Kapil Sibal: ಕಾಂಗ್ರೆಸ್‌ ಇಲ್ಲದ ಯುಪಿಎ ಆತ್ಮವೇ ಇಲ್ಲದ ದೇಹವಿದ್ದಂತೆ: ಮಮತಾ ವಿರುದ್ಧ ಸಂಘಟಿತ ದಾಳಿ!

By Kannadaprabha NewsFirst Published Dec 3, 2021, 7:40 AM IST
Highlights

*ಅವಕಾಶವಾದಿ ಮಮತಾರಿಂದ ಫ್ಯಾಸಿಸ್ಟ್‌ ಪಡೆಗಳಿಗೆ ನೆರವು
*ಕಾಂಗ್ರೆಸ್‌ ಇಲ್ಲದ ಯುಪಿಎ ಆತ್ಮವೇ ಇಲ್ಲದ ದೇಹವಿದ್ದಂತೆ
*2024ಕ್ಕೆ ಪಕ್ಷ ಅಧಿಕಾರಕ್ಕೆ ಬರೋದು ಅನುಮಾನ: ಕಾಂಗ್ರೆಸ್ಸಿಗ ಆಜಾದ್‌!
*ಗಾಂಧಿ ಕುಟುಂಬದ ವಿರುದ್ಧ ಪ್ರಶಾಂತ್‌ ಕಿಶೋರ್‌ ವಾಗ್ದಾಳಿ
 

ನವದೆಹಲಿ(ಡಿ. 03): ಕಾಂಗ್ರೆಸ್‌ ನೇತೃತ್ವದ ಯುಪಿಎ (Congress Led UPA) ಅಸ್ತಿತ್ವದ ಬಗ್ಗೆ ಪ್ರಶ್ನಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಾಂಗ್ರೆಸ್‌ ನಾಯಕರು ಗುರುವಾರ ಸಂಘಟಿತ ದಾಳಿ ನಡೆಸಿದ್ದಾರೆ. ಯುಪಿಎ (UPA) ಇಲ್ಲದ ಯುಪಿಎ ಮೈತ್ರಿಯು ಆತ್ಮವೇ ಇಲ್ಲದ ದೇಹದಂತಾಗಲಿದೆ ಎಂದು ಕಾಂಗ್ರೆಸ್‌ ಜಿ-23 ಮುಖಂಡ ಕಪಿಲ್‌ ಸಿಬಲ್‌ (Kapil Sibal) ಅಭಿಪ್ರಾಯಪಟ್ಟರೆ, ಮತ್ತೋರ್ವ ಜಿ-23 ಮುಖಂಡ ಆನಂದ ಶರ್ಮಾ ಅವರು, ಕಾಂಗ್ರೆಸ್‌ ಪ್ರಮುಖ ರಾಷ್ಟ್ರೀಯ ವಿಪಕ್ಷವಾಗಿದ್ದು, ರಾಷ್ಟ್ರೀಯ ಹಿತಾಸಕ್ತಿಗಾಗಿ ಕಾಂಗ್ರೆಸ್‌ ಮಧ್ಯದ ಪಿಲ್ಲರ್‌ ಆಗಿರಲಿದೆ ಎಂದರು.

ಇನ್ನು ಪಕ್ಷದ ಪ್ರಧಾನ ವಕ್ತಾರ ರಣದೀಪ್‌ ಸುರ್ಜೇವಾಲ, ಕೆಲ ವ್ಯಕ್ತಿಗಳು ಮತ್ತು ಪಕ್ಷಗಳಿಗೆ ರಾಜಕೀಯ ಅವಕಾಶವಾದಿತನ ಉತ್ತಮವಾಗಿರಬಹುದು. ಆದರೆ ಕಾಂಗ್ರೆಸ್‌ ಎಂದಿಗೂ ರಾಜಿ ಮಾಡಿಕೊಳ್ಳದ ಭಾರತೀಯತೆ ಮತ್ತು ನಮ್ಮ ದೇಶ, ಪ್ರಜಾಪ್ರಭುತ್ವ, ಸೋದರತ್ವ, ಸಹಾನುಭೂತಿಯೇ ನಮಗೆ ಶ್ರೇಷ್ಠವಾಗಿದ್ದು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತದ ವಿರುದ್ಧ ಹೋರಾಟವೇ ಮುಖ್ಯ ಎಂದು ಹೇಳಿದ್ದಾರೆ.

ಯುಪಿಎ ಅಸ್ತಿತ್ವ ಪ್ರಶ್ನಿಸಿದ ಮಮತಾ ವಿರುದ್ಧ ಕಾಂಗ್ರೆಸ್‌ ಸಂಘಟಿತ ದಾಳಿ!

ಅವಕಾಶವಾದಿ ರಾಜಕಾರಣಿಯಾಗಿರುವ ಮಮತಾ, ಕಾಂಗ್ರೆಸ್‌ ವಿರುದ್ಧವೇ ಹೋರಾಟದ ಮುಖಾಂತರ ಫ್ಯಾಸಿಸ್ಟ್‌ (Facist) ಪಡೆಗಳಿಗೆ ನೆರವಾಗುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಬಗ್ಗೆ ಗುರುವಾರ ಟ್ವೀಟ್‌ ಮುಖಾಂತರ ಕಿಡಿಕಾರಿದ ವಕ್ತಾರ ಪವನ್‌ ಖೇರಾ (Pawan Khera), ಯುಪಿಎ ಮೈತ್ರಿಕೂಟವೇ ಅಸ್ತಿತ್ವವೇ ಇಲ್ಲ ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆ ಹಾಸ್ಯಾಸ್ಪದ. ನಾನು ಅಮೆರಿಕದ (America) ನಾಗರಿಕ ಅಲ್ಲ ಎಂಬ ಕಾರಣಕ್ಕೆ ಅಮೆರಿಕ ದೇಶವೇ ಇಲ್ಲ ಎನ್ನಲಾದೀತೇ? ಅದೇ ರೀತಿ ಯುಪಿಎ ಭಾಗವಾಗಿರದ ಸ್ಥಳೀಯ ನಾಯಕಿ ದೀದಿ ಅವರು ಯುಪಿಎ ಅಸ್ತಿತ್ವದ ಬಗ್ಗೆ ಹೇಗೆ ಪ್ರಶ್ನಿಸುತ್ತಾರೆ? ಎಂದು ತಿರುಗೇಟು ನೀಡಿದರು.

 

क्यूँकि मैं अमेरिका का नागरिक नहीं हूँ, तो मैं यह थोड़े ही कह दूँगा कि अमेरिका का अस्तित्व ही नहीं है। ममता जी यूपीए का हिस्सा नहीं हैं, लेकिन उससे यूपीए का अस्तित्व थोड़े ही समाप्त हो जाएगा। https://t.co/qucgytbF3J

— Pawan Khera (@Pawankhera)

 

2024ಕ್ಕೆ ಪಕ್ಷ ಅಧಿಕಾರಕ್ಕೆ ಬರೋದು ಅನುಮಾನ: ಕಾಂಗ್ರೆಸ್ಸಿಗ ಆಜಾದ್‌!

ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್‌ನ ನಾಯಕತ್ವ, ಯುಪಿಎ ಅಸ್ತಿತ್ವದ ಬಗ್ಗೆ ಮಮತಾ ಬ್ಯಾನರ್ಜಿ ಪ್ರಶ್ನೆ ಬೆನ್ನಲ್ಲೇ, 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬರುವ ಬಗ್ಗೆ ಸ್ವತಃ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಪೂಂಚ್‌ನಲ್ಲಿ ಕಾಂಗ್ರೆಸ್‌ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಆಜಾದ್‌ ‘ಈಡೇರಿಸಲಾಗದ ವಿಷಯದ ಬಗ್ಗೆ ನಾನು ಸುಳ್ಳು ಭರವಸೆ ನೀಡಲಾರೆ. ಸಂವಿಧಾನದ 370ನೇ ವಿಧಿ ವಿಷಯ ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ಕೇವಲ ಜನರನ್ನು ಮೆಚ್ಚಿಸಲು ನಾನು ಸುಳ್ಳು ಭರವಸೆ ನೀಡಲಾರೆ. ಕೋರ್ಟ್‌ಗೆ ಹೊರತಾಗಿ ಯಾರಾದರೂ 370ನೇ ವಿಧಿ ಮರು ಜಾರಿ ಬಗ್ಗೆ ಏನಾದರು ಮಾಡಬಹುದಾದರೆ ಅದು ಕೇಂದ್ರ ಸರ್ಕಾರ. 

Congress VS TMC: UPA ನೇತೃತ್ವ ತಿರಸ್ಕರಿಸಿದ ಮಮತಾ: ED, CBI ಭಯದಿಂದ ಈ ಹೇಳಿಕೆ ಎಂದ ಕಾಂಗ್ರೆಸ್!

ಆದರೆ ಅವರೇ ವಿಧಿಯನ್ನು ರದ್ದು ಮಾಡಿರುವುದು. ಹೀಗಾಗಿ ಕಾಯ್ದೆ ಮರು ಜಾರಿಗೆ ನಮಗೆ ಲೋಕಸಭೆಯಲ್ಲಿ 300 ಸ್ಥಾನಗಳ ಕೊರತೆ ಇದೆ. 2024ರಲ್ಲೂ ಕಾಂಗ್ರೆಸ್‌ 300 ಸದಸ್ಯರನ್ನು ಗೆಲ್ಲಿಸಬಹುದು ಎಂಬುದನ್ನೂ ನಾನು ಹೇಳಲಾರೆ. ದೇವರು ಬಯಸಿದರೆ ನಾವು 300 ಸ್ಥಾನ ಗೆಲ್ಲಬಹುದು. ಆದರೆ ಅಂಥ ಬೆಳವಣಿಗೆಯನ್ನು ಸದ್ಯಕ್ಕಂತೂ ನಾನು ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕತ್ವ ಒಬ್ಬ ವ್ಯಕ್ತಿಯ ದೈವಿಕ ಹಕ್ಕಲ್ಲ

ದೇಶದ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ನ ಪಾತ್ರ ದೊಡ್ಡದಾದುದಾದರೂ, ಪಕ್ಷದ ನಾಯಕತ್ವ ಯಾವುದೇ ಒಬ್ಬ ವ್ಯಕ್ತಿಯ ದೈವಿಕ ಹಕ್ಕಲ್ಲ, ಅದೂ ವಿಶೇಷವಾಗಿ ಕಳೆದ 10 ವರ್ಷಗಳಲ್ಲಿ ತಾನು ಸ್ಪರ್ಧಿಸಿದ ಚುನಾವಣೆಗಳ ಪೈಕಿ ಶೇ.90ರಲ್ಲಿ ಪಕ್ಷ ಸೋಲನ್ನಪ್ಪಿದಾಗ ಎಂದು ಗಾಂಧೀ ಕುಟುಂಬದ ಬಗ್ಗೆ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಮತ್ತು ರಾಹುಲ್‌ ಬಗ್ಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ವ್ಯಂಗ್ಯ ಮಾಡಿದ ಮಾರನೇ ದಿನವೇ ಪ್ರಶಾಂತ್‌ ಅವರು ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಕಿಡಿ:

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ‘ಯಾವುದೇ ಸಿದ್ಧಾಂತಗಳಿಲ್ಲದ ವೃತ್ತಿಪರ ವ್ಯಕ್ತಿಯೋರ್ವ, ಯಾವುದೇ ಪಕ್ಷಗಳು ಅಥವಾ ವ್ಯಕ್ತಿಗೆ ಚುನಾವಣೆಗಳನ್ನು ಗೆಲ್ಲಲು ಸಲಹೆ ಮತ್ತು ಸೂಚನೆಗಳನ್ನು ನೀಡಬಹುದು. ಆದರೆ ಅವರು ನಮ್ಮ ರಾಜಕೀಯ ಅಜೆಂಡಾಗಳನ್ನು ನಿರ್ಧರಿಸಲಾಗದು. ರಾಹುಲ್‌ ಗಾಂಧಿ ಅವರು ಹೋರಾಟದ ಪವಿತ್ರ ಹೋರಾಟದ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

click me!