ಬ್ರಿಟನ್ನಿನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿರುವ ರಾಹುಲ್ ಗಾಂಧಿ, ಭಾರತದ ಮೋದಿ ಸರ್ಕಾರದ ಕಾರ್ಯವಿಧಾನವನ್ನು ಒಂದೆಡೆ ಟೀಕಿಸಿದ್ದರೆ, ಇನ್ನೊಂದು ಕಡೆ ಭಾರತದ ವೈರಿದೇಶವಾದ ಚೀನಾವನ್ನು ‘ಸೂಪರ್ ಪವರ್’ ಎಂದು ಹೊಗಳಿದ್ದಾರೆ.
ಲಂಡನ್: ಬ್ರಿಟನ್ನಿನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿರುವ ರಾಹುಲ್ ಗಾಂಧಿ, ಭಾರತದ ಮೋದಿ ಸರ್ಕಾರದ ಕಾರ್ಯವಿಧಾನವನ್ನು ಒಂದೆಡೆ ಟೀಕಿಸಿದ್ದರೆ, ಇನ್ನೊಂದು ಕಡೆ ಭಾರತದ ವೈರಿದೇಶವಾದ ಚೀನಾವನ್ನು ‘ಸೂಪರ್ ಪವರ್’ ಹಾಗೂ ‘ಚೀನಾ: ಒಂದು ನೈಸರ್ಗಿಕ ಶಕ್ತಿ’ ಎಂದು ಹೊಗಳಿರುವುದು ವಿವಾದಕ್ಕೆ ಕಾರಣವಾಗಿದೆ. ರಾಹುಲ್ ನುಡಿಗಳನ್ನು ಬಿಜೆಪಿ ಬಲವಾಗಿ ಖಂಡಿಸಿದೆ.
ಕೇಂಬ್ರಿಜ್ ವಿವಿಯಲ್ಲಿ ವಿವಿಧ ವಿಷಯಗಳ ಮೇಲೆ ಮಾತನಾಡಿದ ರಾಹುಲ್, ‘ಅಮೆರಿಕನ್ನರು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಎಷ್ಟು ಗೌರವ ನೀಡುತ್ತಾರೋ ಅಷ್ಟೇ ಪ್ರಮಾಣದಲ್ಲಿ ಚೀನೀಯರು ಸೌಹಾರ್ದತೆಗೆ ಗೌರವ ನೀಡುತ್ತಾರೆ. ಚೀನಾದಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಷ್ಟು ಬೆಲೆಯಿಲ್ಲ. ಆದರೆ ಭೂಕಂಪ, ನಾಗರಿಕ ದಂಗೆಯಂಥ ಸವಾಲು ಎದುರಿಸಿರುವ ದೇಶದಲ್ಲಿ ಸೌಹಾರ್ದತೆಗೆ ಬೆಲೆ ನೀಡಲಾಗುತ್ತದೆ’ ಎಂದರು.
ದಾಖಲೆ ಸಮೇತ ರಾಹುಲ್ ಗಾಂಧಿ ಕೇಂಬ್ರಿಡ್ಜ್ ಭಾಷಣದ ಷಡ್ಯಂತ್ರ ಬಟಾ ಬಯಲು, ಕಾಂಗ್ರೆಸ್ ಕಂಗಾಲು!
ನಾನು ಚೀನಾ ಬಗ್ಗೆ ತಜ್ಞನಲ್ಲ. ಆದರೆ ಸಾಕಷ್ಟು ಓದಿದ್ದೇನೆ. ಅಲ್ಲಿನ ಬಗ್ಗೆ ತಕ್ಕ ಮಟ್ಟಿಗೆ ತಿಳಿದಿದ್ದೇನೆ ಹಾಗೂ ಕಮ್ಯುನಿಸ್ಟ್ ಪಕ್ಷ ಕಟ್ಟಿದ ಅಲ್ಲಿನ ನಾಯಕರ ಜತೆ ಮಾತನಾಡಿದ್ದೇನೆ. ಆ ನಾಯಕರು ನನಗೆ ಚೀನಾದ ಹಳದಿ ನದಿಯ (yellow river)ಬಗ್ಗೆ ಹೇಳಿದರು. ಆ ನದಿ ಸಾಕಷ್ಟುಇಂಧನ ಶಕ್ತಿಯನ್ನು ಹೊಂದಿದೆ. ಆ ನದಿಯನ್ನು ಸದ್ಬಳಕೆ ಮಾಡಿಕೊಳ್ಳದೇ ಹೋದರೆ ಚೀನಾ ಆಡಳಿತ ಸರಿಯಿಲ್ಲ ಎಂದರ್ಥ ಎಂದು ಅವರು ನನಗೆ ಹೇಳಿದರು. ಇಂಥ ವಿಭಿನ್ನ ಚಿಂತನೆಯನ್ನು ನಾನು ಯಾವ ರಾಜಕಾರಣಿಯಲ್ಲೂ ಕೇಳಿರಲಿಲ್ಲ. ಆ ನದಿಯ ನೈಸರ್ಗಿಕ ಸಂಪತ್ತನ್ನು ಸದ್ಬಳಕೆ ಮಾಡಿಕೊಂಡು ಚೀನಾ ಅವುಗಳಿಗೆ ರೂಪ ನೀಡಿದೆ ಎಂಬುದನ್ನು ನೋಡಿ. ಅದೇ ರೀತಿ ಬೆಲ್ಟ್ ಆ್ಯಂಡ್ ರೋಡ್ ಯೋಜನೆ (ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ನಿರ್ಮಿಸಿದ ರಸ್ತೆ). ನೈಸರ್ಗಿಕ ಸಂಪತ್ತಿಗೆ ರೂಪು ನೀಡುವಲ್ಲಿ ಚೀನಾ (China) ಎತ್ತಿದ ಕೈ’ ಎಂದರು.
ಕಾಂಗ್ರೆಸ್ ಚೀನಾ ಭಾಯಿ: ಬಿಜೆಪಿ ಚಾಟಿ
ಕಾಂಗ್ರೆಸ್ಸಿಗ ರಾಹುಲ್ ಗಾಂಧಿ (Rahul Gandhi) ಅವರ ಚೀನಾ ಹೊಗಳಿಕೆಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ವಕ್ತಾರ ಅಮಿತ್ ಮಾಳವೀಯ, ‘ಕಾಂಗ್ರೆಸ್-ಚೀನಾ ಭಾಯಿ ಭಾಯಿ’ ಎಂದು ಟೀಕಿಸಿದೆ. ‘ರಾಹುಲ್ ಲಜ್ಜೆಗೆಟ್ಟ ರೀತಿ ಚೀನಾದ ಸರ್ವಾಧಿಕಾರ ಸಮರ್ಥಿಸುತ್ತಾರೆ. ಚೀನಾ ಸಾಮಾಜಿಕ ಸಾಮರಸ್ಯ ಗೌರವಿಸುತ್ತದೆ ಎಂದು ಅವರು ಹೇಳಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಕೆಂಬ್ರಿಜ್‌ನಲ್ಲಿ ಕುಳಿತು ದೇಶದ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದ ರಾಹುಲ್ ಗಾಂಧಿ!
ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಚುನಾವಣಾ ಸೋಲುಗಳನ್ನು ರಾಹುಲ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿದೇಶಿ ನೆಲದಲ್ಲಿ ನಿಂತು ಭಾರತಕ್ಕೆ ಮಸಿ ಬಳಿಯುತ್ತಿದ್ದಾರೆ. ಪೆಗಾಸಸ್ ವಿವಾದವನ್ನು ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್ (Supreme Court)ಸಮಿತಿಗೆ ತಮ್ಮ ಮೊಬೈಲ್ ನೀಡುವುದಕ್ಕೆ ರಾಹುಲ್ ಹಾಗೂ ಕಾಂಗ್ರೆಸ್ ನಾಯಕರನ್ನು(Congress leaders) ತಡೆದವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ