
ಕೇರಳ (ಮಾ.06) ವಿರೋಧ ಪಕ್ಷ ನಾಯಕ, ಕಾಂಗ್ರೆಸ್ ಲೀಡರ್ ರಾಹುಲ್ ಗಾಂಧಿ ಕೇರಳ ಪ್ರವಾಸದಲ್ಲಿ ಕಳರಿ ಪಯಟ್ಟು ಕಸರತ್ತು ನಡೆಸಿ ಭಾರಿ ಗಮನಸೆಳೆದಿದ್ದಾರೆ. ಇಡುಕ್ಕಿ ಜಿಲ್ಲೆಯ ಮರಿಯನ್ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಇದೇ ವೇಳೆ ವಿದ್ಯಾರ್ಥಿನಿಯೊಬ್ಬರು ಕಳರಿ ಪಯಟ್ಟು ಕುರಿತು ಮಾತನಾಡಿದ್ದರು. ಇಷ್ಟೇ ಅಲ್ಲ ಕಳರಿಯ ಕೆಲ ಪಟ್ಟಗಳನ್ನು ರಾಹುಲ್ ಗಾಂಧಿ ಮಾಡಲು ಮನವಿ ಮಾಡಿದ್ದರು. ಹೀಗಾಗಿ ವಿದ್ಯಾರ್ಥಿನಿ ಹೇಳಿಕೊಟ್ಟಂತೆ ರಾಹುಲ್ ಗಾಂಧಿ ಕಳರಿ ಪಯಟ್ಟು ಮಾಡಿ ಗಮನಸೆಳೆದಿದ್ದಾರೆ.
ವಿದ್ಯಾರ್ಥಿನಿ ವೇದಿಕೆ ಮೇಲೆ ಬಂದು ರಾಹುಲ್ ಗಾಂಧಿಗೆ ಕಳರಿ ಪಯಟ್ಟಿನ ಕೆಲ ಪಟ್ಟುಗಳನ್ನು ಕಲಿಸಲು ಮುಂದಾಗಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ತಾನು ಕಳರಿ ಪಯಟ್ಟು ಪಟ್ಟು ಕರಗತ ಮಾಡಲು ಸಿದ್ಧನಿದ್ದೇನೆ. ಆದರೆ ನನ್ನ ಜೊತೆ ಕೇರಳದ ನಾಯಕರು ಪಾಲ್ಗೊಲ್ಳಬೇಕು ಎಂದು ಷರತ್ತು ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಕಳರಿ ಪಯಟ್ಟು ಪಟ್ಟುಗಳನ್ನು ವೇದಿಕೆ ಮೇಲೆ ಮಾಡಿದ್ದಾರೆ.
ವಿದ್ಯಾರ್ಥಿನಿ ಕಳರಿಯ ಪಟ್ಟುಗಳನ್ನು ಸ್ವತಃ ಮಾಡಿ ತೋರಿಸಿದರೆ, ರಾಹುಲ್ ಗಾಂಧಿ ಹಾಗೂ ಇತರ ನಾಯಕರು ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಪೈಕಿ ಕಳರಿಯ ಬಗ್ಗೆ ಗೊತ್ತಿಲ್ಲದ ರಾಹುಲ್ ಗಾಂಧಿ ಪಟ್ಟುಗಳನ್ನು ಕರಾರುವಕ್ಕಾಗಿ ಪ್ರಯತ್ನಿಸಿದ್ದಾರೆ. ಇತರ ನಾಯಕರು ಒಂದೊಂದು ಪಟ್ಟು ಮಾಡಲು ಹರಹಾಸ ಪಟ್ಟಿದ್ದಾರೆ. ರಾಹುಲ್ ಗಾಂಧಿ ಉತ್ತಮ ಪ್ರಯತ್ನ ಮಾಡಿದ್ದಾರೆ. ಕೆಸಿ ವೇಣುಗೋಪಾಲ್ ಹಾಗೂ ಇತರ ನಾಯಕರ ಕಳರಿ ಪಯಟ್ಟು ಪಟ್ಟು ಹಾಗೂ ಕಸರತ್ತು ನೋಡಿ ವೇದಿಕೆಯಲ್ಲಿ ಕುಳಿತಿದ್ದ ನಾಯಕರೇ ಸುಸ್ತಾಗಿದ್ದಾರೆ. ಒಂದೊಂದು ಪಟ್ಟು ಹಾಕುತ್ತಿದ್ದಂತೆ ನಾಯಕರು ಮುಸಿ ಮುಸಿ ನಕ್ಕಿದ್ದಾರೆ.
ಕಾಂಗ್ರೆಸ್ ನಾಯಕರ ಕಳರಿ ಪಯಟ್ಟು ಕಸರತ್ತಿನ ವಿಡಿಯೋವನ್ನು ಕಾಂಗ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ವಿಶ್ವದ ಅತ್ಯಂತ ಹಳೇ ಮಾರ್ಷಲ್ ಆರ್ಟ್ಸ್ ಕಳರಿ ಪಟ್ಟು ಕೇರಳ ಮೂಲದದ್ದಾಗಿದೆ. ಕಾಲೇಜಿನ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಕಳರಿ ಪಟ್ಟುಗಳನ್ನು ಪ್ರಯತ್ನಿಸಿದ್ದರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ. ಈ ವಿಡಿಯೋಗೆ ಪರ ವಿರೋಧಗಳು ವ್ಯಕ್ತವಾಗಿದೆ. ರಾಹುಲ್ ಗಾಂಧಿ ಒಬ್ಬ ಜನ ನಾಯಕ ಎಂದು ಹಲವರು ಬಣ್ಣಿಸಿದ್ದಾರೆ. ಕೇರಳದಲ್ಲಿ ಕೇರಳದ ಕಳರಿ ಬಗ್ಗೆ ಗೌರವವಿಟ್ಟುಕೊಂಡಿದ್ದರೆ. ಪಟ್ಟುಗಳನ್ನು ಕಲಿಯುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ. ಇದೇ ವೇಳೆ ಹಲವರು ಇದನ್ನು ಕಳರಿ ಎಂದು ಹೇಳುತ್ತಾರಾ? ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ