
ಗಾಂಧಿನಗರ(ಮಾ.16): ವಿಧಾನಸಭೆಯಲ್ಲಿ ಶಾಸಕರು ಅಶಿಸ್ತಿನಿಂದ ವರ್ತಿಸಿದರೆ, ಗದ್ದಲ ಎಬ್ಬಿಸಿದರೆ ಅಮಾನತು ಶಿಕ್ಷೆಗೆ ಗುರಿಯಾಗುವುದು ಹೊಸದಲ್ಲ. ಆದರೆ, ಟಿ- ಶರ್ಟ್ ಧರಿಸಿ ಬಂದ ಕಾರಣಕ್ಕೆ ಸದನದ ಕಲಾಪದಿಂದ ಶಾಸಕರೊಬ್ಬರನ್ನು ಸ್ಪೀಕರ್ ಹೊರಗೆ ಕಳುಹಿಸಿರುವ ಘಟನೆ ಗುಜರಾತ್ ವಿಧಾನಸಭೆಯಲ್ಲಿ ನಡೆದಿದೆ.
ಕಾಂಗ್ರೆಸ್ ಶಾಸಕ ವಿಮಲ್ ಚೂಡಸಮ ಎನ್ನುವವರು ಸೋಮವಾರ ಸದನಕ್ಕೆ ಟಿ- ಶರ್ಟ್ ಧರಿಸಿ ಆಗಮಿಸಿದ್ದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ರಾಜೇಂದ್ರ ತ್ರಿವೇದಿ, ಶಾಸಕನನ್ನು ಸದನದಿಂದ ಹೊರಗೆ ಕಳುಹಿಸಿದ್ದಾರೆ.
ಶಾಸಕರಾದವರು ಶರ್ಟ್ ಅಥವಾ ಕುರ್ತಾ ಧರಿಸಬೇಕು ಮತ್ತು ಸದನದ ಗೌರವ ಮತ್ತು ಮರ್ಯಾದೆಯನ್ನು ಕಾಪಾಡಬೇಕು. ಈ ಬಗ್ಗೆ ಮೊದಲೇ ತಿಳಿಸಿದ್ದ ಹೊರತಾಗಿಯೂ ಚೂಡಸಮ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂದು ಸ್ಪೀಕರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ