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವ ಅಸ್ಸಾಂ ಮಾಲಾ ಯೋಜನೆ| ಭಾರತದ ಚಹಾಕ್ಕೆ ಮಸಿ ಬಳಿಯಲು ಜಾಗತಿಕ ಸಂಚು: ಮೋದಿ!

ಧೆಕಿಯಾಜುಲಿ(ಫೆ.08): ಭಾರತದ ಚಹಾ ಬಗ್ಗೆ ಅಪಪ್ರಚಾರ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು ರೂಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಿಡಿಕಾರಿದ್ದಾರೆ.

ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವ ಅಸ್ಸಾಂ ಮಾಲಾ ಯೋಜನೆ ಉದ್ಘಾಟಿಸಿ ಮಾತನಾಡಿದ ಮೋದಿ, ‘ಅಸ್ಸಾಂ ಅಭಿವೃದ್ಧಿಗಾಗಿ ಟೀ ತೋಟಗಳಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರ ಸ್ಥಿತಿಗಳ ಬಗ್ಗೆ ನಾನು ಸದಾ ಸಂಪರ್ಕದಲ್ಲಿದ್ದೇನೆ. ಆದರೆ, ಅಸ್ಸಾಂ ಟೀ ತೋಟಗಳ ಬಗ್ಗೆ ಅಪಪ್ರಚಾರ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು ಹೆಣೆಯಲಾಗಿದೆ. ಚಹಾ ತೋಟದಲ್ಲಿ ಕೆಲಸ ಮಾಡುವ ಯಾವುದೇ ಕಾರ್ಮಿಕನೂ ಈ ಅಪಪ್ರಚಾರವನ್ನು ಸಹಿಸಲಾರ. ಸಂಚಿನ ವಿರುದ್ಧದ ಹೋರಾಟದಲ್ಲಿ ಅವರು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದರು.

‘ಭಾರತದ ಚಹಾ ಉದ್ಯಮದಲ್ಲಿ ಭಾರೀ ಪ್ರಮಾಣದ ಕೀಟನಾಶಕಗಳನ್ನು ಬಳಕೆ ಮಾಡಲಾಗುತ್ತದೆ’ ಎಂದು ಎನ್‌ಜಿಒ ಗ್ರೀನ್‌ಪೀಸ್‌ನ ವರದಿಯಲ್ಲಿ ಆರೋಪಿಸಿದ ಬೆನ್ನಲ್ಲೇ, ಮೋದಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

click me!