
ನವದೆಹಲಿ: 2024-25ನೇ ಆರ್ಥಿಕ ವರ್ಷದಲ್ಲಿ ಪಕ್ಷಕ್ಕೆ 517 ಕೋಟಿ ರು.ಗೂ ಅಧಿಕ ದೇಣಿಗೆ ಬಂದಿದೆ. ಇದರಲ್ಲಿ ಚುನಾವಣಾ ಟ್ರಸ್ಟ್‌ಗಳಿಂದ ಬಂದ ದೇಣಿಗೆ ಮೊತ್ತ 313 ಕೋಟಿ ರು. ಸೇರಿದೆ ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ.
ಕಾರ್ಪೊರೇಟ್ ಕಂಪನಿಗಳಾದ ಐಟಿಸಿ ಲಿ., ಹಿಂದೂಸ್ಥಾನ್ ಝಿಂಕ್ ಲಿ. ಹಾಗೂ ಸೆಂಚುರಿ ಪ್ಲೈವುಡ್ ಮೊದಲಾದವು ದೇಣಿಗೆ ನೀಡಿವೆ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರೇ 3 ಕೋಟಿ ರು. ನೀಡಿದ್ದಾರೆ. ಚುನಾವಣಾ ಟ್ರಸ್ಟ್‌ಗಳ ಪೈಕಿ ನ್ಯೂ ಡೆಮಾಕ್ರಟಿಕ್ ಎಲೆಕ್ಟೋರಲ್ ಟ್ರಸ್ಟ್ ಮತ್ತು ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್‌ಗಳು ದೇಣಿಗೆಯಿತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಬಿಜೆಪಿಗೆ ಕೇವಲ ಚುನಾವಣಾ ಟ್ರಸ್ಟ್‌ಗಳಿಂದಲೇ 959 ಕೋಟಿ ರು. ದೇಣಿಗೆ ಹರಿದುಬಂದಿದೆ. ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ 184.5 ಕೋಟಿ ರು. (ಚುನಾವಣಾ ಟ್ರಸ್ಟ್‌ಗಳಿಂದ 153.5 ಕೋಟಿ ರು.) ದೇಣಿಗೆ ಬಂದಿದೆ.
ಕಂಪನಿಗಳು ಚುನಾವಣೆಗೆಂದು ಪಕ್ಷಗಳಿಗೆ ನೀಡಲು ಟ್ರಸ್ಟ್ ರಚಿಸಿರುತ್ತವೆ. ಅವುಗಳಿಗೆ ಎಲೆಕ್ಟೋರಲ್ ಟ್ರಸ್ಟ್ ಎನ್ನುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ